ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ – ಉಪನ್ಯಾಸಕ ಆಯ್.ವ್ಹಿ.ರೋಡಗಿ.

ಇಂಡಿ ಮಾರ್ಚ್.22

ಭೂಮಿಯಲ್ಲಿರುವ ಸಕಲ ಜೀವ ರಾಶಿಗಳಿಗೂ ನೀರು ಅಗತ್ಯವಾಗಿಬೇಕು. ಆದರೆ ಮನುಷ್ಯನು ನೀರನ್ನು ಬಳಸುವ ಪ್ರಮಾಣವು ಮಾತ್ರ ಹೆಚ್ಚಾಗಿರುತ್ತದೆ. ಕುಡಿಯುವುದರಿಂದ ಹಿಡಿದು ದೈನಂದಿನ ಚಟುವಟಿಕೆಗಳಿಗೆ ನೀರಿನ ಬಳಕೆಯು ಹೆಚ್ಚಿದೆ. ನೀರಿನ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ನಗರ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯು ಕಾಡುತ್ತಿದೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ನೀರನ್ನು ಉಳಿತಾಯ ಮಾಡಲು ಈ ಕೆಲವು ಟಿಪ್ಸ್ ಗಳನ್ನು ಪಾಲಿಸುವುದು ಉತ್ತಮ ಎಂದು ರಸಾಯನಶಾಸ್ತ್ರ ಉಪನ್ಯಾಸಕರು, ಎಸ್.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ತಾಳಿಕೋಟೆಯ ಆಯ್.ವ್ಹಿ.ರೋಡಗಿ ಹೇಳಿದರು. ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗದ ಅಡಿಯಲ್ಲಿ “ವಿಶ್ವ ಜಲ ದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಎಸ್.ಬಿ.ಜಾಧವ ಮಾತನಾಡಿ ಬೇಸಿಗೆಕಾಲ ಆರಂಭವಾಗುತ್ತಿದ್ದಂತೆ ನೀರಿನ ಹಾಹಾಕಾರ ಕಾಣಿಸಿ ಕೊಳ್ಳುತ್ತವೆ. ದೈನಂದಿನ ಚಟುವಟಿಕೆಗಳಿಗೆ ಬಿಡಿ, ಕುಡಿಯುವುದಕ್ಕೂ ನೀರು ಇರುವುದಿಲ್ಲ. ಕಾಡಿನ ನಾಶದಿಂದ ಸರಿಯಾದ ಸಮಯಕ್ಕೆ ಮಳೆ ಬಾರದೆ ಹಳ್ಳ, ಕೊಳ್ಳ, ನದಿ ಸೇರಿದಂತೆ ಅದೆಷ್ಟೋ ಸಿಹಿ ನೀರಿನ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಸೃಷ್ಟಿಯಲ್ಲಿರುವ ಸಕಲ ಜೀವರಾಶಿಗಳಿಗೂ ಕುಡಿಯಲು ನೀರಿಲ್ಲ. ನೀರನ್ನು ಮಿತವಾಗಿ ಬಳಸುವವರು ಕೆಲವೇ ಕೆಲವು ಜನರಷ್ಟೆ , ಹೀಗಾಗಿ ನೀರಿನ ಬಳಕೆಯಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಂಡು ನೀರನ್ನು ಉಳಿತಾಯ ಮಾಡುವುದು ಕಷ್ಟವೆನಲ್ಲ ಎಂದರು. ಉಪನ್ಯಾಸಕಿ ಶೃತಿ ಬಿರಾದಾರ, ಉಪನ್ಯಾಸಕ ಪರಶುರಾಮ ಅಜಮನಿ, ಉಪನ್ಯಾಸಕಿ ಶೃತಿ ಪಾಟೀಲ ಮಾತನಾಡಿದರು.ಡಾ.ವಿಶ್ವಾಸ ಕೊರವಾರ, ಡಾ.ಸುರೆಂದ್ರ ಕೆ, ಡಾ.ಸಿ.ಎಸ್.ಬಿರಾದಾರ, ಡಾ.ಶ್ರೀಕಾಂತ ರಾಠೋಡ, ಮಲ್ಲಿಕಾರ್ಜುನ ಕೋಣದೆ, ಆರ್.ಪಿ.ಇಂಗನಾಳ, ಪಂಕಜ ಕುಲಕರ್ಣಿ, ಬಲರಾಮ ವಡ್ಡರ ಮತ್ತಿತರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ. ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button