ಸೋಲಿನ ಭೀತಿಯಿಂದ ಅಭ್ಯರ್ಥಿ ಅಪಹರಣಕ್ಕೆ ಸಂಚು ಮಾಡಿ ಹಲ್ಲೆಗೆ ಯತ್ನಿಸಿದ ಬಿಜೆಪಿಯ ಸಂಚುಕೋರರ ಪತ್ತೆ ಹಚ್ಚಲು ಒತ್ತಾಯ ….
ಹೊಸಪೇಟೆ (ಮೇ.9) :
ದಿನಾಂಕ:09/05/2023 ರಂದು *ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)*ಚುನಾವಣೆ ಇರುವುದರಿಂದ ತಾಲೂಕು ಕಚೇರಿಗೆ ಆಗಮಿಸಿ ಮನವಿ ಪತ್ರವನ್ನು ನೀಡಲಾಯಿತು.07/05/2023 ಭಾನುವಾರ ರಂದು ರಾತ್ರಿ 8 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆ.ಬಾಗೇಪಲ್ಲಿಯ (ಸಿಪಿಐಎಂ) ಅಭ್ಯರ್ಥಿಯಾದ *ಕಾಂ.ಡಾ. ಅನಿಲ್ ಕುಮಾರ್* ಬಾಡಿಗೆ ಮನೆಯ ಮೇಲೆ, ದುಷ್ಕರ್ಮಿಗಳು ಸಹ ಬಾಡಿಗೆ ಮನೆ ಮಾಡಿ ಕೊಂಡಿರುವುದರಿಂದ ಹೇಳಿಕೊಂಡ ಸುಮಾರು 30 ರಷ್ಠು ಬಿಜೆಪಿಯ ಗುಂಡಾಗಳು, ಮಾರಕಾಸ್ತ್ರಗಳಿಂದ ದಾಳಿ ನಡೆಸಲು ರೂಪಿಸಿಲಾದ ಸಂಚನ್ನು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ. ಈ ಕುರಿತಂತೆ ಈ ಸಂಚಿನ ರೂವಾರಿಗಳನ್ನು ಈ ಕೂಡಲೇ ಬಂಧಿಸಿ ಅವರ ಮೇಲೆ ಅಗತ್ಯ ಕಾನೂನಿನ ಕ್ರಮ ಜರುಗಿಸಿವಂತೆ ಸಿಪಿಐಎಂ ರಾಜ್ಯ ಸರ್ಕಾರ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಬಲವಾಗಿ ಒತ್ತಾಯಿಸುತ್ತದೆ.
ಸಂಚು ಜಾರಿಯಾಗಿರುವ ಮುಂಚೆಯೇ, ಆ ಕುರಿತಂತೆ ಅನುಮಾನ ಗೊಂಡ ಸಿಪಿಐಎಂ ಅಭ್ಯರ್ಥಿ ಅವರ *ಪತ್ನಿ ಡಾ. ಮಂಜುಳಾ* ಮತ್ತು ಮನೆಯವರು ಹಾಗೂ ಸಿಪಿಐಎಂ ಕಾರ್ಯಕರ್ತರು ಮದ್ಯ ಪ್ರವೇಶಿಸಿ ಗೂಂಡಾಗಳನ್ನು ಮತ್ತು ಅವರೊಂದಿಗಿದ್ದ ಮಾರಕಸ್ತ್ರಗಳ ಸಮೇತ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದೆ.ಗೂಂಡಾಗಳೇ ಅಭ್ಯರ್ಥಿಯನ್ನು ಅಪಹರಿಸುವ ಮತ್ತು ಕೊಲೆಗೈಯ್ಯುವ ದುರುದ್ದೇಶವನ್ನು ವಾಗ್ವಾದದಲ್ಲಿ ಬಾಯಿ ಬಿಟ್ಟಿದ್ದಾರೆ. ಚುನಾವಣಾ ಆಯೋಗ, ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ಒಟ್ಟು ಗೂಂಡಾ ದಾಳಿಯ ಸಂಚನ್ನು ಬೇಧೆಯಿಸಲು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸುತ್ತದೆ.ಸಿಪಿಐಎಂ ಅಭ್ಯರ್ಥಿ ಹಾಗೂ ಅವರ ಕುಟುಂಬದ ಸದಸ್ಯರ ರಕ್ಷಣೆಗೆ ಅಗತ್ಯ ಕ್ರಮವಹಿಸುವಂತೆ ಒತ್ತಾಯಿಸುತ್ತದೆ.ರಾಜ್ಯ ಚುನಾವಣಾ ಆಯೋಗವು ಕೂಡ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯುವಂತೆ ಅಗತ್ಯ ಬಿಗಿ ಬಂದೋಬಸ್ತಗೆ ಕ್ರಮ ವಹಿಸುವಂತೆ ಸಿಪಿಐಎಂ ಒತ್ತಾಯಿಸುತ್ತದೆ. ಬಾಗೇಪಲ್ಲಿಯಲ್ಲಿ ಬಿಜೆಪಿ ನಡೆಸಿದ ಈ ದುಷ್ಕೃತ್ಯವನ್ನು ಖಂಡಿಸಿ ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ ಸಿಪಿಐಎಂ ಕಾರ್ಯದರ್ಶಿ ಆರ್ ಭಾಸ್ಕರ್ ರೆಡ್ಡಿ, ಜಂಬಯ್ಯ.ನಾಯಕ, ತಾಯಪ್ಪ ನಾಯಕ, ಬಿಸಾಟಿ ಮಹೇಶ್, ಈಡಿಗರ ಮಂಜುನಾಥ್, ಕರುಣಾನಿಧಿ, ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಮಾಲತೇಶ ಶೆಟ್ಟರ್. ಹೊಸಪೇಟೆ