ರೈಲಿಗೆ ಬಿದ್ದು ಆತ್ಮಹತ್ಯೆ.
ತರೀಕೆರೆ ಮೇ.29
ತರೀಕೆರೆ ಎಪಿಎಂಸಿ ಯಾರ್ಡ್ ನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂಎಸ್ ಮಂಜುನಾಥ 23 ವರ್ಷ ಎಂಬುವನು ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂದು ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಯುಡಿಆರ್ ನಂ 12 / 2023 ಕೇಸು ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ, ತನಿಖಾ ಅಧಿಕಾರಿಗಳಾದ ರೈಲ್ವೆ ಪೊಲೀಸ್ ಎ ಎಸ್ ಐ ರಮೇಶ ಆಚಾರಿ ಮತ್ತು ಪಿ ಸಿ ರಘು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ ಕೋಡಿ ಕ್ಯಾಂಪು 5ನೇ ಕ್ರಾಸ್ ವಾಸಿಯಾಗಿದ್ದು,IPL ಕ್ರಿಕೆಟ್ ಬಿಡ್ಡಿಂಗ್ ನಲ್ಲಿ ಸೋತು ಸಾಲದ ಸುಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು, ಮಾರುಕಟ್ಟೆಯಲ್ಲಿ ಜನರು ಗುಸು-ಗುಸು ಮಾತನಾಡಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ಮೃತ ಮಂಜುನಾಥನಿಗೆ ಒಬ್ಬ ಅಣ್ಣ ಮತ್ತು ತಂಗಿ, ತಾಯಿ ಇದ್ದು, ಮೃತ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಯ ನಂತರ ತಾಯಿ ಪಾರ್ವತಮ್ಮರವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ