ಡಾ, ಬಿ.ಆರ್ ಅಂಬೇಡ್ಕರ್ ಅವರ 69 ನೇ. – ಮಹಾಪರಿ ನಿರ್ವಾಣ ಕಾರ್ಯಕ್ರಮ ಜರುಗಿತು.
ಕಾನ ಹೊಸಹಳ್ಳಿ ಡಿ.08

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳಿಂದ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮೇಣದ ಬತ್ತಿಗಳ ದೀಪಗಳನ್ನು ಹಚ್ಚಿ ಬಿ.ಆರ್ ಅಂಬೇಡ್ಕರ್ ಅವರ 69 ನೇ. ಮಹಾಪರಿ ನಿರ್ವಾಣ ಣಕಾರ್ಯಕ್ರಮವನ್ನು ಆಚರಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಬಿ.ಟಿ ಗುದ್ದಿ ದುರುಗೇ ಶ್ ಅವರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿ ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಬದುಕುವ ಮೂಲಕ ಆ ಮಹಾ ಚೇತನಕ್ಕೆ ಗೌರವ ಸಲ್ಲಿಸಬೇಕು. ಅಂಬೇಡ್ಕರ್ ಅವರ ಬದುಕು ಬರಹ ಜೀವನಾ ದರ್ಶ ಮೌಲ್ಯಗಳು ಹಾಗೂ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಅರಿತು ಕೊಳ್ಳುವುದರ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಹಾಗೂ ಕರ್ತವ್ಯ ಕೂಡ ಆಗಿದೆ ಎಂದರು.
ತಾಲೂಕು ಸಂಚಾಲಕ ಎಳೆನೀರು ಗಂಗಾಧರ ಮಾತನಾಡಿ ಈ ದೇಶದ ಪ್ರಜೆಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿರುವ ಏಕೈಕ ಶಕ್ತಿ ಯಾವುದಾದರೂ ಇದ್ದರೆ ಅದು ಸಂವಿಧಾನ ಅಂತಹ ವಿಶ್ವ ಶ್ರೇಷ್ಠ ಸಂವಿಧಾನವನ್ನು ಕೊಟ್ಟ ಬಿ.ಆರ್ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಹೊನ್ನೂರ ಸ್ವಾಮಿ, ಎಂ ಬಸವರಾಜ, ನೀರುಗಂಟಿ ಸುರೇಶ್ ಮತ್ತು ತಿಪ್ಪೇಸ್ವಾಮಿ,ಎಸ್ ಎಮ್ ಮಂಜುನಾಥ್, ಎಸ್ ನಾಗರಾಜ್, ಅಜ್ಜಯ್ಯ, ಶ್ರೀಧರ, ವಕೀಲರು, ಮಲ್ಲೇಶ್, ಸಣ್ಣ ನಾಗಪ್ಪ ಎಸ್ ಎಂ ಚೌಡಪ್ಪ ಶಿವಕುಮಾರ್, ಸೇರಿದಂತೆ ದಲಿತ ಮುಖಂಡರು, ಯುವಕರು, ಗ್ರಾಮಸ್ಥರು ಜನ ಪ್ರತಿನಿಧಿಗಳು ಸಾರ್ವಜನಿಕರು ಇದ್ದರು.
ಹೋಬಳಿ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ. ಹೊಸಹಳ್ಳಿ

