ಸಾರ್ವಜನಿಕರ ಕೆಲಸಗಳನ್ನು ದೇವರ ಕೆಲಸ ಅಂತಾ ತಿಳಿದು ಮಾಡಿ ಎಂದು ತಾಲೂಕಾ ಆಡಳಿತ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯ ಕರೆ ಕೊಟ್ಟ ಶಾಸಕರು.
ಮೊಳಕಾಲ್ಮೂರು ಮೇ.29

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಇಂದು ತಾಲೂಕು ಆಡಳಿತ ಸೌಧದಲ್ಲಿ ಆಯಾ ಇಲಾಖೆ ಅಧಿಕಾರಿಗಳನ್ನು ಸಭೆ ಕರೆಸಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಎಚ್ಚರಿಕೆ ಕೊಟ್ಟರು ಮತ್ತು ಕೃಷಿ ಇಲಾಖೆ ಅಧಿಕಾರಿಯನ್ನು ಈಗ ಮುಂಗಾರು ಹಂಗಾಮಿ ಎಂದು ರೈತರಿಗೆ ಬೀಜ ಗೊಬ್ಬರ ಸರಿಯಾದ ರೀತಿಯಿಂದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಕೃಷಿ ಇಲಾಖೆ ಅಧಿಕಾರಿಗೆ ಎಚ್ಚರಿಕೆ ಕೊಟ್ಟರು ಮತ್ತು ಶಿಕ್ಷಣ ಇಲಾಖೆ ವತಿಯಿಂದ ಶಾಲೆ ಮಕ್ಕಳಿಗೆ ಸಮವಸ್ತ್ರ ಬುಕ್ಸ್ ಹಾಸ್ಟೆಲ್ ಗಳ ಜವಾಬ್ದಾರಿ ಎಲ್ಲಾ ಬಡ ಮಕ್ಕಳಿಗೆ ಸರಿಯಾದ ರೀತಿಯಿಂದ ಹಾಸ್ಟೆಲ್ ದೊರಕಿಸಿ ಕೊಡಬೇಕೆಂದು ಶಾಸಕರು ಆಯಾ ಸಂಬಂಧಪಟ್ಟ ಅಧಿಕಾರಿಗೆ ಎಚ್ಚರಿಕೆ ಕೊಟ್ಟರು ಮತ್ತು ಯದ್ದಲ ಬೊಮ್ಮಯ್ಯನ ಹಟ್ಟಿಯಿಂದ 30 ಕೋಟಿ ಪಿಡಬ್ಲ್ಯೂಡಿ ರಸ್ತೆ ಮಂಜೂರಾಗಿದ್ದು ಎರಡು ವರ್ಷದಿಂದ ಕಾಮಗಾರಿ ಸರಿಯಾಗಿ ಸಾಗಿಲ್ಲವೆಂದು ಮೊಳಕಾಲ್ಮುರು ಪಟ್ಟಣದ ಸಾರ್ವಜನಿಕರು ಗೋಳು ಕೇಳದಂತಾಗಿದೆ.

ರಸ್ತೆ ಅಗಲೀಕರಣ ಮತ್ತು ಪೈಪ್ ಲೈನ್ ಗಳು ಕುಂಠಿತವಾಗಿದ್ದರಿಂದ ರಸ್ತೆಯ ಎಡಭಾಗ ಬಲಭಾಗ ಚರಂಡಿ ವ್ಯವಸ್ಥೆ ಇನ್ನೂ ಒಂದು ತಿಂಗಳ ಒಳಗೆ ಪೂರ್ಣಗೊಳಿಸಿ ಹಸನಾಗಿ ರಸ್ತೆ ಮಾಡಬೇಕೆಂದು ಇಂಜಿನೀಯಾರ್ ಗೆ ಮಾನ್ಯ ಶಾಸಕರು ಎಚ್ಚರಿಕೆ ಕೊಟ್ಟರು ಮೊಳಕಾಲ್ಮೂರು ತಾಲೂಕಿನಾದ್ಯಾಂತ ಸಾರ್ವಜನಿಕರ ಸಮಸ್ಯೆಗಳನ್ನು ಸರಿಯಾಗಿ ಮಾಡಿಸಿ ಕೊಡಬೇಕೆಂದು ಮತ್ತು ಬಡ ಜನಗಳ ಬಿಪಿಎಲ್ ರೇಷನ್ ಕಾರ್ಡ್ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಾರ್ವಜನಿಕರಿಗೆ ಮಾಡಿಸಿ ಕೊಡಬೇಕೆಂದು ಆಹಾರ ಇಲಾಖೆ ಅಧಿಕಾರಿಯವರಿಗೆ ಮಾನ್ಯ ಶಾಸಕರು ಎಚ್ಚರಿಕೆ ಕೊಟ್ಟರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು