ಬಿಜೆಪಿ ಸೋಲಿಸಲು ಸಿಪಿಎಂ ಕರೆ……
ಹೊಸಪೇಟೆ ಏ.27
ರೈತರ, ಕಾರ್ಮಿಕರಿಗೆ ವಿರೋಧವಾಗಿ ಕೆಲಸ ಮಾಡಿರುವ ರಾಜ್ಯದ ಬಿಜೆಪಿ ಪಕ್ಷವನ್ನು ಸೋಲಿಸಲು ಸಿಪಿಎಂ ಕರೆ ನೀಡಿದೆ. ಹೊಸಪೇಟೆಯಲ್ಲಿ ಇಂದು ನಡೆದ ರಾಜಕೀಯ ಸಮಾವೇಶದಲ್ಲಿ ಮಾತನಾಡಿದ ಪಕ್ಷದ ಮುಖಂಡರಾದ ಎಂ ಜಂಬಯ್ಯನಾಯಕ ಮಾತನಾಡಿ ಚುನಾವಣಾ ಸಮಯದಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ಜಾತಿ ಪ್ರಶ್ನೆಯನ್ನು ಮುನ್ನೆಲೆಗೆ ತಂದಿರುವುದು ಅತ್ಯಂತ ಖಂಡನೀಯ.
ಎಲ್ಲಾ ಜಾತಿಗಳಲ್ಲಿಯೂ ರೈತರು, ಕಾರ್ಮಿಕರು, ಮಹಿಳೆಯರು ಇದ್ದಾರೆ, ಆದರೆ ರೈತ, ಕಾರ್ಮಿಕರ ಬಗ್ಗೆ ಮಾತನಾಡುವುದಕ್ಕೆ ಬದಲಾಗಿ ಜಾತಿಗಳ ಕುರಿತು ಮಾತನಾಡುತ್ತಿರುವುದು, ಅದಕ್ಕೆ ಕಾರ್ಮಿಕರು ಮೌನವಹಿಸಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ಮುಖಂಡರಾದ ಎ ಕರುಣಾನಿಧಿ ವಕೀಲರು ಮಾತನಾಡಿ ರಾಜ್ಯದ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಜನತೆಯನ್ನು ಅತ್ಯಂತ ಸಂಕಷ್ಟಕ್ಕೆ ತಳ್ಳಿರುವುದನ್ನು ಜನತೆ ಮರೆಯಬಾರದು ಎಂದರು. ಬೆಲೆಯೇರಿಕೆ, ನಿರುದ್ಯೋಗ, ಕೋಮುವಾದ, ಮೊದಲಾದವುಗಳು ಜನತೆಯನ್ನು ಭಾದಿಸುತ್ತಿರುವಾಗ ಮತದಾರರು ಬಿಜೆಪಿಯ ಕೋಮುವಾದಕ್ಕೆ ಬಲಿಯಾಗಬಾರದೆಂದು ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಆರ್ ಭಾಸ್ಕರ್ ರೆಡ್ಡಿ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಗಾತಿಗಳು ಮುಖಂಡರು ಕಾರ್ಯದರ್ಶಿಗಳು ಹಾಗೂ ಸದಸ್ಯರು ಉಪಸ್ಥಿತಿತರಿದ್ದರು.
ತಾಲೂಕು ವರದಿಗಾರ: ಮಾಲತೇಶ್. ಶೆಟ್ಟರ್. ಹೊಸಪೇಟೆ