ಭಾರತೀಯ ಬೌದ್ದ ಮಹಾ ಸಭಾ ವತಿಯಿಂದ ದಲಿತರ ಕೇರಿಗಳಿಗೆ ದಮ್ಮ ದೀಪ ಪಂಚಶೀಲ ಪಾದಯಾತ್ರೆ.

ಬಳ್ಳಾರಿ ಜು.07

ಭಾರತೀಯ ಬೌದ್ಧ ಸಮಿತಿ ಜಿಲ್ಲಾ ಬಳ್ಳಾರಿ ವತಿಯಿಂದ ದಿನಾಂಕ 7/7/2024 ರಂದು ಧಮ್ಮ ದೀಪ ಮತ್ತು ಪಂಚಶೀಲ ಪಾದಯಾತ್ರೆಯ ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲೆಯಾದ್ಯಂತ ಆಯಾ ತಾಲೂಕಿನಲ್ಲಿ ಇರುವಂತ ನಗರ ಹಳ್ಳಿ ಗ್ರಾಮಗಳಿಗೆ ಹೋಗಿ ದಲಿತ ಜನರಿಗೆ ಬೌದ್ಧ ಧರ್ಮದ ಬಗ್ಗೆ ಅರಿವು ಮೂಡಿಸಲಿಕ್ಕಾಗಿ ಪ್ರಚಾರ ಮಾಡಬೇಕಾಗಿದ್ದ ರಿಂದ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಬಳ್ಳಾರಿ ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೊಂಡಂತ ಶ್ರೀ ಮುಂಡರಗಿ ನಾಗರಾಜ್ ಅಧ್ಯಕ್ಷರು ಡಾ ಬಾಬು ಜಗಜೀವನರಾಮ್ ಚರ್ಮ ಶಿಲ್ಪಿ ಅಭಿವೃದ್ಧಿ ಮಂಡಳಿ ಬೌದ್ಧ ಧರ್ಮ 2 ಸಾವಿರ ವರ್ಷಗಳ ಹಿಂದೆಯೇ ಎಲ್ಲಾರೂ ಒಂದೇ ಎಂಬುದನ್ನು ವಿಶ್ವಕ್ಕೆ ಸಾದರ ಪಡಿಸಿದ ಬೌದ್ಧ ಧರ್ಮ ಎಲ್ಲಾ ಧರ್ಮಗಳಿಗಿಂತಲೂ ಶ್ರೇಷ್ಠ ಧರ್ಮ ಆಗಿದೆ ಬೌದ್ಧ ಧರ್ಮದ ಚರಿತ್ರೆಯನ್ನು ಸವಿಸ್ತಾರವಾಗಿ ಮಾತನಾಡಿದರು. ಹಾಗೂ ಸಂವಿಧಾನ ಶಿಲ್ಪಿ ಭಾರತರತ್ನ ವಿಶ್ವ ಜ್ಞಾನಿ ಬೋಧಿ ಸತ್ವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಮಹಾರಾಷ್ಟ್ರದ ನಾಗಪೂರಿನಲ್ಲಿ 1956 ರಲ್ಲಿ ಸುಮಾರು 910 ಲಕ್ಷ ಜನರೊಂದಿಗೆ ಬೌದ್ಧ ಧರ್ಮ ದೀಕ್ಷವನ್ನು ಸ್ವೀಕರಸಿದ ರಿಂದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಂತೆ ಇಂದು ಬದಲಾವಣೆ ನಾವು ನೀವು ಎಲ್ಲಾರೂ ಬೌದ್ಧ ಧರ್ಮದ ದಿಕ್ಕಿನ ಕಡೆಗೆ ಹೋಗಬೇಕಾಗಿ ಇರುವುದು ಅವಶ್ಯಕತೆ ನಮ್ಮೆಲ್ಲರದಾಗಿದೆ. ಹಾಗೂ ಬಳ್ಳಾರಿಯಲ್ಲಿ ಹನುಮೇಶಪ್ಪ (ಕಮಲ್ ರತ್ನ) ಬಂತೇಜಿ ಆಗಿರುವುದು ಸಂತೋಷದ ಸಂಗತಿ ಬೌದ್ಧ ಧರ್ಮದ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರು ಇವರನ್ನು ಕರಿಸಿ ಕೊಂಡು ಮಾಡಬೇಕೆಂದು ಹೇಳಿದರು ಮತ್ತು 2 ಅಡಿಯ ಬುದ್ಧನ ಮೂರ್ತಿಯನ್ನು ಹನುಮೇಶಪ್ಪ ಕಮಲ್ ರತ್ನ ಬಂತೆಜಿಗೆ ದಾನಾರ್ಥವಾಗಿ ನೀಡಿದರು. ಹನುಮೇಶಪ್ಪ ಕಮಲ್ ರತ್ನ ಬಂತೆ ಜಿ ಜಿಲ್ಲಾಧ್ಯಕ್ಷರು ಭಾರತೀಯ ಬೌದ್ಧ ಮಹಾಸಭಾ ಬುದ್ಧನ ಪಂಚಶೀಲ ಬೋಧಿಸಿದರು ಹಾಗೂ ಮುಂದೆ ನಾನು ತಾಲೂಕಿನ ಅತ್ಯಂತ ಬೌದ್ಧ ಧರ್ಮದ ಬಗ್ಗೆ ಪ್ರಚಾರದ ಸಮಯದಲ್ಲಿ ಎಲ್ಲಾ ದಲಿತ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನನಗೆ ಸಹಕರಿಸಿ ಕೊಟ್ಟಾಗ ಮಾತ್ರ ನಮ್ಮ ಮುಖಂಡರ ಎಲ್ಲಾರ ಸಹಕಾರ ಇನ್ನೂ ಮುಂದೆ ನನಗೆ ಸದಾ ಕಾಲವಾಗಿ ಇದ್ದಾಗ ಮಾತ್ರ ನಾನು ಬೌದ್ಧ ಧರ್ಮವನ್ನು ಪ್ರಚಾರ ಮಾಡಲಿಕ್ಕೆ ಅನುಕೂಲವಾಗುತ್ತದೆ ತಾವು ಯಾವುದೇ ಸಹಕಾರ ಮತ್ತು ಸಹಾಯ ಮಾಡಿ ಕೊಡುತ್ತೀರೆಂದು ನನಗೆ ದಲಿತ ಮುಖಂಡರಲ್ಲಿ ಬಹಳಷ್ಟು ವಿಶ್ವಾಸವಿದೆ ಎಂದು ದಲಿತ ಮುಖಂಡರಲ್ಲಿ ಮನವಿ ಮಾಡಿ ಕೊಂಡರು ಶ್ರೀಎಂ ಎರೆಣ್ಣ ನಿವೃತ್ತಿ ಬ್ಯಾಂಕಿನ ವ್ಯವಸ್ಥಾಪಕರು ಮಾತನಾಡಿದರು. ಶ್ರೀಮತಿ ಡಿ ಯಂಕಮ್ಮ ಕಾರ್ಯಕ್ರಮವನ್ನು ಉದ್ದೇಶಿಸಿ ಬೌದ್ಧ ಧರ್ಮದ ಸರಳತೆ ಮತ್ತು ಅನುಕರಣೆಯಾಗಿದು ಜಗತ್ತಿಗೆ ಶಾಂತಿ ತೋರಿದ ಧರ್ಮವಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಂತ. ಸ್ವರೂಪ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಭಾರತೀಯ ಬೌದ್ಧ ಮಹಾ ಸಭಾ ಡಾ ಮೋರೆ ಬೀದರ್ ಬೌದ್ಧ ಉಪಸಕರು ಕೆ ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಲಕ್ಷ್ಮಣ ಜಿಲ್ಲಾ ಕಾನೂನು ಸಲಹೆಗಾರರು ಭಾರತೀಯ ಬೌದ್ಧ ಮಹಾಸಭಾ ಶೇಖರಪ್ಪ ನಿರ್ದೇಶಕರು ಭೀಮರಾವ್ ತರಬೇತಿ ಕೇಂದ್ರ ಬಳ್ಳಾರಿ ಇನ್ನಿತರರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button