ಧರ್ಮಗಳು ಪರಮಾತ್ಮನ ಜ್ಯೋತಿಯ ರೂಪ-ಆತ್ಮದ ಜೊತೆ ಅನುಸಂಧಾನ ಹೊಂದಬೇಕು.
ಹುನಗುಂದ ಆಗಷ್ಟ.28
ಎಲ್ಲ ಧರ್ಮಗಳು ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತವೆ.ಅಂತಹ ಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಬೇಕು. ಇಂಥಹ ಆಂತರಿಕ ಶಕ್ತಿಯು ಧ್ಯಾನದಿಂದ ಬರುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿಣಿ ಜಯಕ್ಕ ಹೇಳಿದರು.ಪಟ್ಟಣದಲ್ಲಿರುವ ವಿಶ್ವವಿದ್ಯಾಲಯದ ಶಿವ ಸ್ಮೃತಿ ಭವನದಲ್ಲಿ ಭಾನುವಾರ ಮಾದ್ಯಮ ಮಿತ್ರರಿಗೆ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಾತನಾಡಿದ ಅವರು ರಕ್ಷಾಬಂಧನವನ್ನು ನಮ್ಮ ವಿದ್ಯಾಲಯದಿಂದ ನಿರಂತರ ಒಂದು ತಿಂಗಳು ಕಾಲ ಸರ್ಕಾರಿ ಕಚೇರಿ ಸೇರಿದಂತೆ ಅನೇಕ ಸಹೋದರರಗೆ ಕಟ್ಟುತ್ತವೆ.ರಕ್ಷಾ ಬಂಧನ ಕೇವಲ ಸಹೋದರಿಯನ್ನು ಸಹೋದರ ರಕ್ಷಣೆಯ ಸಂಕೇತವಲ್ಲ ಪ್ರತಿಯೊಂದು ಜೀವಿಗಳಿಗೂ ಶಿವನ ರಕ್ಷಣೆ ಅವಶ್ಯವೆಂಬುವದರ ಸಂಕೇತವಾಗಿದೆ.

ಇಲ್ಲಿ ಸಹೋದರಿ ಸಹೋದರನಿಗೆ ರಕ್ಷಾ ಬಂಧನ ಕಟ್ಟಿದಾಗ ವಿಶೇಷ ಉಡುಗೊರೆಯನ್ನು ನೀಡುತ್ತಾರೆ ಆದರೇ ನಾವು ದುಶ್ಚಟಗಳ,ದುರ್ನಡತೆಯನ್ನು ಕೈಬಿಡುವ ಉಡುಗೊರೆ ಕೇಳುತ್ತೇವೆ.ಇಲ್ಲಿ ಯಾವದೇ ಜಾತಿ,ಧರ್ಮ,ಲಿಂಗ ಬೇಧಗಳಿಲ್ಲ ಎಲ್ಲರು ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದರು.ಪತ್ರಕರ್ತ ಮಲ್ಲಿಕಾರ್ಜುನ ಹೊಸಮನಿ ಮಾತನಾಡಿ ಮನಸ್ಸು ನಮ್ಮ ಹಿಡಿತದಲ್ಲಿ ಇಲ್ಲದಿದ್ದಾಗ ನಮ್ಮ ಸಂಸಾರದ ಜಂಜಾಟ ಪ್ರಾರಂಭವಾಗುತ್ತವೆ.ಆತ್ಮ ಶುದ್ದಿಗಾಗಿ ಶಿವನ ಜ್ಞಾನ ಮುಖ್ಯ.ಮನಸ್ಸ ಶಾಂತಿ ಮತ್ತು ಆಧ್ಯಾತ್ಮದ ವಿಚಾರಗಳು ಸಿಗುವ ಒಂದೇ ಒಂದು ಸ್ಥಳ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಮಾತ್ರ.ಆಧ್ಯಾತ್ಮದ ಜ್ಞಾನ ಸಿಕ್ಕಾಗ ನಮ್ಮಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ತುಂಬುತ್ತದೆ.ಮೇಲು–ಕೀಳು ಭಾವನೆಗಳು ನಮ್ಮಿಂದ ಹೊರ ಹೋದಾಗ ಮಾತ್ರ ನಾವೆಲ್ಲ ಮಾನವರಾಗಲು ಸಾಧ್ಯ ಎಂದರು.ಈ ಸಂದರ್ಭದಲ್ಲಿ ಕಾನಿಪ ಅಧ್ಯಕ್ಷ ಮಹಾಂತೇಶ ಪಾಟೀಲ,ಪತ್ರಕರ್ತರಾದ ಮಹಾಂತೇಶ ತೋಪಲಕಟ್ಟಿ,ಸಂಗಮೇಶ ಹೂಗಾರ,ಎಫ್.ಎಂ.ಪಿಂಜಾರ,ದೇವು ಕುರಿ,ಐ.ಬಿ. ಅಂಗಡಿ, ಬಿ.ಎಚ್ ಹಳಪೇಟಿ, ಬಸಯ್ಯ ಹಿರೇಮಠ, ಶಂಭು ಹಳಪೇಟಿ, ಸುನಂದಾ ಹಳಪೇಟಿ, ಶಾಂತಾ ಅಂಗಡಿ, ಮಹಾಂತಮ್ಮ ಗಾಣಗೇರ, ನೀಲಮ್ಮ ಹೊಳಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ