ಅಮಿತ್ ಶಾ ಅವರನ್ನು ಕೂಡಲೇ ಸಚಿವ ಸಂಪುಟ ದಿಂದ ವಜಾ ಗೊಳಿಸಲು – ಆಗ್ರಹಿಸಿ ಡಿ.ಎಸ್.ಎಸ್ ದಿಂದ ಅರೆಬೆತ್ತಲೆ ಮೆರವಣಿಗೆ.
ಬಸವನ ಬಾಗೇವಾಡಿ ಜ.07

ಬಸವನ ಬಾಗೇವಾಡಿ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಕ್ಕೂಟ ತಾಲೂಕ ಶಾಖೆ ಬಸವನ ಬಾಗೇವಾಡಿ ವತಿಯಿಂದ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಹೋರಾಟ ನಡೆಸಿದರು. ಹೋರಾಟವು ಬಸವನ ಬಾಗೇವಾಡಿಯ ಅಂಬೇಡ್ಕರ್ ವೃತ್ತದ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಅರಬೆತ್ತಲೆ ಮೆರವಣಿಗೆ ಪ್ರಾರಂಭವಾಗಿ ಬಸವೇಶ್ವರ ವೃತ್ತದ ವರೆಗೂ ಸಾಗಿತು. ಬಸವೇಶ್ವರ ವೃತ್ತದಲ್ಲಿ ಶ್ರೀ ಅಮಿತ್ ಶಾ ಅವರ ಪ್ರತಿ ಕೃತಿ ದಹಿಸಿದರು. ಅಮಿತ್ ಶಾ ಅವರು ಅಂಬೇಡ್ಕರ್ ಅವರಿಗೆ ಅವಹೇಳನ ಕಾರಿಯಾಗಿ ಮಾತನಾಡಿರುವ ಇವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಇದೇ ಸಮಯದಲ್ಲಿ ಶ್ರೀ ಸತ್ಯಜಿತ್ ಶಿವಾನಂದ ಪಾಟೀಲ್ ಉಪಸ್ಥಿತರಿದ್ದರು. ಹೋರಾಟದಲ್ಲಿ ದಲಿತ ಮುಖಂಡರಾದ ಶ್ರೀ ಅಶೋಕ್ ಚಲವಾದಿ. ಅರವಿಂದ ಸಾಲವಾಡಗಿ. ಪರಶುರಾಮ್ ದಿಂಡವಾರ್. ಮಹಾಂತೇಶ್ ಸಾಸಾಬಾಳ ಗುರುರಾಜ್ ಗುಡಿಮನಿ ಸಂಜೀವ್ ಕಲ್ಯಾಣಿ ಮುಂತಾದ ದಲಿತ ನಾಯಕರು ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ ಮನಗೂಳಿ.ತಾಳಿಕೋಟೆ