ಪಂಚಾಯಿತಿ ವತಿಯಿಂದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಾಮಾಗ್ರಿ ವಿತರಣೆ ಕಾರ್ಯಕ್ರಮ.
ದೇವರ ಹಿಪ್ಪರಗಿ ಆ.05

ಚಿಕ್ಕ ಮಕ್ಕಳಿಗೆ ಅಂಗನವಾಡಿಗಳು ಆಶಾಕಿರಣ ಇಂತಹ ಅಂಗನವಾಡಿಗಳು ಸುಧಾರಣೆಯಾಗ ಬೇಕಾದರೆ ಕಲಿಕೆಗೆ ಪೂರಕವಾದ ಸಾಮಗ್ರಿಗಳು ಬೇಕು ಪ್ರತಿ ಹಳ್ಳಿಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಈ ಸಾಮಗ್ರಿಗಳನ್ನು ಸದ್ಬಳಕೆ ಮಾಡಬೇಕು ಅಂದಾಗ ಮಾತ್ರ ಸಾಮಾಗ್ರಿ ನೀಡಿದಕ್ಕೂ ಸಾರ್ಥಕತೆ ಯಾಗುತ್ತದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಶ್ರೀ ಶ್ರೀ ಶಿವಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು. ದೇವರ ಹಿಪ್ಪರಗಿ ತಾಲೂಕಿನ ಕೆರೂಟಗಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಾಮಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸತ್ಯವ್ವ ಪರಶುರಾಮ ದೊಡಮನಿಯವರು ಮಾತನಾಡಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ನಮಗೆ ಕಣ್ಣುಗಳಿದ್ದಂತೆ ಆಟದೊಂದಿಗೆ ಪಾಠ. ಆರೋಗ್ಯ ರಕ್ಷಣೆಯಲ್ಲಿ ನಿಮ್ಮ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.

ಅದೇ ತರನಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಎ ಟಿ ಅಂಗಡಿ ಮಾತನಾಡಿ ತಾಲೂಕು ಪಂಚಾಯಿತಿ ನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಭಾರತಿ ಚಲುವಯ್ಯ ಮೆಡಂ ರ ಮಾರ್ಗದರ್ಶನದ ಮೇರೆಗೆ ಈ ಕಿಟ್ ನೀಡಿದ್ದೇವೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯರ ಪ್ರತಿ ನಿಧಿ ಬಾಬು ರಾಠೋಡ ಮಾತನಾಡಿದರು. ತದನಂತರ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆರೂಟಗಿ ತಿಳಗೂಳ ಕುದರಗುಂಡ ಕೆರೂಟಗಿ ಎಲ್.ಟಿ ನಾಲ್ಕು ಹಳ್ಳಿಯ ಎಲ್ಲಾ ಅಂಗನವಾಡಿಗಳಿಗೆ 7 ಟ್ರೇಸರಿ 6 ರಾಕ್ 80 ಕುರ್ಚಿ 6 ರೌಂಡ್ ಟೇಬಲ್ ಆಶಾ ಕಾರ್ಯಕರ್ತೆಯರಿಗೆ 7 ಬಿ.ಪಿ ಶುಗರ್ ಚೆಕ್ ಕಿಟ್ ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರ ಪುತ್ರರಾದ ಶಂಕ್ರಪ್ಪ ಸಂಧಿಮನಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಶ್ರೀಮತಿ ಎನ್ ಸಜ್ಜನ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಸವಿತಾ ಅಶೋಕ ಗುಡಿಸಲಮನಿ ಶ್ರೀ ಬಾಬು ಮೇಲಿನಮನಿ ಬೀಮು ಬುಳ್ಳಾ ರವಿ ಪೂಜಾರಿ ಸಿದ್ರಾಮ ಮಾದರ ಪಂಚಾಯಿತಿ ಸಿಬ್ಬಂದಿಗಳಾದ ಶ್ರೀ ಎ ಎಸ್ ಮುಜಾವರ ಶ್ರೀ ರವಿ ನಾಯಕ ಶ್ರೀ ಕಾಂತು ರಾಠೋಡ ಶ್ರೀ ಮಲ್ಲಮ್ಮ ಸಜ್ಜನ ಶ್ರೀ ದೇವಿಂದ್ರ ಶ್ರೀ ಸಿದ್ರಾಮ ಎಲ್ಲಾ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಊರಿನ ಹಿರಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ದಾನೇಶ ಕಲಕೇರಿ ಹಾಗೂ ಶ್ರೀ ರವಿ ನಾಯಕರವರು ನೇರವೇರಿಸಿ ಕೊಟ್ಟರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.