ತಾಲೂಕಿನದ್ಯಾಂತಹ ಜೆಡಿಎಸ್ ಅಭ್ಯರ್ಥಿ ಕೋಡಿಹಳ್ಳಿ ಭೀಮಣ್ಣ ಬಿರುಸಿನ ಪ್ರಚಾರ; ಗ್ರಾಮ ಗ್ರಾಮಗಳಲ್ಲಿ ಬೆಂಬಲಿಸುತ್ತಿರುವ ಅಪಾರ ಅಭಿಮಾನಿಗಳು…..

ಕೂಡ್ಲಿಗಿ ಏ.27

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಗಂಡುಮುಣುಗು, ಸಿದ್ದಾಪುರ, ಸಿ ವಡ್ಡರಟ್ಟಿ, ಸಿ ಗೊಲ್ಲರಟ್ಟಿ, ಚಿಕ್ಕಜೋಗಿಹಳ್ಳಿ, ಮಾಕನಡುಕು, ನೆಲಬೊಮ್ಮನಹಳ್ಳಿ, ಓಬಳಶೆಟ್ಟಳ್ಳಿ ಸೇರಿದಂತೆ ಇತರೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಕೋಡಿಹಳ್ಳಿ ಭೀಮಣ್ಣನವರು ಅವರ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ಕಾರ್ಯಕರ್ತರೊಂದಿಗೆ ಮನೆ ಮನೆಗೆ ಹೋಗಿ ಮತದಾರರ ಮನವೊಲಿಸುವ ಪ್ರಯತ್ನ ಮಾಡಿ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾದ ನನಗೆ ಹೊರೆ ಹೊತ್ತ ಮಹಿಳಾ ಗುರ್ತಿಗೆ ಮತವನ್ನು ಕೊಡಿರಿ ಎಂದು ಮನವಿ ಮಾಡಿದರು. ನಂತರ ಕೊಡಿಹಳ್ಳಿ ಭೀಮಣ್ಣನವರು ಮಾತನಾಡಿ ನಾನು ಕೂಡ ಈ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದೆ ಬಿಜೆಪಿ ವರಿಷ್ಠರು ನನಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿ ನನಗೆ ಕೊಡದೆ ನಿರಾಸೆಗೊಳಿಸಿದರು. ನನಗೆ ತೋರಿಸಿ ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿದ್ದ ಲೋಕೇಶ್ ವಿ ನಾಯಕ ಅವರಿಗೆ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಇಂದು ನನಗೆ ಮಾನ್ಯ ಕುಮಾರ ಸ್ವಾಮಿಯವರು ನನನ್ನು ಗುರುತಿಸಿ ಜೆಡಿಎಸ್ ಪಕ್ಷದ ಟಿಕೆಟ್ ಕೊಟ್ಟಿರವುದಕ್ಕೆ ಕೃತಜ್ಞತೆ ಸಲ್ಲಿಸಿದರು ಹಾಗೆ ಬಿಜೆಪಿ ಪಕ್ಷದ ಅಜಂಡಗಳನ್ನು ತಿಳಿಯದೆ ಇರುವಂತರಿಗೆ ಏಕಾಏಕಿ ಟಿಕೆಟ್ ನೀಡಿದ್ದರಿಂದ ನಾನು ನಮ್ಮ ಕಾರ್ಯಕರ್ತರನ್ನು ಹಾಗೂ ಹಿತೈಷಿಗಳನ್ನು ಬೆಂಬಲಿಗರನ್ನು ಕರೆದು ಸಭೆ ಮಾಡಿ ಎಲ್ಲಾರ ಅಭಿಪ್ರಾಯವನ್ನು ತಿಳಿದು ಜೆಡಿಎಸ್ ಪಕ್ಷಕ್ಕೆ ಸೇರಿ ಜೆಡಿಎಸ್ ಪಕ್ಷದ ವರಿಷ್ಠರಿಂದ ಟಿಕೆಟ್ ಪಡೆದು ಕೂಡ್ಲಿಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಈ ಕ್ಷೇತ್ರದ ಹೊಸ ಬದಲಾವಣೆಗೆ ಮಾಡುವ ಅವಕಾಶ ನಮ್ಮ ತಾಲೂಕಿನ ಜನರು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ನನ್ನನ್ನು ಆಯ್ಕೆ ಮಾಡಿ. ಮೇ10 ರಂದು ಜೆಡಿಎಸ್ ಪಕ್ಷದ ಕ್ರಮ ಸಂಖ್ಯೆ 1ಕ್ಕೆ ಒತ್ತಿ ಎಂದು ಸಿದ್ದಾಪುರ ಗ್ರಾಮದಲ್ಲಿ ಮತದಾರರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಗುಪ್ಪಲ್ ಕಾರಪ್ಪ ,ಚನ್ನಬಸಪ್ಪ, ಕಕ್ಕಪಿ ಬಸಣ್ಣ, ಬೋರಸ್ವಾಮಿ, ಜಿಲ್ಲಾ ಅಧ್ಯಕ್ಷರಾದ ಕಾರಪ್ಪ, ಪಟ್ಟಣ ಪಂಚಾಯತಿ ಸದಸ್ಯ ಪೂರ್ಯ ನಾಯ್ಕ್, ಶಾಂತಿ ಬಾಯ್, ಕರಿಬಸಪ್ಪ, ಅಂಜಿನಪ್ಪ, ಹುಲಿರಾಜ ಸೇರಿದಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಭಾಗವಹಿಸಿದರು.

ಜಿಲ್ಲಾ ವರದಿಗಾರರು: ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button