ಕೂಡ್ಲಿಗಿ ತಾಲೂಕು ಸ್ವೀಪ್ ಸಮಿತಿ ಮತ್ತು ಪಟ್ಟಣ ಪಂಚಾಯತಿ ವತಿಯಿಂದ ಒಕ್ಕೂಟದಿಂದ “ಮೇಣದ ಬತ್ತಿ ಮೂಲಕ ನೈತಿಕ ಮತದಾನ ಜಾಗೃತಿ ಜಾಥಾ”
ಕೂಡ್ಲಿಗಿ ಏ.25

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಮಂಗಳವಾರದಂದು ಸಂಜೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವಿಜಯ ನಗರ ಜಿಲ್ಲಾ ಸ್ವೀಪ್ ಸಮಿತಿ ವಿಜಯ ನಗರ ತಾಲೂಕು ಸ್ವೀಪ್ ಸಮಿತಿ ಮತ್ತು ಪಟ್ಟಣ ಪಂಚಾಯಿತಿ ವತಿಯಿಂದ ಒಕ್ಕೂಟದ ಎಸ್. ಹೆಚ್. ಜಿ .ಗುಂಪುಗಳಿಂದ ಹಾಗೂ ಎನ್.ಯು.ಎಲ್. ಎಮ್.ಸ್ತ್ರೀ ಶಕ್ತಿ ಗುಂಪುಗಳಿಂದ “ಮೇಣದಬತ್ತಿ ಮೂಲಕ ನೈತಿಕ ಮತದಾನ ಜಾಗೃತಿ ಜಾಥವನ್ನು ಹಮ್ಮಿಕೊಂಡಿದ್ದು ಸಂಜೆ 6:30 ಸಮಯಕ್ಕೆ ತಾಲೂಕು ಆಡಳಿತ ಸೌಧದಿಂದ ಹೊರಟ ಜಾಥಾವು ಕೂಡ್ಲಿಗಿಯ ಪ್ರಮುಖ ರಸ್ತೆಯದಲ್ಲಿ ಹೊರಡುವಂತ ಸಮಯದಲ್ಲಿ ಮಾನ್ಯ ಚುನಾವಣೆ ಅಧಿಕಾರಿಗಳಾದ ಈರಣ್ಣ ಬಿರಾದರ್ ಇವರು ಈ ಜಾಗೃತಿ ಕಾರ್ಯಕ್ರಮಕ್ಕೆ ನೆರೆದಿದ್ದಂತಹ ಎಲ್ಲಾ ಅಧಿಕಾರಿಗಳಿಗೆ ಈ ಚುನಾವಣೆಯು ಮುಂದಿನ ತಿಂಗಳಲ್ಲಿ ನಡೆಯುವಂತಹ ಮತದಾನವನ್ನು ತಾಲೂಕಿನ ಎಲ್ಲಾ ವ್ಯಕ್ತಿಗಳು ಯಾವುದೇ ಪಕ್ಷದ ಗುರುತಿಗೆ ಜನಗಳು ಈ ಬಾರಿ ನೂರಕ್ಕೆ ನೂರರಷ್ಟು ಮತದಾನ ಮಾಡುವಂತಹ ಜಾಗೃತಿಯನ್ನು ಅನೇಕ ಕಾರ್ಯಕ್ರಮಗಳೊಂದಿಗೆ ಮಾಡುತ್ತ ಬಂದಿದ್ದೇವೆ .

ಈ ಬಾರಿ ನಮ್ಮ ಜೊತೆ ಎಲ್ಲಾ ಅಧಿಕಾರಿಗಳ ಸಂಪೂರ್ಣ ಬೆಂಬಲದೊಂದಿಗೆ ಈ ಬಾರಿ ಉತ್ತಮವಾದಂತಹ ಮತದಾನ ಎಲ್ಲಾ ವ್ಯಕ್ತಿಗಳು ಮಾಡುವಂತೆ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಹಾಗೂ ಅಕ್ಕಪಕ್ಕದ ಮನೆಗಳಲ್ಲಿಯೂ ಸಹ ಮತದಾನ ಮಾಡಬೇಕು , ಭಾಗವಹಿಸಿದಂತ ಸ್ತ್ರೀ ಶಕ್ತಿ ಗುಂಪುಗಳ ಮಹಿಳೆಯರಿಗೆ ತಾವೆಲ್ಲರೂ ಯುವಕರಿಗಳಿಗೆ ಮುಖಂಡರುಗಳಿಗೆ ಹಿರಿಯರಿಗೆ ಮಹಿಳೆಯರಿಗೆ ವೃದ್ಧರಿಗೆ ಹಾಗೂ ಯಾವ ವ್ಯಕ್ತಿಯೂ ಸಹ ಮತದಾನ ಮಾಡುವುದು ಬಿಟ್ಟರೆ ಏನು ನಷ್ಟವೆಂಬುದನ್ನು ತಿಳಿಸುವುದರೊಂದಿಗೆ ಎಲ್ಲರಿಗೂ ಮತದಾನದ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು. ಹಾಗೆ ಈ ಸಂದರ್ಭದಲ್ಲಿ ಸ್ವೀಪ್ ಸಮಿತಿಯ ತಾಲೂಕು ಅಧಿಕಾರಿಗಳಾದ ರವಿಕುಮಾರ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಹ ಜಾಗೃತಿಯ ಮತದಾನದ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗಳಾದ ಫಿರೋಜ್ ಖಾನ್ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ,ಮೇಣದಬತ್ತಿ ಮೂಲಕ ನೈತಿಕ ಮತದಾನ ಜಾಗೃತಿ ಜಾಥವನ್ನು ಇವರು ವಹಿಸಿಕೊಂಡಿದ್ದು , ಕಾರ್ಯಕ್ರಮವನ್ನು ಪ್ರಮುಖ ರಸ್ತೆಯಾದ ರಾಷ್ಟ್ರೀಯ ಹುತಾತ್ಮ ರ ಮಹಾತ್ಮ ಗಾಂಧೀಜಿ ಚಿತಾಬಸ್ಮ ರಸ್ತೆ ಮೂಲಕ ಅಂಬೇಡ್ಕರ್ ಸರ್ಕಲ್ ವರೆಗೂ ಮೇಣದಬತ್ತಿ ಹಚ್ಚಿಕೊಂಡು ಹಾಗೂ ಪಟ್ಟಣ ಪಂಚಾಯತಿಯ ವಾಹನದ ಮೂಲಕ ಧ್ವನಿ ವರ್ಧಕದಿಂದ ಮತದಾನ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಮಕ್ಕಳ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ನಾಗನಗೌಡ್ರು ಅಂಗನವಾಡಿಯ ಕಾರ್ಯಕರ್ತರು ನೂರಾರು ಮಹಿಳೆಯರು ಭಾಗವಹಿಸಿದ್ದರು
ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ