ತಾಲೂಕ ಮಟ್ಟದ ಪ್ರಗತಿ ಪರಿಶೀಲನ ಸಭೆ ನಡೆಸಿದ ಮೊಳಕಾಲ್ಮೂರು ಶಾಸಕರು.
ತಳಕು ಜೂನ್.5

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಳಕು ಹಾಗೂ ನಾಯಕನಹಟ್ಟಿ ಹೋಬಳಿ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನ ಸಭೆ ನಡೆಸಿದರು ಮತ್ತು ತಳಕು ಹೋಬಳಿ ನಾಯಕನಹಟ್ಟಿ ಹೋಬಳಿ ಸಾರ್ವಜನಿಕರಿಗೆ ಮತ್ತು ಆಯಾ ಗ್ರಾಮಗಳ ಅಭಿವೃದ್ಧಿಗಳಿಗೆ ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ ಶಾಸಕರು ಈ ಭಾಗದ ಗ್ರಾಮಗಳಿಗೆ ಸರಿಯಾದ ರೀತಿಯಿಂದ ಕಾಮಗಾರಿಗಳು ನಡೆದಿಲ್ಲ ಎಲ್ಲಾ ಮೂಲಭೂತ ಸೌಕರ್ಯಗಳು ಬಡ ಜನಗಳಿಗೆ ತಲುಪಿಲ್ಲ ಸರಿಯಾದ ರೀತಿಯಿಂದ ತಲುಪಬೇಕು.

ಮತ್ತು ರಸ್ತೆ ಚರಂಡಿ ಶಾಲೆ ಬಿಲ್ಡಿಂಗುಗಳು ಶೌಚಾಲಯಗಳು ಮನೆಗಳು ಸರ್ಕಾರದಿಂದ ಬರತಕ್ಕಂತಹ ಸಹಾಯಧನಗಳು ನನ್ನ ಮೊಳಕಾಲ್ಮುರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಒಳ್ಳೆ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಎನ್ ವೈ ಗೋಪಾಲಕೃಷ್ಣ ಶಾಸಕರು ಎಚ್ಚರಿಕೆ ನೀಡಿದರು. ಇದೆ ಸಂಧರ್ಬದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳು. ಸಿಬ್ಬಂದಿಗಳು ಮತ್ತು ಇನ್ನಿತರರು ಉಪಸ್ಥಿತಿಯಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು