ಕೊಟ್ಟೂರು ಪಟ್ಟಣ ಪಂಚಾಯತಿಯ ಅವ್ಯವಸ್ಥೆ ಆಗರ
ಕೊಟ್ಟೂರು ಮೇ.9
ಕೊಟ್ಟೂರು ಪಟ್ಟಣ ಪಂಚಾಯಿತಿಯ ಇತ್ತೀಚಿನ ಕಾರ್ಯವೈಖರಿಯ ಬಗ್ಗೆ ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಹಾಯಕ ಆಯುಕ್ತರ ವಸತಿ ನಿವೇಶನದ ಆದೇಶವನ್ನು ಉಲ್ಲಂಘಿಸಿ, ಅದೇ ವಸತಿಗಾಗಿ ನೀಡಿರುವ ಅನುಮತಿಯನ್ನು ಲೆಕ್ಕಿಸದೆ ಅದನ್ನು ವಾಣಿಜ್ಯ ಬಳಕೆಗೆ ಪರಿವರ್ತಿಸಿ ತೆರಿಗೆ ಹಣ ಪಡೆದು ಮುಖ್ಯಾಧಿಕಾರಿಗಳೇ ಡೋರ್ ನಂ. ನೀಡಿ, ವಾಣಿಜ್ಯ ಕಟ್ಟಡ ಪರವಾನಿಗೆ ನೀಡಿದ್ದು, ಯಾವುದಾದರೂ ಸಂಘಟನೆ ಇವರಿಂದ ಮತ್ತು ಆರ್‌ಟಿಐ ಕಾರ್ಯಕರ್ತರಿಂದ ತಕರಾರು ಬಂದರೆ ರದ್ದು ಮಾಡಲಾಗುವುದು ಎನ್ನುವ ಷರತ್ತು ನೀಡಿ ವಾಣಿಜ್ಯ ಕಟ್ಟಡ ಪರವಾನಿಗೆ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.

ಅಲ್ಲದೇ ಖಾತೆ ಬದಲಾವಣೆಗಾಗಿ ಗರಿಷ್ಟ ೩೦ ದಿನಗಳು ಕಾಲಾವಕಾಶ ಇದ್ದರೂ ಸಹ ರಾಜಕೀಯ ಒತ್ತಡಕ್ಕೆ ಮಣಿದು ಅರ್ಜಿದಾರರನ್ನು ವಿಳಂಬ ಧೋರಣೆ ಮಾಡಿ ತಿಂಗಳುಗಟ್ಟಲೇ ಅಲೆದಾಡಿಸಿ ಪ್ರಭಾವಿ ವ್ಯಕ್ತಿಗಳ ಕಡೆಯಿಂದ ತಕರಾರು ಕೊಡಿಸಿ ಅಂತಿಮವಾಗಿ ನೀವು ನ್ಯಾಯಾಲಯಕ್ಕೆ ಹೋಗಿ ಎಂದು ಹಿಂಬರಹ ಕೊಡುವಂತಹ ಪ್ರಕರಣಗಳೂ ಸಹ ನಡೆದಿವೆ. ಈ ರೀತಿ ಪಟ್ಟಣ ಪಂಚಾಯಿತಿಯ ಶೋಷಣೆಗೆ ಒಳಗಾಗಿರುವ ವ್ಯಕ್ತಿ ಕೆ ಕೊಟ್ರೇಶ್ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿಯನ್ನು ಇಲ್ಲಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಮಾಡುತ್ತಿದ್ದಾರೆ. ಅಲ್ಲದೇ ಪಟ್ಟಣದಲ್ಲಿ ದೊಡ್ಡ ದೊಡ್ಡ ಬಿಲ್ಡರ್‍ಸ್‌ಗಳು ವಾಣಿಜ್ಯ ಮಳಿಗೆಗಳಿಗೆ ಪರವಾನಿಗೆ ಇಲ್ಲದೇ ಕಟ್ಟಿದ್ದು ಮತ್ತು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದು ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಹಾಗೂ ವಿಷಾಧನೀಯ.
ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಸರಿಯಾಗಿ ಪರಿಹಾರ ನೀಡದೇ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಪಟ್ಟಣ ಪಂಚಾಯಿತಿಯಲ್ಲಿ ಇನಾಮು ಕೊಡದೇ ಯಾವುದೇ ಕೆಲಸವೂ ನಡೆಯುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ?. ಸರ್ಕಾರಿ ಹುದ್ದೆಯಲ್ಲಿದ್ದರೂ ಸಹ ಜನಸಾಮಾನ್ಯರ ಹೊಟ್ಟೆಗೆ ಹೊಡೆದು ತಿನ್ನುವ ಇವರಿಗೆ ತಿಂದ ಅನ್ನ ಜೀರ್ಣವಾಗುವುದಾದರೂ ಹೇಗೆ ಎಂಬ ಆಕ್ರೋಶದ ಮಾತುಗಳನ್ನು ಮಾರೆಪ್ಪ ಪತ್ರಿಕೆಗೆ ದೂರಿದರು. ಚುನಾವಣೆ ಇರುವುದನ್ನೇ ಎನ್‌ಕ್ಯಾಷ್ ಮಾಡಿಕೊಂಡಿರುವ ಅಧಿಕಾರಿಗಳು ತಾವು ಹೇಳಿದ್ದೇ ಕಾನೂನು ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಈ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಆದಷ್ಟು ಬೇಗನೇ ಪಟ್ಟಣ ಪಂಚಾಯಿತಿಯ ಕಾರ್ಯವೈಖರಿಯ ಮೇಲೆ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಇಡೀ ಪಟ್ಟಣ ಪಂಚಾಯಿತಿಗೆ ಹೊಸ ಆಯಾಮ ನೀಡಬೇಕಿದೆ ಎಂದು ಪಟ್ಟಣದ ಸಾರ್ವಜನಿಕರು ಎಂ. ಶ್ರೀನಿವಾಸ್, ಮಂಜುನಾಥ್,ವಿರೇಶ್,ಅಭಿಪ್ರಾಯ ಪಟ್ಟಿದ್ದಾರೆ.
ತಾಲೂಕ ವರದಿಗಾರರು : ಪ್ರದೀಪ್. ಕುಮಾರ್. ಸಿ-ಕೊಟ್ಟೂರು