ಕರ್ನಾಟಕ ಪತ್ರಕರ್ತರ ಸಂಘದ ಮೊದಲನೇ ಪತ್ರಿಕಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ.
ಕೊಟ್ಟೂರು ಜು.07

ಕೊಟ್ಟೂರು ತಾಲೂಕಾ ಘಟಕದ ವತಿಯಿಂದ ಕರ್ನಾಟಕ ಪತ್ರಕರ್ತರ ಸಂಘದ ಪ್ರಥಮ ಪತ್ರಿಕಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ ಶನಿವಾರ ನಡೆಯಿತು. ಪಟ್ಟಣದ ಬಾಲಾಜಿ ಕಲ್ಯಾಣ ಮಂಟದಲ್ಲಿ ಆಯೋಜಿಸಲಾಗಿದ್ದ ಪ್ರಥಮ ಪತ್ರಿಕಾ ದಿನಾಚಣೆ ಹಾಗೂ ರಾಮ್ಯ ಮಟ್ಟದ ಕಾರ್ಯಕಾರಿಣಿ ಸಭೆ ಸಮಾರಂಭದ ಉದ್ಘಾಟನೆಯನ್ನು ರಾಜ್ಯಾಧ್ಯಕ್ಷರಾದ ಮುರುಗೇಶ ಬಿ. ಶಿವಪೂಜೆ ನೆರವೇರಿಸಿ ಮಾತನಾಡಿದರು.ಡಿಜಿಟಲ್ ಮಾಧ್ಯಮದ ಮೇಲೆ ಜನರ ನಂಬಿಕೆ ಈಗ ಕಳೆದು ಹೋಗುತ್ತಿದೆ, ಇದನ್ನು ನಾನು ಹೇಳುತ್ತಿಲ್ಲ, ಅನೇಕ ಹೈಕೋರ್ಟ್ ಪೀಠದ ನ್ಯಾಯಾಧೀಶರು, ಆಂತರಿಕ ಸರಕಾರದ ಗುಪ್ತದಳ ಹಾಗೂ ಸಾರ್ವಜನಿಕವಾಗಿ ಈಗ ಮಾತಾನಾಡುತ್ತಿದ್ದಾರೆ. ಡಿಜಿಟಲ್ ಮಾಧ್ಯಮ ಎಷ್ಟೇ ಮುಂದುವರೆದರೂ ಪತ್ರಿಕೆಗಳ ಮೌಲ್ಯ ಯಾವತ್ತೂ ಕಡಿಮೆ ಆಗುವುದಿಲ್ಲ ಎಂದು ಹೇಳಿದರು. ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ವಿಮರ್ಶಕರಾದ ಚಿಕ್ಕಮಗಳೂರಿನ ಡಾ. ಸತ್ಯನಾರಾಯಣ ಅವರು ಬಹಳ ಮಾರ್ಮಿಕವಾಗಿ ಪತ್ರಿಕಾ ರಂಗದ ಜವಾಬ್ದಾರಿ, ಪತ್ರಕರ್ತರ ಪ್ರಾಮುಖ್ಯತೆ ಮತ್ತು ಕುವೆಂಪು ಅವರು ಬದುಕಿನಲ್ಲಿ ಪತ್ರಿಕೆ ಯಾವ ರೀತಿ ಪರಿಣಾಮ ಬೀರುತ್ತೆಂಬುದನ್ನು ಮತ್ತು ಕೆಲವು ಹಿರಿಯ ಪತ್ರಿಕೆಯ ಸಂಪಾದಕರ ವಿಚಾರಗಳನ್ನು ಬಹಳ ಪ್ರಸ್ತುತವಾಗಿ ಉಪನ್ಯಾಸ ನೀಡಿದರು. ವೀರನಗೌಡ ಪಾಟೀಲ್ ರವರು ಮಾತನಾಡಿ ಯಾವುದೇ ಒಂದು ಪ್ರಕರಣಗಳಲ್ಲಿ ನಾವಾಗಲಿ, ತಾವಾಗಲಿ ಬಹಳ ಅಧ್ಯಯನ ಮಾಡಿ ಅದರ ಬಗ್ಗೆ ಪೂರ್ಣ ವರದಿ ಮಾಡಬೇಕು, ಹಾಗೆ ಅನೇಕರು ವಾಸ್ತವಿಕ ಸತ್ಯ ಅರಿಯದೇ ಅದೇ ಸುದ್ದಿಯನ್ನು ಕಾಪಿ ಮಾಡಿ ಬಿತ್ತರಿಸುವುದು ಸರಿ ಅಲ್ಲ ನೂರಾರು ಜನ ಉತ್ತಮ ಪತ್ರಕರ್ತರ ಮಧ್ಯ ಇಂತಹ ಒಂದು ಸುಳ್ಳು ಸುದ್ದಿ ಬಿತ್ತರಿಸಿದಾಗ ಪತ್ರಕರ್ತರ ಮೌಲ್ಯ ಕುಂಠಿತವಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ವಿ.ಟಿ.ಎಸ್. ತಿಪ್ಪೇಸ್ವಾಮಿ ವೆಂಕಟೇಶ್, ಕೆ.ಪಿ.ಸಿ.ಸಿ. ಸದಸ್ಯರಾದ ಗೂಳಿ ಮಲ್ಲಿಕಾರ್ಜುನ, ವಿಜಯನಗರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಬಿ.ಎಚ್.ಎಸ್.ರಾಜು, ಕೊಟ್ಟೂರು ತಾಲ್ಲೂಕು ಅಧ್ಯಕ್ಷರಾದ ಕೆ.ಕೊಟ್ರೇಶ್, ಇನ್ನು ಅನೇಕರು ಮಾತನಾಡಿದರು.ಈ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಾದ ದೊಡ್ಡಬಸಪ್ಪ ರೆಡ್ಡಿ ರಾಜ್ಯಾಧ್ಯಕ್ಷರು ಕರ್ನಾಟಕ ಪತ್ರಕರ್ತರ ರಾಜ್ಯ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ,ಎನ್.ಎಫ್.ಐ.ಡಬ್ಲು. ರಾಜ್ಯ ಕಾರ್ಯದರ್ಶಿ ರೇಣುಕಮ್ಮ, ವಿಶೇಷ ಸನ್ಮಾನ, ರಾಜ್ಯಪ್ರಶಸ್ತಿ ಪಡೆದ ವಿಜಯವಾಣಿ, ಹಾಫೀಜ್ ಇಮ್ರಾನ್ ಮೌಲ್ವಿ, ಡಾಕ್ಟರೇಟ್ ಪದವಿ ಪಡೆದ ಸತೀಶ್ ಪಾಟೀಲ್, ರವಿಕುಮಾರ್.ಎಂ., ಶೋಭಾ ಪಾಟೀಲ್, ಗಂಗಾಧರ.ಎಲ್. ಶಿಕ್ಷಕರಾದ ವೆಂಕನಗೌಡ ಹಟ್ಟಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕವಿತಾ.ಬಿ. ಶಾಲಿನಿ, ಪ್ರಕೃತಿ.ಕೆ.ಎಂ. ಅಸಗೋಡ್ ಹಾಲಮ್ಮ, ಬೇವೂರು ಅಜ್ಜಪ್ಪ ಸೈನಿಕರು, ಎಚ್.ನಾಗೇಶ್, ಆಕಾಶ್ ರಾಂಪುರ್, ಕೊಟ್ರೇಶ್ ಗೊಲ್ಲರಹಳ್ಳಿ, ನಿವೃತ್ತ ಪೌರ ಕಾರ್ಮಿಕರಾದ ದೋಟಾಲ್ ಪ್ರಕಾಶ್, ಮತ್ತು ಪೌರ ಕಾರ್ಮಿಕರು ಸುಭದ್ರಮ್ಮ, ಮಾದೂರ್ ಕೊಟ್ರೇಶ್, ಗೋಣೆಪ್ಪ, ಪತ್ರಿಕಾ ವಿತರಕರು ಶಂಕರ್ ಕುದುರಿ ಮೂಟಿ, ಅರಮನೆ ರೇವಣ್ಣ , ಸಂದೀಪ್ ಕುಮಾರ್ ,ಮಹಾಂತಪ್ಪ, ಶಿವಮೂರ್ತಿರವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ನಂತರ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ ನಡೆಯಿತು. ಸಂಘಟನೆಯ ಬಗ್ಗೆ ಹಲವಾರು ವಿಷಯಗಳು ಚರ್ಚಿಸಿದರು. ಈ ಸಂದರ್ಭದಲ್ಲಿ ಹಲವು ಜಿಲ್ಲೆಗಳಿಂದ ಜಿಲ್ಲಾಧ್ಯಕ್ಷರುಗಳು, ತಾಲ್ಲೂಕು ಅಧ್ಯಕ್ಷರುಗಳು, ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿ ಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಸೋಮಶೇಖರ ಹಿರೇಮಠ, ಕಾರ್ಯಾಧ್ಯಕ್ಷರು, ವಿಜಯನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಕಾಕುಬಾಳ್ ಪ್ರಕಾಶ್, ಉಪಾಧ್ಯಕ್ಷರಾದ ಭರಮಯ್ಯ, ರಾಮು ಅಸ್ರಿತ್, ಜಿಲ್ಲಾ ಗೌರವ ಅಧ್ಯಕ್ಷರಾದ ಕೆ.ಎಸ್. ಮುರಳೀಧರ, ಜಿಲ್ಲಾ ಕಾರ್ಯದರ್ಶಿ ಆರ್.ರಾಮಜೀನಾಯ್ಕ, ರಾಜ್ಯ ಸಲಹಾ ಸಮಿತಿ ಸದಸ್ಯರಾದ ಡಿ.ಎಂ.ಈಶ್ವರಪ್ಪ, ಬಾಗಲಕೋಟೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ.ಬಿ.ವಿಜಯಶಂಕರ್, ಕೂಡ್ಲಿಗಿ ತಾಲ್ಲೂಕು ಅಧ್ಯಕ್ಷರಾದ ಸಾಲುಮನಿ ರಾಘವೇಂದ್ರ, ತೆಗ್ಗಿನಕೇರಿ ಹನುಮಂತಪ್ಪ ವಕೀಲರು ಕೊಟ್ಟೂರು. ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಸ್.ಎಂ.ಗುರುಪ್ರಸಾದ್ ನಿರೂಪಣೆ ಹಾಗೂ ವಂದಿಸಿದು, ಕಾರ್ಯಕ್ರಮದುದ್ದಕ್ಕೂ ಆರಕ್ಷಕ ಸಿಬ್ಬಂದಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.