ಖಾನಹೊಸಹಳ್ಳಿಯ ಎಸ್.ಕೆ. ಡಿ. ಡಿ.ವಿ ಪ್ರೌಢಶಾಲೆಯಲ್ಲಿ ಜರುಗಿದ ಗುರುವಂದನಾ ಕಾರ್ಯಕ್ರಮ …
ಖಾನಹೊಸಹಳ್ಳಿ ಮೇ.14





ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಲು ಗುರುಗಳು ಮತ್ತು ಹಿರಿಯರಿಗೆ ಗೌರವ ಕೊಡಬೇಕು, ವಿದ್ಯಾರ್ಥಿಗಳೇ ಒಟ್ಟಾಗಿ ಗುರುವೃಂದವನ್ನು ಸೇರಿಸುವ 2005-6 ನೇ ಸಾಲಿನ ವಿದ್ಯಾರ್ಥಿನಿಯರ ಇಂತಹ ಕಾರ್ಯ ಶ್ಲಾಘನೀಯ. ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಂ.ಬಿ. ರುದ್ರಯ್ಯ ಅವರು ಅಭಿಪ್ರಾಯಪಟ್ಟರು. ಖಾನಹೊಸಹಳ್ಳಿ ಪಟ್ಟಣದ ಎಸ್. ಕೆ. ಡಿ. ಡಿ. ವಿ ಪ್ರೌಢಶಾಲೆಯ ಆವರಣದಲ್ಲಿ 2005-6 ನೇ ಸಾಲಿನ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೇ ವೇಳೆ ಶಿಕ್ಷಕರಾದ ಮಹದೇವಪ್ಪ ಆರ್ ಮಾತನಾಡಿ ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯ ಎಂದರು. ಈ ವೇದಿಕೆಯಲ್ಲಿ ಎಲ್ಲಾ ಗುರುಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಶಾಲೆಯ ಶಿಕ್ಷಕರಾದ ಬಿ.ಆರ್ ಬಸವರಾಜ, ಕೆ ರವೀಂದ್ರ, ಕಾಸಿನಾಥ್, ಜಿ ಈಶ್ವರ ಗೌಡ್ರು, ಯು ಹಿರೇಮಠ, ಬಸವರಾಜಯ್ಯ ಕೆಎಂ, ಕೆ ಎಲ್ ಶಿವಕುಮಾರ್, ವಿ ಪ್ರಕಾಶ್, ಶಿಕ್ಷಕಿ ಪುನೀತ, ಮಂಜುಳಾ, ನಾಗರತ್ನ, ಸಹನಾ, ಪ್ರಾರ್ಥನೆ ಆನಂದ್, ಶಿವಕುಮಾರ್ ಸ್ವಾಗತಿಸಿದರು, ಶಿವನಗೌಡ ನಿರೂಪಿಸಿ ವಂದಿಸಿದರು. ಅವಿನಾಶ್, ಶಶಿಕುಮಾರ್, ರಾಕೇಶ್ ದಳವಾಯಿ ಸೇರಿದಂತೆ ಹಳೆ ವಿದ್ಯಾರ್ಥಿಗಳು ಇದ್ದರು. ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ