ತಳವಾರ ಸಮಾಜದ ರಾಜ್ಯಾಧ್ಯಕ್ಷರಾಗಿ – ಶಿವಾಜಿ.ಮೆಟಗಾರ ಆಯ್ಕೆ.
ದೇವರ ಹಿಪ್ಪರಗಿ ಮಾ.05

ಕರ್ನಾಟಕ ರಾಜ್ಯ ತಳವಾರ ಮಹಾ ಸಭಾ ರಾಜ್ಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಹೋರಾಟಗಾರ ಶಿವಾಜಿ ಮೆಟಗಾರ ಅವರನ್ನು ಇಂದು ಸಿಂದಗಿಯಲ್ಲಿ ತಳವಾರ ಸಮಾಜದ ಬಾಂಧವರು ಸನ್ಮಾನಿಸಿ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಾಜಿ.ಮೆಟಗಾರ ಅವರು ನಾನು ಹಿಂದೆಯೂ ತಳವಾರ ಸಮಾಜದ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದೇನೆ ಮುಂದೆಯೂ ತಳವಾರ ಸಮಾಜದ ಅಭಿವೃದ್ಧಿಗಾಗಿ ಸದಾ ಸಿದ್ಧವಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ತಳವಾರ ಸಮಾಜದ ಮುಖಂಡರಾದ ಮಡಿವಾಳ ನಾಯ್ಕೋಡಿ ಅವರು ತಳವಾರ ಸಮಾಜದ ಅಭಿವೃದ್ದಿಗಾಗಿ ಶಿವಾಜಿ ಮೆಟಗಾರ ಅವರ ಹೋರಾಟ ಯಾವಾಗಲೂ ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ತಳವಾರ ಸಮಾಜದ ಮುಖಂಡರಾದ ಅರವಿಂದ ನಾಯ್ಕೋಡಿ ನಾಗರಾಜ ತಳವಾರ, ಮಡಿವಾಳ ಕೂಡಿ ಪ್ರಭು ನಾಟೀಕಾರ ಶಂಕ್ರೆಪ್ಪ ಬೂದಿಹಾಳ ಮಹೇಶ ಬೂದಿಹಾಳ ಮಡಿವಾಳಪ್ಪ ನಾಯ್ಕೋಡಿ ರಾಜಕುಮಾರ ಸುಂಗಠಾಣ ಮುದಕಪ್ಪ ಸುಂಗಠಾಣ ರವಿ ಕೆಂಭಾವಿ ಸೇರಿದಂತೆ ಇನ್ನಿತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ