ತಾಡಪತ್ರಿಗಾಗಿ ಅರ್ಜಿ ಆಹ್ವಾನ.
ಇಂಡಿ ಮೇ.17

ಇಂಡಿ ರೈತರಿಗೆ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಕೊಡಮಾಡುವ ತಾಡಪತ್ರಿಗಳಿಗಾಗಿ ಅರ್ಜಿ ಸಲ್ಲಿಸಲು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.18*24 ಅಳತೆಯ ತಾಡಪತ್ರಿ ವಿತರಿಸಲಾಗುತ್ತಿದ್ದು ವರ್ಗವಾರು ನಿಗದಿತ ಗುರಿ ಮೀರಿ ಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ತಾಡಪತ್ರಿಗಳನ್ನು ವಿತರಿಸಲಾಗುವದು. ಅರ್ಜಿ ಸಲ್ಲಿಸಲು ಮೇ.25 ಕೊನೆಯ ದಿನವಾಗಿರುತ್ತದೆ ಎಂದು ಏವೂರ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು:ಬೀ.ಎಸ್.ಹೊಸೂರ್. ವಿಜಯಪುರ