ಮದಕರಿ ವೃತ್ತದ ಆಟೋ ನಿಲ್ದಾಣದ ಶೌಚಾಲಯ ನಿರ್ಮಿಸಿ ಆಟೋ ಚಾಲಕರನ್ನು ಒಕ್ಕಲೇಬ್ಬಿಸ ಬಾರದೆಂದು – ಆಟೋ ಚಾಲಕರ ಮನವಿ.
ಕೂಡ್ಲಿಗಿ ಜ.21

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ಸೋಮವಾರ ದಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರವನ್ನು ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ ಯೂನಿಯನ್ಸ್ ವತಿಯಿಂದ ಮದಕರಿ ಸರ್ಕಲ್ ಪಕ್ಕದಲ್ಲಿ ಆಟೋ ನಿಲ್ದಾಣವಿದ್ದು ಈ ಆಟೋ ನಿಲ್ದಾಣವನ್ನು ಮಾಡುವ ಬದಲಾಗಿ ಸಾರ್ವಜನಿಕರ ಶೌಚಾಲಯವನ್ನು ನಿರ್ಮಿಸಲು ಇಲಾಖೆಯ ಸಿಬ್ಬಂದಿ ವರ್ಗದವರು ಅಳತೆ ಹಿಡಿಯಲು ಮುಂದಾಗಿದ್ದು.ಈ ಸ್ಥಳವನ್ನು ಸಂಪೂರ್ಣವಾಗಿ ಸಾರ್ವಜನಿಕರ ಶೌಚಾಲಯಕ್ಕಾಗಿ ತೆಗೆದು ಕೊಂಡರೆ ಆಟೋ ಡ್ರೈವರ್ ಗಳು ಆಟೋವನ್ನೇ ನಂಬಿ ಜೀವನ ನಡೆಸುತ್ತಿರುವಂತಹವರ ಗತಿ ಏನು? ಎಂಬ ಪ್ರಶ್ನೆ ಎಲ್ಲಾ ಆಟೋ ಡ್ರೈವರ್ ಗಳಿಗೆ ಆತಂಕ ಉಂಟಾಗಿದೆ. ಕಾರಣ ಈ ಸ್ಥಳವು ಸಾರ್ವಜನಿಕರ ಜನನಿ ಬೀಡ ಪ್ರದೇಶವಾಗಿದ್ದು ಈ ಸ್ಥಳದಲ್ಲೇ ಶೌಚಾಲಯ ನಿರ್ಮಾಣವಾದರೆ ನಮಗೆ ಬೇರೆ ಯಾವ ಸ್ಥಳವಿದೆ ನಾವು ಹೇಗೆ ಕುಟುಂಬಗಳನ್ನು ನೀಗಿಸಲು ಜೀವನ ನಡೆಸಬೇಕು ಎಂಬ ಭಯ ಡ್ರೈವರ್ ಗಳಲ್ಲಿ ಆತಂಕವಾಗಿರುವುದರಿಂದ ಸರಿ ಸುಮಾರು 200 ಕುಟುಂಬಗಳ ಆಟೋ ವೃತ್ತಿಯನ್ನು ನಂಬಿ ಡ್ರೈವರ್ ಗಳು ಈ ಪ್ರಮುಖ ಸ್ಥಳವನ್ನು ಒಕ್ಕಲೇಬ್ಬಿಸ ಬಾರದೆಂದು ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ಗಿರೀಶ್ ಇವರಿಗೆ ಆಟೋ ಯೂನಿಯನ್ ಅಧ್ಯಕ್ಷರಾದ ಮಯೂರ ಮಂಜುನಾಥ ರವರು ಮಾತನಾಡುತ್ತಾ ಆಟೋ ಡ್ರೈವರ್ ಗಳ ಕಡು ಬಡತನದ ಪರಿಸ್ಥಿತಿಗಳನ್ನು ಮಾನ್ಯ ಅಧ್ಯಕ್ಷರು ಹಾಗೂ ಮುಖ್ಯ ಅಧಿಕಾರಿಗಳು ನಮ್ಮ ಆಟೋ ಡ್ರೈವರ್ ಗಳ ಸಾಗಿಸುತ್ತಿರುವ ಅಂತಹ ಜೀವನವನ್ನು ಅರ್ಥ ಮಾಡಿಕೊಂಡು ಶೌಚಾಲಯ ನಿರ್ಮಾಣ ಮಾಡಲು ಮುಂದಾಗಿರುವುದನ್ನು ನಿಲ್ಲಿಸಿ ಬೇರೆಡೆಗೆ ಸ್ಥಳಾಂತರಿಸ ಬೇಕು ಎಂದು ತಿಳಿಸಿದರು.

ಹಾಗೂ ಕಾರ್ಯದರ್ಶಿಯಾದ ಕುಮಾರ ಇವರ ಸಮ್ಮುಖದಲ್ಲಿ ಹತ್ತಾರು ಆಟೋ ಡ್ರೈವರ್ ಗಳು ಮನವಿ ಪತ್ರವನ್ನು ಕುಮಾರ್ ಅವರು ಓದಿ ಮನವಿ ಪತ್ರ ವನ್ನು ನೀಡಿದರು. ಹಾಗೆ ಈ ಸಂದರ್ಭದಲ್ಲಿ ಆಟೋ ಡ್ರೈವರ್ ಗಳ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ ರವರು ಆಟೋ ಚಾಲಕರ ಮನವಿಯ ಕುರಿತು ಆ ಸ್ಥಳದಲ್ಲಿ ಶೌಚಾಲಯ ನಿರ್ಮಾಣವಾದರೆ ಆಟೋ ಡ್ರೈವರ್ ಗಳ ಜೀವನದ ಪರಿಸ್ಥಿತಿ ಚಿಂತಾಜನಕ ವಾಗುತ್ತದೆ ಎಂಬ ನಿಜ ಸಂಗತಿಯನ್ನು ಅರಿತು ಅವರು ಶೌಚಾಲಯ ನಿರ್ಮಾಣ ವಾಗುವುದನ್ನು ಸ್ಥಗಿತ ಗೊಳಿಸುವುದಾಗಿ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು. ಹಾಗೆ ಸರ್ಕಾರ ದಿಂದ ಮಂಜೂರಾದ ಶೌಚಾಲಯವನ್ನು ಸ್ಥಳಾಂತರ ಗೊಳಿಸಿ ಸಾರ್ವಜನಿಕರಿಗೆ ಅವಶ್ಯಕತೆ ಇರುವಂತಹ ಸ್ಥಳದಲ್ಲಿ ಶೌಚಾಲಯವನ್ನು ನಿರ್ಮಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಹತ್ತಾರು ಆಟೋ ಡ್ರೈವರ್ ಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ. ಸಾಲುಮನೆ.ಕೂಡ್ಲಿಗಿ