ಕಟ್ಟಕಡೆಯ ವ್ಯಕ್ತಿಗೂ ಸಹ ಭಾರತದ ಸಂವಿಧಾನದ ಮೂಲಕ ಸಮಾನತ ಕೊಟ್ಟಂತಹ ವಿಶ್ವಜ್ಞಾನಿ ಡಾ. ಬಿ. ಆರ್. ಅಂಬೇಡ್ಕರ್-ಹೆಚ್.ದುರ್ಗಪ್ಪ
ಕೂಡ್ಲಿಗಿ ಏ.14

ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಕಾನಾಮಡುಗೂ ಗ್ರಾಮದಲ್ಲಿ ಇಂದು ಭಾರತ ರತ್ನ ಸಂವಿಧಾನಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿಯ ಪ್ರಯುಕ್ತವಾಗಿ ಖಾನಾ ಮಡಗು ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಹೆಚ್. ದುರ್ಗಪ್ಪ ಇವರು ಖಾನಾಮಡಗು ಗ್ರಾಮದಲ್ಲಿ ಜಯಂತಿ ಪ್ರಯುಕ್ತವಾಗಿ ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರರವರ ವಿಚಾರಗಳನ್ನು ತಿಳಿಸವುದರೊಂದಿಗೆ ಮತ್ತು ಈ ಸಂದರ್ಭದಲ್ಲಿ ದಲಿತ ಮುಖಂಡರುಗಳು ಗ್ರಾಮದಲ್ಲಿ ಇರುವಂತಹ ನಾಮಫಲಕಗಳಾದ ಶ್ರೀ ಸಂಗೊಳ್ಳಿ ರಾಯಣ್ಣ

,ಶ್ರೀಕನಕದಾಸರು, ಶ್ರೀ ವಾಲ್ಮೀಕಿ ಮಹರ್ಷಿ ,ಹಾಗೂ ಶ್ರೀ ಬಸವೇಶ್ವರ ರವರ ಗ್ರಾಮದ ಎಲ್ಲಾ ಇತಿಹಾಸ ಪುರುಷರ ಎಲ್ಲಾ ನಾಮಫಲಕಗಳಿಗೆ ತೆಂಗಿನ ಗರಿ ಹಾಗೂ ಬಾಳೆದಿಂಡನ ಮೂಲಕ ಅಲಂಕರಿಸಿ ಹೂವಿನ ಹಾರಗಳನ್ನು ಹಾಕುವುದರ ಮೂಲಕ ಡಾ. ಬಿಆರ್ ಅಂಬೇಡ್ಕರ್ ಜಯಂತಿಯನ್ನು ಹಿರಿಯರು ಮಹಿಳೆಯರು ಯುವಕರುಗಳು ಹಾಗೂ ಊರಿನ ಗ್ರಾಮಸ್ಥರು ಸೇರಿ ಸರಳವಾಗಿ ಜಯಂತೋತ್ಸವವನ್ನು ಆಚರಿಸಿದರು. ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಘಟನಾ ಸಂಚಾಲಕರಾದ ಎನ್ ಫಕೀರಪ್ಪ ,ಗ್ರಾಮ ಘಟಕ ಸಂಚಾಲಕರಾದ ಹೆಚ್, ದಂಡೆಪ್ಪ ಗ್ರಾಮ ಘಟಕದ ಖಜಾಂಚಿಯಾದ ಡಿ .ಮೈಲಪ್ಪ ದಲಿತ ಮುಖಂಡರಾದ ಚೌಡಪ್ಪ ಮೈಲಾರಪ್ಪ ,ಅಜ್ಜಪ್ಪ ಮಹಾಂತೇಶ, ಎಂ. ಲಕ್ಷ್ಮಮ್ಮ, ನಾಗರಾಜ ,ಕೇಶವಮೂರ್ತಿ, ಇನ್ನು ಮುಂತಾದ ದಲಿತ ಮುಖಂಡರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನೆ ಕೂಡ್ಲಿಗಿ