“ಶಾಂತತೆಯ ನಗುವ ಜೀವನ ಸುಯೋಗ”…..

“ಓಂ”ಮಂತ್ರ ಮನ ಪರಿಶುದ್ಧತೆ
ಪವಿತ್ರ ಪಂಚಲೋಹದ
ಘಂಟಾನಾದದಿ ಋಣಾತ್ಮಕ
ದಾನವ ಶಕ್ತಿ ಕುಂದಿಸಿ ಮಾನವನ
ಧನಾತ್ಮಕ ದೈವಿ ಕೃಪೆ ವೃದ್ಧಿಸು
ವಪರಿಶುದ್ಧ ಓಂ ಉಚ್ಛಾರಣೆ
ನಿಜ ಬ್ರಹ್ಮಾಂಡದ ಶಕ್ತಿ
ಶ್ರೀ ಸದಾ ಶುಭಕರ ಶ್ರೀಕರ
ನಮ: ಕಾಮಕ್ರೋದ
ಲೋಭ ಮೋಹ ಮದ ಮಾತ್ಸರ್ಯ
ಅರಿಷಡ್ವರ್ಗ ಅಹಂ ಅಳಿದು
ಅನಂತ ಶಕ್ತಿಗೆ ಶಿರಬಾಗಿದವಗೆ
ಬ್ರಹ್ಮಾಂಡ ಸೃಷ್ಠಿಯ ಅಗಮ್ಯ
ಅಘೋಚರ ಸೃಷ್ಠಿಯ ಪಂಚಭೂತ
ಪೃಥ್ವಿ ಗಗನ ಉಸಿರು ಉದಕ
ಅಗ್ನಿ ಮಾನವನಲ್ಲಿ ಅಡಕ
ಬ್ರಹ್ಮ ವಿಷ್ಣು ಮಹೇಶ್ವರ ಸಾಕ್ಷಾತ್
ವರಪ್ರದಾಯ
ಶಿವನ ಸ್ಮರಣೆ ಜೀವನ ಪಾವನ
“ಓಂ ನಮಃ ಶಿವಾಯ” ಪಂಚಾಕ್ಷರ
ಪಠಣ ಜೀವನ ಶುಭದಾಯಕ ಸೃಷ್ಠಿಸಿದ
ದೇವನ ಸ್ಮರಸಿ ಪಂಚಭೂತಗಳ
ಅಂತರಾತ್ಮ ಏಕಾಂತಯೋಗದಿ
ಶಾಂತತೆಯ ನಗುವ ಜೀವನ ಸುಯೋಗ”

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.