ನರೇಗಾ ಯೋಜನೆ ಜಾರಿಗೆ ಬಂದ ದಿನ ಸಂಭ್ರಮದ ಆಚರಣೆ.
ತೂಲಹಳ್ಳಿ ಫೆಬ್ರುವರಿ.2

ನರೇಗಾ ಕೂಲಿಯ ಫೆಬ್ರವರಿ 2.ನೇ ತಾರೀಕು ಕಾರ್ಮಿಕರ, ಅದರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗಾಗಿ ಕೆಲಸ ಮಾಡುವ ಪ್ರತಿಯೊಬ್ಬರು ಈ ದಿನವನ್ನು ಎಂದು ಮರೆಯಲಾಗದ ದಿನವಾಗಿದೆ. ಏಕೆಂದರೆ ಫೆಬ್ರವರಿ ಎರಡು 2006 ರಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಗೊಂಡ ದಿನವಾಗಿದೆ. ನರೇಗಾ ಯೋಜನೆ ಎಷ್ಟೋ ಕುಟುಂಬಗಳಿಗೆ ದಾರಿ ದೀಪವಾಗಿದೆ ಎಂದರೆ ತಪ್ಪಾಗಲಾರದು. ಈ ದಿನ ನರೇಗಾ ಕೂಲಿ ಕಾರ್ಮಿಕರು ಸ್ಮರಿಸಲೇ ಬೇಕಾದ ದಿನ,

ಈ ದಿನವನ್ನು ಸ್ಮರಿಸಿ ಹಬ್ಬದಂತೆ ಆಚರಿಸುವ ಎಲ್ಲಾ ಕೂಲಿ ಕಾರ್ಮಿಕರು ಹಾಗೂ ಅಧಿಕಾರಿಗಳಿಗೆ ನಮ್ಮ ಮಾಧ್ಯಮ ಒಂದು ‘ಹ್ಯಾಟ್ಸ್ ಅಫ್’ ಹೇಳಿ ಬಿಡೋಣ! ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಉಜ್ಜಿನಿ ಕೆರೆಯಲ್ಲಿ ಪಿಡಿಓ ಪ್ರಶಾಂತ್ ಕುಮಾರ್ ನರೇಗಾ ಮಹಿಳಾ ಕೂಲಿ ಕಾರ್ಮಿಕರ ಜೊತೆ ಸೇರಿ ಕೇಕ್ ಕಟ್ ಮಾಡುವುದರ ಮೂಲಕ ನರೇಗಾ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ರೋಜಗಾರ್ ದಿನಾಚರಣೆಯ ಅಭಿಯಾನ ಕಾರ್ಯಕ್ರಮ ನಡೆಸಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪಿಡಿಒ ಪ್ರಶಾಂತ್ ಕುಮಾರ್ ರವರು ಇದುವರೆಗೂ ನಮಗೆ ಎಲ್ಲಾ ಕೂಲಿ ಕಾರ್ಮಿಕರು ಸಹಕಾರ ನೀಡಿ ನರೇಗಾ ಯೋಜನೆ ಕೆಲಸವನ್ನು ನಾನು ಬಂದು ಒಂದು ವರ್ಷದವರೆಗೆ ಸರಿಯಾಗಿ ಬಳಕೆ ಮಾಡಿ ಕೊಂಡು ನೆರವೇರಿಸಿರುವ ಕೂಲಿಕಾರ್ಮಿಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಕೂಲಿ ಕಾರ್ಮಿಕರ ಹಣ ಸಮಯಕ್ಕೆ ಸರಿಯಾಗಿ ಬೀಳುತ್ತಿದ್ದು ಕೆಲವೊಂದು ಸರಿ ತಾಂತ್ರಿಕ ದೋಷದಿಂದ ಹಾಗೂ ಸರ್ಕಾರ ಹಣ ಬಿಡುಗಡೆ ಮಾಡುವ ತಡ ವಾಗಿರುವುದರಿಂದ ಹಣ ಬಂದಿರುವುದು ತಡವಾಗಿರುತ್ತದೆ ಇದನ್ನು ಅಧಿಕಾರಿಗಳ ಜೊತೆ ಮಾತನಾಡಿ ಸರಿ ಪಡಿಸುತ್ತೇವೆ.ಈ ಸಂದರ್ಭದಲ್ಲಿ ಹೆಚ್ ನಾಗರಾಜ್ ಡಾಟಾ ಕಂಪ್ಯೂಟರ್ ಆಪರೇಟರ್ ಚಂದ್ರಶೇಖರ್ ಟಿಎಇ ದಾನಪ್ಪ ಬಿ ಎಫ್ ಟಿ ನಿವೇದಿತಾ ಜಿಕೆಎಂ ಮತ್ತು ಕಾಯಕ ಬಂದುಗಳು ಹಾಗೂ ಕೂಲಿ ಕಾರ್ಮಿಕರು ಸೇರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿಕೊಟ್ಟೂರು