ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ – ರಸ ಪ್ರಶ್ನೆ ಕಾರ್ಯಕ್ರಮ ಆಯೋಜನೆ.
ರೂಡಗಿ ಆ.29





ಮುದ್ದೇಬಿಹಾಳ ತಾಲ್ಲೂಕಿನ ರೂಡಗಿ ಗ್ರಾಮದಲ್ಲಿ ಗಜಾನನೋತ್ಸವದ ಅಂಗವಾಗಿ ಬಸ್ ಸ್ಟಾಪ್ ಹತ್ತಿರದ ಶ್ರೀ ವಿಜಯ ಗಜಾನನ ಯುವಕ ಮಂಡಳಿ ವತಿಯಿಂದ ಆಗಷ್ಟ 30 ಶನಿವಾರ ದಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭಿಸಲಾಗುವುದು. ಒಂದನೇ ಬಹುಮಾನ 5001, ಎರಡನೇ ಬಹುಮಾನ 4001, ಮೂರನೇ ಬಹುಮಾನ 3001, ನಾಲ್ಕನೇ 2001, ಐದನೇ 1001, ಆರನೇ ಬಹುಮಾನ 501 ರೂಪಾಯಿ ನೀಡಲಾಗುವುದು. ಭಾಗವಹಿಸುವ ತಂಡಗಳು 30 ನೇ. ತಾರೀಖಿನೊಳಗೆ ಹೆಸರು ನೊಂದಾಯಿಸ ಬೇಕು. ಒಂದು ತಂಡದಲ್ಲಿ ಮೂರು ಜನರಿಗೆ ಮಾತ್ರ. ಕಡ್ಡಾಯವಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ. ಕನ್ನಡ, ಸಾಹಿತ್ಯ, ಸಮಾಜ ವಿಜ್ಞಾನ, ಪ್ರಚಲಿತ ಘಟನೆ, ಕ್ರೀಡೆ, ರಾಜಕೀಯ, ಗುರುತಿಸುವಿಕೆ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ನಡೆಸಲಾಗುವುದು. ಸರ್ವ ಧರ್ಮದ ಸ್ತ್ರೀ, ಪುರುಷರಿಗೆ ಮುಕ್ತ ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ 9902454057, 9606660089 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಕಮಿಟಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಜಿ.ಎನ್ ಬೀರಗೊಂಡ (ಮುತ್ತು) ಮುದ್ದೇಬಿಹಾಳ