ಬೆಳ್ಳಿಗಟ್ಟಿ :ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಿದ ಶಾಸಕ ಡಾll ಎನ್. ಟಿ.ಶ್ರೀನಿವಾಸ್.
ಖಾನಹೊಸಹಳ್ಳಿ ಜೂನ್.5

ಕೂಡ್ಲಿಗಿ ತಾಲ್ಲೂಕಿನ ಖಾನಹೊಸಳ್ಳಿ ಹೋಬಳಿಯ ಪ್ಲಾಸ್ಟಿಕ್ ಬಳಕೆ ಮಿತಿ ಮೀರಿ ಬಳಕೆಯಾಗುತ್ತಿರುವುದು ಅತ್ಯಂತ್ಯ ಕಳವಳಕಾರಿ ವಿಷಯವಾಗಿದೆ ಎಂದು ಶಾಸಕ ಡಾಕ್ಟರ್ ಎನ್ ಟಿ ಶ್ರೀನಿವಾಸ್ ಹೇಳಿದರು. ಇಲ್ಲಿನ ಗುಡೇಕೋಟೆ ಹೋಬಳಿ ವಲಯ ಅರಣ್ಯ ಇಲಾಖೆ ಗುಡೇಕೋಟೆ, ಬೆಳ್ಳಿಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಇಂದು ಪ್ಲಾಸ್ಟಿಕ್ ಮಾನವ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ, ಪ್ರತಿಯೊಬ್ಬರು ಮನೆಯಲ್ಲಿ ಸ್ವಚ್ಛತೆ ಆರೋಗ್ಯ ಗಿಡಗಳನ್ನು ಹಾಕಿ ಬೆಳೆಸುವುದರ ಮೂಲಕ ಪರಿಸರವನ್ನು ಸಮೃದ್ಧಿ ಅಭಿವೃದ್ಧಿ ಪಡಿಸಬೇಕು ನಮ್ಮೆಲ್ಲರ ಕರ್ತವ್ಯ. ಶಾಸಕರಾಗಿ ನಾನು ಒಂದು ವಾರಕ್ಕೆ 100 ಗಿಡಗಳನ್ನು ಹಾಕುತ್ತೇನೆ ಎಂದು ಸಂಕಲ್ಪ ಮಾಡಿದರು.ಗುಡೇಕೋಟೆ ವಲಯ ಅರಣ್ಯಾಧಿಕಾರಿ ರೇಣುಕಮ್ಮ ಮಾತನಾಡಿ, ಇಂದು ಅಡುಗೆ ಮನೆ ಪರಿಕರಗಳು ಪ್ಲಾಸ್ಟಿಕ್‍ಮಯವಾಗಿ ಆನಾರೋಗ್ಯಕ್ಕೆ ಆಹ್ವಾನ ನೀಡುತ್ತಿವೆ. ಇದರ ಬಳಕೆ ಕಡಿಮೆಯಾಗದಿದ್ದರೆ ನಮ್ಮ ಮುಂದಿನ ಪಿಳಿಗೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಮಾನವನು ವಿಜ್ಞಾನ ತಂತ್ರಜ್ಞಾನದೊಂದಿಗೆ ಪರಿಸರ ಸಂರಕ್ಷಣೆ ಜ್ಞಾನ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ ರವಿಕುಮಾರ್ ಮಾತನಾಡಿ ಎಲ್ಲರೂ ತಮ್ಮ ತಮ್ಮ ಜನ್ಮ ದಿನದಂದು ಒಂದು ಸಸಿ ನೆಡುವ ಮೂಲಕ ಆಚರಿಸಿಕೊಂಡರೆ ತಾವು ಬೆಳೆಯುವದರೊಂದಿಗೆ ಕಾಡು ನಾಡು ಬೆಳೆಸಿದಂತಾಗುತ್ತದೆ. ಪರಿಸರ ಉಳುವಿಗೆ ನಾವು ಉಡುಗೊರೆ ನೀಡಿದಂತಾಗುತ್ತದೆ. ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದರ ಮೂಲಕ ನಮ್ಮ ಪರಿಸರವನ್ನು ನಾವು ಕಾಪಾಡಿಕೊಳ್ಳೊಣ ಎಂದರು.ಈ ವೇಳೆ ಭೀಮಸಮುದ್ರ ಹಾಗೂ ಕರಡಿಹಳ್ಳಿ ಗ್ರಾಮಗಳಿಗೆ ಕರಡಿ ದಾಳಿ ನಡೆಸುತ್ತಿರುವುದರಿಂದ ಪ್ರತಿಯೊಂದು ಮನೆಗೆ ಶಾಸಕರಿಂದ ಸೋಲಾರ್ ಹಾಗೂ ಮನೆ ಮನೆಗೆ ವಿವಿಧ ಸಸಿಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕೂಡ್ಲಿಗಿ ಸಹಾಯಕ ಅರಣ್ಯಾಧಿಕಾರಿ ಬಾಬುಮೇದಾ, ವೈದ್ಯಾಧಿಕಾರಿ ಪ್ರದೀಪ್, ಗುಡೇಕೋಟೆ ವಲಯ ಅರಣ್ಯಾಧಿಕಾರಿ ರೇಣುಕಮ್ಮ, ಗ್ರಾಪಂ ಅಧ್ಯಕ್ಷೆ ರಾಧಮ್ಮರಾಗಪ್ಪ, ಅರಣ್ಯಧಿಕಾರಿ ಮಹೇಶ್, ಶಾಸಕರ ಪತ್ನಿ ಡಾ ಪುಷ್ಪಾ ಶ್ರೀನಿವಾಸ್, ಗುಡೇಕೋಟೆ ಪಿಎಸ್ಐ ವಿರುಪಾಕ್ಷಪ್ಪ, ಪಿಡಿಓ ಮಾರುತಿ ಸೇರಿದಂತೆ ಇನ್ನಿತರರು ಉಪಸ್ಥತರಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ