ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಶಶಾಂಕ.
ತರೀಕೆರೆ ಮೇ.2
ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾಗಿ ಅರ್ಜಿ ಹಾಕಿ ನನ್ನ ತಂದೆಯವರಾದ TN ಗೋಪಿನಾಥ್ ರವರ ಮಾರ್ಗದರ್ಶನದಂತೆ ಟಿಕೆಟ್ ಬಯಸಿರುತ್ತೇನೆ ಎಂದು ಟಿಜಿ ಶಶಾಂಕ್ ರವರು ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನನ್ನ ತಂದೆ ದಿವಂಗತ ಟಿ ಎನ್ ಗೋಪಿನಾಥ್ ರವರು ಕಳೆದ 45 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದು ಒಮ್ಮೆ ಪಕ್ಷದಿಂದ ಟಿಕೆಟ್ ಬಯಸಿದ್ದರು. ಇದೀಗ ಅವರು ವಿಧಿವಶರಾಗಿದ್ದು ಅವರ ಬಯಕೆಯಂತೆ ಕಾಂಗ್ರೆಸ್ ಪಕ್ಷದಿಂದ 2023ರ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೋರಿ ಅರ್ಜಿ ಹಾಕಿರುತ್ತೇನೆ, ನನ್ನೊಂದಿಗೆ 12 ಜನ ಆಕಾಂಕ್ಷಿಗಳು ಟಿಕೆಟ್ ಬಯಸಿ ಅರ್ಜಿ ಹಾಕಿದ್ದರು, ಪಕ್ಷದ ವರಿಷ್ಠರಲ್ಲಿ ನನಗೆ ಟಿಕೆಟ್ ನೀಡಬೇಕೆಂದು ನಾನು ಒತ್ತಾಯಿಸಿದ್ದು, ಅದರಂತೆ ನನ್ನ ಹೆಸರು ಸಹ ಪ್ರಚಲಿತವಿತ್ತು, ಆದರೆ ನನಗೆ ಟಿಕೆಟ್ ಸಿಗಲಿಲ್ಲ ಈ ವಿಚಾರದಲ್ಲಿ ಬೇಸರವೂ ಪಡಲಿಲ್ಲ, ಅರ್ಜಿ ಹಾಕಿದ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದುಕೊಂಡಿದ್ದೆವು. ಸತ್ಯ ಪ್ರಮಾಣವೂ ಮಾಡಿದ್ದೆವು. ಶಿವನಿ ಯಲ್ಲಿ ಕರೆದಿದ್ದ ಸಮಾಲೋಚನಾ ಸಭೆಯಲ್ಲಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಾನು ಭಾಗವಹಿಸಿದ್ದನು. ನಾನು ನಿಷ್ಠೆಯಿಂದ ಪಕ್ಷದ ಕೆಲಸ ಮಾಡಿರುತ್ತೇನೆ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದಿಲ್ಲ. ಆದರೆ ಯಾವುದೇ ಕಾರಣ ನೀಡದೆ, ಮುನ್ಸೂಚನೆ ಇಲ್ಲದೆ ಪಕ್ಷದಿಂದ ನನ್ನನ್ನು ಅಮಾನತ್ತು ಮಾಡಿದ್ದಾರೆ. ನಮ್ಮ ಅಭಿಪ್ರಾಯವನ್ನು ಕೇಳದೆ ಕ್ರಮ ತೆಗೆದುಕೊಂಡಿರುವುದು ನನಗೆ ನೋವನ್ನು ಉಂಟು ಮಾಡಿದೆ.
ನನ್ನ ಅಭಿಮಾನಿಗಳು ಬೆಂಬಲಿಗರು ಹಿತೈಷಿಗಳು ಸಹ ನನ್ನ ಅಮಾನತ್ತನ್ನು ವಿರೋಧಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲ ಒಂದೆರಡು ದಿನಗಳಲ್ಲಿ ನನ್ನ ಬೆಂಬಲಿಗರು ಹಿತೈಷಿಗಳ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಡಿಜೇಂದ್ರ ಕುಮಾರ್, ಮಾಜಿ ಪುರಸಭಾ ಅಧ್ಯಕ್ಷರಾದ ರಂಗನಾಥ್, ಪ್ರಗತಿಪರ ಚಿಂತಕರಾದ ಜಗದೀಶ್, ಕಾಂಗ್ರೆಸ್ ಪಕ್ಷದ ವಕ್ತರರಾದ ಚಂದ್ರಮೋಹನ್ ನಾಯ್ಕ್, ಅಫ್ರೋಜ್, ಪೆನ್ನ ರವಿ , ಚಂದ್ರಶೇಖರ್, ಸುರೇಶ್, ರವಿ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ