ಹೊಸಪೇಟೆಯ ಶ್ರೀಭುವನೇಶ್ವರಿ ದೇವಿ ವೃತ್ತ ನಿರ್ಮಿಸುವಂತೆ ಕನ್ನಡಪರ ಸಂಘಟನೆಗಳು ಮನವಿ ಪಾತ್ರವನ್ನು ಸಲ್ಲಿಸಿದರು.
ಹೊಸಪೇಟೆ ಜುಲೈ.18

ವಿಜಯನಗರ ಸಾಮ್ರಾಜ್ಯ ಕರ್ನಾಟಕದ ಶ್ರೇಷ್ಠ ಸಾಮ್ರಾಜ್ಯವಾಗಿದ್ದು ಕನ್ನಡಾಂಭ ಶ್ರೀ ಭುವನೇಶ್ವರಿ ದೇವಿ ಕರ್ನಾಟಕದ ಮೂಲ ವಾಸಸ್ಥಾನ ಹಂಪಿಯಲ್ಲಿ ಇರುವದರಿಂದ ಈ ಭಾಗದ ಕನ್ನಡಗಿರ ಆರಾಧ್ಯ ದೈವವಾಗಿರುವುದರಿಂದ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಡ್ಯಾಂ ರಸ್ತೆಯಲ್ಲಿ ಬರುವ ಶ್ರೀ ಸಾಯಿಬಾಬಾ ದೇವಸ್ಥಾನದ ಹತ್ತಿರ ನಾಲ್ಕು ಮುಖ್ಯ ರಸ್ತೆಗಳು ಸೇರುವ ಸ್ಥಳದಲ್ಲಿ ನಮ್ಮ ಹೆಮ್ಮೆಯ ಕನ್ನಡಿಗರ ತಾಯಿ ಆಗಿರುವ ಶ್ರೀ ಭುವನೇಶ್ವರಿ ದೇವಿ ವೃತ್ತ ನಿರ್ಮಿಸಿ ಕಾನೂನಾತ್ಮಕವಾಗಿ ನಾಮಕರಣ ಮಾಡಬೇಕೆಂದು ತಮ್ಮಲ್ಲೇರ ಈ ಮೂಲಕ ಎಲ್ಲಾ ಕನ್ನಡಪರ ಹೋರಾಟಗಾರರು, ಕನ್ನಡಪರ ಸಂಘಟನೆಗಳು, ಕನ್ನಡದ ಮನಸ್ಸುಗಳು, ಕನ್ನಡ ರೈತ ಸಂಘಟನೆಗಳ ಒತ್ತಾಸೆ ಆಗಿದ್ದು, ಆದಕಾರಣ ದಯವಿಟ್ಟು ಕನ್ನಡ ಮಾತೆಯ ವೃತ್ತವೆಂದು ನಾಮಕರಣ ಮಾಡಲು ಅನುಮತಿ ನೀಡಬೇಕೆಂದು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ.ತಾರಿಹಳ್ಳಿ ಹನುಮಂತಪ್ಪ,ಸಂಣ್ಮುಖ ಪಿ ,ಕೆ.ಎಸ್ ಬಸವರಾಜ್ ,ರಾಜು ಗುಜ್ಜಲ್ ,ಕಿಚಿಡಿ ವಿಶ್ವನಾಥ್ ,ಶಶಿಧರ್.ಎಮ್ಜಗದೀಶ್ಕಮಾಟಿಗಿ ,ಎ ಹೊನ್ನೂರಸ್ವಾಮಿ ,ಈ ಸಂಘನೆಯ ಎಲ್ಲಾ ಜಿಲ್ಲಾಧ್ಯಕ್ಷರು ಪದಾಧಿಕಾರಿಗಳು ಸೇರಿ ಮನವಿ ಪತ್ರವನ್ನು ಸಲ್ಲಿಸಿದರು.
ತಾಲೂಕ ವರದಿಗಾರರು:ಮಾಲತೇಶ.ಶೆಟ್ಟರ್. ಹೊಸಪೇಟೆ