ಪಟ್ಟಣದಲ್ಲಿ ಅದ್ದೂರಿಯಾಗಿ 70 ನೇ. ಕನ್ನಡ ರಾಜ್ಯೋತ್ಸವ ಆಚರಣೆ ಯೊಂದಿಗೆ – ಸಾಧಕರಿಗೆ ಗೌರವ ಸನ್ಮಾನ.
ಆಲಮೇಲ ನ.02

ಕನ್ನಡ ಭಾಷೆ ಕನ್ನಡ ನೆಲ ಕನ್ನಡ ಜನ ಕನ್ನಡವೇ ನಮ್ಮ ಉಸಿರು ನಾವೆಲ್ಲ ಕನ್ನಡ ತಾಯಿಯ ಮಕ್ಕಳು ಕನ್ನಡವನ್ನು ಉಳಿಸಿ ಬೆಳೆಸೋಣ ಪ್ರತಿಯೊಂದು ಅಂಗಡಿ ಮುಂಗಟ್ಟುಗಳು ಮುಂದೆ ಕನ್ನಡದ ಫಲಕಗಳನ್ನು ಅಳವಡಿಸುವುದರೊಂದಿಗೆ ಕನ್ನಡ ಅಭಿಮಾನವನ್ನು ಎತ್ತಿ ತೋರಿಸೋಣ ನಾವೆಲ್ಲ ಕನ್ನಡದ ಮಕ್ಕಳು ಎಂದು ಸಾರುವ ರೀತಿಯಲ್ಲಿ ಕನ್ನಡ ರಾಜ್ಯೋತ್ಸವವು ಅದ್ದೂರಿಯಾಗಿ ಆಚರಣೆ ಮಾಡಿ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮೋರುಟಿಗಿಯ ಕಲ್ಪವೃಕ್ಷ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೊಫೆಸರ್ ಸಿ.ಎಸ್ ಆನಂದ್. ಕಾರ್ಯಕ್ರಮದಲ್ಲಿ ಮಾತನಾಡಿದರು.ಆಲಮೇಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸಾಧಿಕ್ ಸುಂಬಡ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ತಹಶೀಲ್ದಾರ್ ಎಸ್.ಎಸ್ ನಾಯ್ಕಲ್ ಮಠ. ಪಿ.ಎಸ್.ಐ ಅರವಿಂದ್ ಅಂಗಡಿ, ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಅಶೋಕ ಗೌಡ ಕೊಳಾರಿ, ಎಪಿಎಂಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಕ.ಸಾ.ಪ ಅಧ್ಯಕ್ಷ ಶಿವಶರಣ ಗುಂದಗಿ ಶಿಕ್ಷಕರು, ಸರಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಬಿರಾದಾರ್. ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸುರೇಶ್ ನಾಯಕ್, ಕಂದಾಯ ನಿರೀಕ್ಷಕ ಎಂ.ಎ ಅತ್ತಾರ್ ಸ್ವಾಗತಿಸಿದರು. ಅಪ್ಪು ಶೆಟ್ಟಿ ನಿರೂಪಿಸಿದರು. ಸಾಧಕರು ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವ ಸಾಧಕರಿಗೆ ಗೌರವ ಸನ್ಮಾನ ತಾಲೂಕ ಆಡಳಿತ ವತಿಯಿಂದ ನೆರವೇರಿತು. ಸಾಧಕರಾದ ಶುಭಮಂಗಳ ಜೋಗುರ್ (ಸಾಹಿತಿ) ಗುರು ಹಿರೇಮಠ ದೇವಣಗಾoವ್ (ಪತ್ರಿಕೋದ್ಯಮ) ವಿವೇಕಾನಂದ ಪಾಟೀಲ್ (ಶಿಕ್ಷಣ ಕ್ಷೇತ್ರ) ಅಶೋಕ್ ಯಂಪುರೆ (ರಂಗಭೂಮಿ ಕಲಾವಿದ) ರಾಣಿ (ಜಾನಪದ) ಮೆತ್ರಾಬಾಯ್ (ಸಮಾಜ ಸೇವಕಿ) ಅನಿಲ್ ದಶವಂತ್ (ಸರ್ಕಾರಿ ಸೇವೆ ) ಹತ್ತನೇ ತರಗತಿಯಲ್ಲಿ ಕನ್ನಡ ಭಾಷೆಗೆ 125 ಕ್ಕೆ 125 ಅಂಕಗಳನ್ನು ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ತಹಶೀಲ್ದಾರ್ ಎಸ್.ಎಸ್ ನಾಯ್ಕಲ್ ಮಠ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನ್ನಡಾಂಬೆಯ ಭಾವ ಚಿತ್ರವನ್ನು ಮೆರವಣಿಗೆ ತಂಡಗಳು ಅದ್ದೂರಿಯಾಗಿ ನಡೆಯಿತು ಈ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳಿಂದ ಸೇವೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಕನ್ನಡ ಅಭಿಮಾನಿಗಳು ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು, ಭಾಗಿಯಾಗಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

