ಅದ್ಧೂರಿಯಾಗಿ ನಡೆದ ಚೌಡೇಶ್ವರಿ – ರಥೋತ್ಸವ.
ಮಾನ್ವಿ ಜ.16

ಪಟ್ಟಣದ ಪುರಸಭೆ ಮುಂದೆ ಇರುವ ರಾಮಲಿಂಗ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.ಭಕ್ತರು ತಮ್ಮ ಹರಕೆಯನ್ನು ದೇವಿಗೆ ಸಕ್ಕರೆ ತೆಂಗಿನಕಾಯಿ ಹಣ್ಣು ಹಂಪಲು ಹೂವು ಇತ್ಯಾದಿಗಳನ್ನು ತಂದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಎಲ್ಲಾ ಕಡೆ ಹಗಲು ಸಮಯದ ವೇಳೆ ರಥೋತ್ಸವ ನಡೆದರೆ ಇಲ್ಲಿ ರಾತ್ರಿ ರಥೋತ್ಸವ ನಡೆಯುವುದೆ ಒಂದು ವಿಶೇಷವಾಗಿದೆ. ಡೊಳ್ಳು ಬಾಜಾ ಭಜಂತ್ರಿ ಹಾಗೂ ವಾದ್ಯ ಮೇಳದೊಂದಿಗೆ ರಥೋತ್ಸವ ಅದ್ದೂರಿಯಾಗಿ ಜರಗಿತು.
ದ್ವೀಪ ಅಲಂಕರ ನೋಡುವಾರ ಕಣ್ಣಿಗೆ ಗಮನ ಸೆಳೆಯಿತು, ಜಾತ್ರೆಯಲ್ಲಿ ಸಾವಿರರೂ ಭಕ್ತರು ಗಣ್ಯರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ