ಕಮ್ಯುನಿಸ್ಟ್ ಪಕ್ಷದ ನೂರಾರು ಕಾರ್ಯಕರ್ತರು ಕೆಂಪು ಬಾವುಟ ಹಿಡಿದು ಬಂದ ಕಾರ್ಮಿಕರ ದಂಡಿನೊಂದಿಗೆ ನಾಮಪತ್ರ ಸಲ್ಲಿಸಿದ ಹೆಚ್. ಈರಣ್ಣ
ಕೂಡ್ಲಿಗಿ ಏ.18
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಕಮ್ಯುನಿಸ್ಟ್ ಪಕ್ಷದಿಂದ ಕೂಡ್ಲಿಗಿ 96 ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಹೆಚ್.ಈರಣ್ಣ. ಇವರು ಮಾನ್ಯ ಚುನಾವಣಾ ಅಧಿಕಾರಿಗಳಾದ ಈರಣ್ಣ ಬಿರಾದರ್ ಇವರ ಮುಖಾಂತರ ನಾಮಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಪರಸಪ್ಪ. ವಕೀಲರು ತಾಲೂಕು ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯಾದ ಕರಿಯಪ್ಪ. ರಾಜ್ಯ ಕಾರ್ಯ ಮಂಡಳಿ ಸದಸ್ಯರಾದ ಎಚ್.ಎಮ್. ಸಂತೋಷ್. ಹಾಗೂ ಪೆನ್ನಪ್ಪ. ಬಸರಾಜ್. ಸೂಚಕರು ಇದ್ದರು ಈ ಸಂದರ್ಭದಲ್ಲಿ ಮಾನ್ಯ ಟಿ.ಜಗದೀಶ್.ತಹಶೀಲ್ದಾರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು ನಂತರ ಹೆಚ್. ಈರಣ್ಣ. ಇವರು ಕೂಡ್ಲಿಗಿಯ ಗುಡೆಕೋಟೆ ರಸ್ತೆಯಲ್ಲಿ ಬರುವ ಈಶ್ವರ ದೇವಸ್ಥಾನದಿಂದ ನಿಂದ ಪಾದಯಾತ್ರೆ ಮೆರವಣಿಗೆ ಮೂಲಕ ಹೆಚ್. ಈರಣ್ಣ. ಇವರು ನೂರಾರು ತಮ್ಮ ಕಾರ್ಯಕರ್ತ ಬೆಂಬಲಿಗರೊಂದಿಗೆ ಮುಖ್ಯ ರಸ್ತೆಯ ಮೂಲಕ ಆಡಳಿತ ಸೌಧದವರೆಗೂ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಜಯ ಘೋಷಣೆಗಳನ್ನು ಕೂಗುತ್ತಾ ಪೊಲೀಸ್ ಬಂದೋಬಸ್ತಿನೊಂದಿಗೆ ಮೆರವಣಿಗೆ ಮೂಲಕ ಬರುವುದು ಕಂಡುಬಂದಿತ್ತು.
ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನೆ ಕೂಡ್ಲಿಗಿ