ದೇಶ ಧರ್ಮ ಉಳಿಸಲು ಬಿಜೆಪಿಗೆ ಮತ ಹಾಕಿ — ಕೆ.ಈಶ್ವರಪ್ಪ…..
ತರೀಕೆರೆ ಏ.25
ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ದೇಶದ ಅಭಿವೃದ್ಧಿಗೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು ಇಂದು ಪಟ್ಟಣದ ಹೋಟೆಲ್ ಅರಮನೆ ಆವರಣದಲ್ಲಿ ಬಿಜೆಪಿ ತರೀಕೆರೆ ಮಂಡಲ,ಮತ್ತು ತರೀಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಿ ಎಸ್ ಸುರೇಶ್ ಪರವಾಗಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟನೆ ಮಾಡಿ ಹೇಳಿದರು. ದೇಶ ರಕ್ಷಣೆ ಮಾಡುವ ಸೈನಿಕರಿಗೆ ಪ್ರಧಾನಿ ಮೋದಿಯವರು ಶಸ್ತ್ರಾಸ್ತ್ರಗಳನ್ನು ಖರೀದಿಸಲಿಲ್ಲ, ತಯಾರು ಮಾಡುವ ಕಾರ್ಖಾನೆಗಳನ್ನೇ ಸ್ಥಾಪಿಸಿದ್ದಾರೆ. ಬಿಜೆಪಿ ಜಾತಿವಾದಿ ಕೋಮುವಾದಿ ಎಂದು ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೇಳುತ್ತಿದ್ದಾರೆ.

ಆದರೆ ನಾವು ಒಂದೇ ಮಾತರಂ ಎಂದು ಹೇಳಿ ದೇಶಕ್ಕೆ ಏಕತೆ ಸಾರುವ ರಾಷ್ಟ್ರವಾದಿಗಳು ಎಂದು ತಿಳಿಸುತ್ತಿದ್ದೇನೆ. ಮುಸಲ್ಮಾನರು ಹೆಣ್ಣು ಮಕ್ಕಳನ್ನು ಮತಾಂತರ ಮಾಡಿ ಮೂರು ನಾಲ್ಕು ವರ್ಷಗಳ ಕಾಲ ಅನುಭವಿಸಿ ವಾಪಸ್ಸು ಕಳಿಸುತ್ತಿದ್ದಾರೆ, ಇದರಿಂದ ನಮ್ಮ ಹೆಣ್ಣುಮಕ್ಕಳ ಜೀವನ ಹಾಳಾಗುತ್ತಿದೆ ಆದ್ದರಿಂದ ಮತಾಂತರ ನಿಷೇಧ ಕಾಯಿದೆ ಜಾರಿಗೆ ತಂದಿದ್ದೇವೆ. ಕುಲ ಕುಲ ಕುಲವೆಂದು ಕನಕದಾಸರ ಮಾತನ್ನು ಒಪ್ಪಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ ಕುರುಬ ಸಮಾಜದ ಜಿಹೆಚ್ ಶ್ರೀನಿವಾಸ್ ರವರ ಬಂಧುಗಳು, ಆದರೆ ಬಿಜೆಪಿ ಧರ್ಮವನ್ನು ಜಾಗೃತಿ ಮಾಡುತ್ತಿದೆ ರಾಮ ಮಂದಿರ ನಿರ್ಮಾಣದಿಂದ ದೇಶ ಧರ್ಮ ಉಳಿಸಲು ಬಿಜೆಪಿಗೆ ಬನ್ನಿ, ಜಾತಿಗಾಗಿ ಬರಬೇಡಿ, ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್ ನವರು ಇದ್ದಾರೆ ಜಾಗೃತರಾಗಿ ಲಿಂಗಾಯಿತರನ್ನು ಅಪಮಾನ ಮಾಡಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ ಕಾಂಗ್ರೆಸ್ ನವರು, ಶಾಸಕ ಸುರೇಶ್ ವಿಧಾನಸೌಧಕ್ಕೆ ಬಂದರೆ ಕ್ಷೇತ್ರದ ಕೆಲಸ ಮಾಡಿಸಲು ಸಂಬಂಧಪಟ್ಟ ಮಂತ್ರಿಗಳೊಂದಿಗೆ ಮಾತನಾಡಿ ಅಭಿವೃದ್ಧಿ ಕೆಲಸ ಮಾಡಿಸುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಪೂರ್ಣ ಬಹುಮತದಿಂದ ಸರ್ಕಾರ ರಚನೆ ಮಾಡುತ್ತೇವೆ. 20,000 ಮತಗಳ ಅಂತರದಲ್ಲಿ ಬಿಎಸ್ ಸುರೇಶ ಗೆಲುವು ಸಾಧಿಸುತ್ತಾರೆ ಆದ್ದರಿಂದ ಎಲ್ಲರೂ ಮಹಾಸಂಪರ್ಕ ಅಭಿಯಾನ ಮಾಡೋಣ, ಮನೆ ಮನೆ ಭೇಟಿ ಮಾಡಿ ಪರಿವರ್ತನೆ ಮಾಡೋಣ,ಕೇಂದ್ರ ಮತ್ತು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ತರೋಣ ಎಂದು ಹೇಳಿದರು. ಬಿಎಸ್ ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಎಂಟು ವರ್ಷಗಳಿಂದಲೂ ವಿರಾಮವಿಲ್ಲದೆ ದೇಶದ ಪ್ರಗತಿಗೆ ಶ್ರಮಿಸಿದ್ದಾರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು,ಅವರ ಕೈ ಬಲಪಡಿಸುವ ಕೆಲಸ ಮಾಡಬೇಕಾಗಿದೆ,ಕೇಂದ್ರ ಮತ್ತು ರಾಜ್ಯ ಸರ್ಕಾರ 625 ಕೋಟಿ ರೂ ಅನುದಾನದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಡೂರು ಮತ್ತು ತರೀಕೆರೆ ಎರಡು ತಾಲೂಕುಗಳಿಗೂ ಭದ್ರಾ ಜಲಾಶಯದಿಂದ ಮನೆ ಮನೆಗೆ ಕುಡಿಯುವ ಶುದ್ಧ ನೀರು ಕೊಡುವ ಯೋಜನೆ ಮತ್ತು ತರೀಕೆರೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಲಾಗಿದೆ. ಆಕ್ಸಿಜನ್ ಪ್ಲಾಂಟ್ ತೆರಿಯಲಾಗಿದೆ. ತಾಯಿ ಮಗು ಆಸ್ಪತ್ರೆ ಶಂಕುಸ್ಥಾಪನೆ ಮಾಡಲಾಗಿದೆ. ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸಿ ಮತ್ತೊಮ್ಮೆ ಬಿಜೆಪಿ ಸರ್ಕಾರ ತರೋಣ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆರ್ ದೇವಾನಂದರವರು ಮಾತನಾಡಿ ಅಭಿವೃದ್ಧಿ ಕಡೆ ಭಾರತ ದಾಪುಗಾಲು ಹಾಕುತ್ತಿದೆ, ವಿರೋಧ ಪಕ್ಷದವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿ ಒಂದೇ ಸರ್ಕಾರ ವಾಗಿರುವುದರಿಂದ ಸಾವಿರಾರು ಕೋಟಿ ಅನುದಾನದಲ್ಲಿ ಕ್ಷೇತ್ರ ಅಭಿವೃದ್ಧಿ ಸಾಧ್ಯವಾಗಿದೆ. ರೈತರಿಗೆ ವಿಮೆ, ಬೆಳೆ ವಿಮೆ, ನರೇಂದ್ರ ಮೋದಿ ಸರ್ಕಾರ ಮಾಡಿದೆ. ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಎಂದು ಹೇಳಿದರು. ಮಾಜಿ ಸೈನಿಕ ಶ್ರೀನಿವಾಸ್ ಮಾತನಾಡಿ ನರೇಂದ್ರ ಮೋದಿಯವರು ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಭಾರತದಿಂದ ಔಷಧಿಗಳನ್ನು ನೆರ ರಾಷ್ಟ್ರಗಳಿಗೆ ಪ್ರಧಾನಮಂತ್ರಿಯವರು ನೀಡಿದ್ದಾರೆ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುವ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಕೆ ಆರ್ ಆನಂದಪ್ಪ ಮಾತನಾಡಿ 75 ವರ್ಷಗಳಲ್ಲಿ ಕಾಣದ ಬದಲಾವಣೆ ಕೇವಲ ಎಂಟು ವರ್ಷಗಳಲ್ಲಿ ಕಾಣುತ್ತಿದ್ದೇವೆ,ದೇಶವು ಅಭಿವೃದ್ಧಿ ಹೊಂದುತ್ತಿದೆ ಆದ್ದರಿಂದ ಮತ್ತೊಮ್ಮೆ ಬಿಜೆಪಿಗೆ ಮತ ನೀಡುವ ಮೂಲಕ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಎಸಿ ಚಂದ್ರಪ್ಪನವರ ನೇತೃತ್ವದಲ್ಲಿ ಅಜ್ಜಂಪುರ,ತರೀಕೆರೆ, ಶಿವನಿ,ತಡಗ, ಸೊಕ್ಕೆ,ಶಾನುಭೋಗನಹಳ್ಳಿ, ಲಿಂಗದಳ್ಳಿ,ಲಕ್ಕವಳ್ಳಿಯಿಂದ ಆಗಮಿಸಿದ್ದ ಕಾರ್ಯಕರ್ತರು, ತರೀಕೆರೆ ಕುರುಬ ಸಮಾಜದ ಬಂಧುಗಳು ಬಿಜೆಪಿಗೆ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಕಲ್ಲು ಮರುಡಪ್ಪ, ತರೀಕೆರೆ ಮಂಡಲ ಅಧ್ಯಕ್ಷರಾದ ಪ್ರತಾಪ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರದ ಟಿಎಲ್ ರಮೇಶ್, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಚೈತ್ರ ಶ್ರೀ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪದ್ಮಾವತಿ ಸಂಜೀವ್ ಕುಮಾರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ರಾಜೇಶ್ವರಿ ರಾಜಶೇಖರ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಬಿ ಆನಂದಪ್ಪ, ಟಿ ಎ ಪಿ ಸಿ ಎಂ ಎಸ್ ಮಾಜಿ ಅಧ್ಯಕ್ಷರಾದ ವಸಂತ್ ಕುಮಾರ್, ಬೆಳೇನಹಳ್ಳಿ ಸೋಮಶೇಖರ್, ಶಿವರಾಜ್, ಶಾಂತಕುಮಾರ್, ಪುರಸಭಾ ನಾಮಿನಿ ಸದಸ್ಯರಾದ ಅರುಂಧತಿ ಜಿ ಹೆಗಡೆ, ಪವಿತ್ರ ವೆಂಕಟೇಶ್, ಸದಾನಂದ, ಜೈ ಶ್ರೀ ರಾಮು, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ