ಶಾಲಾ ಕಾಲೇಜು ವೇಳೆಗೆ ಸರಿಯಾಗಿ ಬಸ್ ಸಂಚಾರ ಆರಂಭಿಸುವಂತೆ ಗ್ರಾಮದ ವಿದ್ಯಾರ್ಥಿಗಳು – ಸಾರಿಗೆ ಘಟಕದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಾದೂರು ಡಿ.25

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾಗಿ ಹೆಚ್ಚುವರಿ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ಗ್ರಾಮದ ವಿದ್ಯಾರ್ಥಿಗಳು ಸಾರಿಗೆಘಟಕದ ಅಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು. ಮುಖಂಡ ಕೆ.ಮಹೇಶ್ವರ ಮಾತನಾಡಿ, ಗ್ರಾಮದ ಮಾರ್ಗವಾಗಿ ಕಣವಿನಾಯಕನಹಳ್ಳಿ, ಹನಸಿ ಗ್ರಾಮದ ಮಾರ್ಗವಾಗಿ 2 ಬಸ್‌ಗಳ ಸಂಚಾರವಿದೆ. ಆದರೆ, ಮಾದೂರು ಗ್ರಾಮ ತಲುಪುವ ವೇಳೆಗೆ ಭರ್ತಿಯಾಗಿರುತ್ತವೆ. ವಿದ್ಯಾರ್ಥಿಗಳು ಬಸ್ ಭರ್ತಿಯಾದ ಹಿನ್ನೆಲೆ ಆಟೊ, ಟೆಂಪೊ ಅವಲಂಬಿಸುವಂತಾಗಿದೆ.ಈ ಹಿನ್ನೆಲೆ ಮುಂಜಾನೆ ಶಾಲಾ ಕಾಲೇಜು ವೇಳೆಗೆ ಪಟ್ಟಣದಿಂದ ಮಾದೂರುವರೆಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸಾರಿಗೆ ಘಟಕದ ಅಧಿಕಾರಿ ಸಂತೋಷ್ ನಾಯ್ಕಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಗಳಾದ ಶಿವಪ್ರಕಾಶ, ಕೆ.ಮಹೇಂದ್ರ, ಪಲ್ಲವಿ, ಕೆ.ರಾಧಿಕ, ರಕ್ಷತ್, ಪುಷ್ಪಲತಾ, ಪ್ರಿಯಾಂಕಾ, ಮಲ್ಲೇಶ್, ರಮೇಶ್, ಸುಚಿತ್ರ, ಅಂಕಿತ, ನಿಸರ್ಗ, ದುರುಗೇಶ್, ಚೈತ್ರ, ಪ್ರೀತಿ, ವನಜಾಕ್ಷಿ, ಆಶಾ, ನಿಖಿಲ್, ಗಣೇಶ್, ಕಿಶೋರ, ಐಶ್ವರ್ಯ, ದುರುಗಮ್ಮ ಇತರರಿದ್ದರು. ಬಳಿಕ ಶಾಸಕರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು. ಶಾಸಕ ಕೆ.ನೇಮರಾಜ ನಾಯ್ಕ ಪ್ರತಿಕ್ರಿಯಿಸಿ, ಕೂಡಲೇ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ವೇಳೆಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಾಲತೇಶ್. ಶೆಟ್ಟರ್.ಹೊಸಪೇಟೆ