ಜೋಕುಮಾರಸ್ವಾಮಿ ವಿಶೇಷ ಹಬ್ಬ.
ಕೆ. ಹೊಸಹಳ್ಳಿ ಸ.14
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಪ್ರತಿ ವರ್ಷ ಗಣೇಶ ಹಬ್ಬದ ನಂತರ ಬರುವ ಜೋಕುಮಾರಸ್ವಾಮಿಯ ಹಬ್ಬ ಈ ಹಬ್ಬಕ್ಕೆ ವಿಶೇಷ ಹಿನ್ನೆಲೆ ಇದ್ದು ಭೂಲೋಕದ ಯೋಗಕ್ಷೇಮ ತಿಳಿಯಲು ಪಾರ್ವತಿ ಪರಮೇಶ್ವರರು ಗಣೇಶನನ್ನು ಕಳಿಸುತ್ತಾರೆ. ಭೂಲೋಕಕ್ಕೆ ಬಂದ ಗಣೇಶನನ್ನು ಇಲ್ಲಿನ ಜನ ಮನಸಾರೆ ಭಕ್ತಿಭಾವ ಪೂಜೆ-ಪುನಸ್ಕಾರ ಹಲವು ಬಗೆಯ ಸಿಹಿ ಗದ್ದೆಗಳನ್ನು ನೈವೇದ್ಯಗಳು ಒಂದಿಗೆ ವಿಜ್ರಂಭಣೆಯಿಂದ ಮೆರವಣಿಗೆ ಮಾಡಿ ಕಳಿಸುತ್ತಾರೆ. ಭೂಮಿಗೆ ಬಂದ ವಿನಾಯಕ. ಕೈಲಾಸಕ್ಕೆ ಹೋದ ಗಣೇಶ ಭೂಲೋಕದಲ್ಲಿ ಭಕ್ತರಿಗೆಲ್ಲ ಸಂತೃಪ್ತರಾಗಿದ್ದಾರೆ ಎನ್ನುತ್ತಾನೆ. ಪುನಃ ಜೋಕುಮಾರಸ್ವಾಮಿಯನ್ನು ಭೂಲೋಕದ ಜನರು ಯೋಗಕ್ಷೇಮ ತಿಳಿಯಲು ಪಾರ್ವತಿ ಪರಮೇಶ್ವರರನ್ನು ಕಳಿಸುತ್ತಾರೆ.

ಭೂಲೋಕಕ್ಕೆ ಬಂದ ಜೋಕುಮಾರಸ್ವಾಮಿ ಮಳೆ ಬೆಳೆಯಿಲ್ಲದೆ ಬರಡಾದ ಭೂಮಿ ಜನ ಜೀವನ ಅಸ್ತವ್ಯಸ್ತವಾಗಿದ್ದನ್ನು ಕಾಣುತ್ತಾನೆ. ಇದನ್ನು ನೋಡಲಾಗದ ಜೋಕುಮಾರಸ್ವಾಮಿ ತನ್ನ ನಿಲುವಂಗಿಯನ್ನು ಆಕಾಶದತ್ತ ಚಾಚಿದ ಬಳಿಕ ಮೋಡ ಮಳೆಯಾಗಿ ಸುರಿಯುತ್ತದೆ.ಭೂಮಿಯಲ್ಲೆಲ್ಲಾ ಹಸಿರಾಗಿ. ಭೂಮಿ ಹಸನಾಗಿ ಬೆಳೆಯು ಸಮೃದ್ಧಿ ಆಯಿತು. ಜನರು ಕಷ್ಟಗಳೆಲ್ಲ ಕಳೆದು ಕೈಲಾಸಕ್ಕೆ ಹಿಂತಿರುಗುವ ವರದಿ ಒಪ್ಪಿಸುತ್ತಾನೆ ಎಂಬ ನಂಬಿಕೆ ಇದೆ.ಸ್ತ್ರೀ ಮೋಹ. ಇನ್ನು ಜೋಕುಮಾರಸ್ವಾಮಿ ಇಲ್ಲಿಗೆ ಬಂದಾಗ ಭೂಲೋಕದ ಸ್ತ್ರೀಯರನ್ನು ಮೋಹಿಸಿದ್ದು. ಅವಳ ತಂದೆ ಜೋಕುಮಾರ ಸ್ವಾಮಿಯ ತಲೆಯನ್ನು ಕತ್ತರಿಸಿ. ನದಿಗೆ ಬಿಸಾಡುತ್ತಾನೆ. ತಲೆ ಬೆಸ್ತನಿಗೆ ಸಿಕ್ಕು ಭೂಮಿಗೆ ಮಳೆ ಬರಿಸಿ ಕಷ್ಟವನ್ನು ನಿವಾರಿಸಿ ಜೋಕುಮಾರಸ್ವಾಮಿ ತಲೆ ತಂದು ಪೂಜೆ ಸಲ್ಲಿಸುತ್ತಾರೆ. ಜಾನಪದ ಹಾಡು ಕಥೆ ಮೂಲಕ ಜೋಕುಮಾರಸ್ವಾಮಿ ಹಬ್ಬದ ಹಿನ್ನೆಲೆಯಲ್ಲಿ ತಿಳಿಸಲಾಗಿದೆ.ಹೀಗೆ ತಳವಾರ. ಬೆಸ್ತ. ಅಂಬಿಗ. ಗಂಗಾಮತಸ್ಥ ಸೇರಿ ಹಲವು ಸಮುದಾಯಗಳು ಭಾದ್ರಪದ ಮಾಸದ ಅಷ್ಟಮಿ ತಿಥಿಯಂದು ಜೋಕುಮಾರ ತಲೆಯನ್ನು ಹುತ್ತದ ಮಣ್ಣು ಹಾಗೂ ಎಣ್ಣೆಯಿಂದ ತಲೆಯ ಮೂರ್ತಿ ಮಾಡಿ ಬುಟ್ಟಿಯಲ್ಲಿ ಇಟ್ಟುಕೊಂಡು ಏಳು ದಿನಗಳ ಕಾಲ ಸುತ್ತ ಮುತ್ತಲಿನ ಗ್ರಾಮಗಳ ಮನೆಯೇ ಮನೆಗಳಿಗೆ ತೆರಳಿ ಜಾನಪದ ಹಾಡು ಹಾಡುತ್ತಾ ಸಾರ್ವಜನಿಕರಿಂದ ದವಸ ಧಾನ್ಯಗಳನ್ನು ಪಡೆದು ಬೇವಿನ ಎಲೆಯನ್ನು ಜನರಿಗೆ ನೀಡುತ್ತಾ ಹೋಗುತ್ತಾರೆ. ಏಳು ದಿನಗಳ ನಂತರ ರೊಟ್ಟಿ ಕಾಳು ಪುಂಡಿ ಸೊಪ್ಪು ಮೊಸರು ಬುತ್ತಿ ಇನ್ನಿತರ ಬೇವಿನ ಎಲೆಯಿಂದ ಚೆಲ್ಲುತ್ತಾರೆ. ಇದರಿಂದ ಬೆಳೆಯಲ್ಲ ಹುಲುಸಾಗಿ ಬರುತ್ತದೆ. ಬೆಳೆಗಳಿಗೆ ರೋಗ. ಕೀಟಬಾಧೆ. ಬರುವುದಿಲ್ಲವೆಂಬ ನಂಬಿಕೆ ರೈತರಲ್ಲಿ ಇಂದಿಗೂ ಜೀವಂತವಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಗಣೇಶ ಹಬ್ಬದ ನಂತರ ಈ ಹಬ್ಬವನ್ನು ಆಚರಿಸಿ ಕುಟುಂಬ ಸಮೇತರಾಗಿ ಹೊಲಕ್ಕೆ ತೆರಳಿ ವಿವಿಧ ಭೋಜನ ಮೂಲಕ ಊಟ ಮಾಡಿ ಬರುವುದು ಈ ಹಬ್ಬದ ವಿಶೇಷವಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ