ಮೊಳಕಾಲ್ಮುರು ತಾಲೂಕಾ ಆಡಳಿತ ಸೌಧದಲ್ಲಿ ಸರ್ವೇ ಮತ್ತು ಕಂದಾಯ ದಾಖಲೆಗಳನ್ನು ಡಿಜಿಟಲ್ ಕರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರು.
ಮೊಳಕಾಲ್ಮುರು ಫೆಬ್ರುವರಿ.8

ಇಂದು ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ಮೊಳಕಾಲ್ಮೂರು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಕಚೇರಿ, ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮತ್ತು ಜನ ಸಾಮಾನ್ಯರಿಗೆ ರೈತರಿಗೆ ಅಲೆದಾಡಿಸ ಬೇಡಿ ಇಂತಿಷ್ಟು ಟೈಮು ಅಂತ ಹೇಳಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ದಾಖಲೆಗಳನ್ನು ಮಾಡಿಕೊಡಿ ಎಂದು ಮಾನ್ಯ ಅಭಿವೃದ್ಧಿ ಹರಿಕಾರದ ಎನ್ ವೈ ಗೋಪಾಲಕೃಷ್ಣ ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ಒಳ್ಳೆಯ ತಹಶೀಲ್ದಾರರು ಬಂದಿದ್ದಾರೆ ಬಡವರು ಮತ್ತು ಜನ ಸಾಮಾನ್ಯರ ಮೇಲೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿ ಕೊಡುತ್ತಿರುವ ಟಿ ಜಗದೀಶ್ ತಹಸಿಲ್ದಾರ್ ಇವರು ಕೂಡ್ಲಿಗಿಯಲ್ಲಿ ಸಹ ಜನ ಸಾಮಾನ್ಯರಿಗೆ ಒಳ್ಳೆ ಕೆಲಸ ಮಾಡಿ ಕೊಟ್ಟಿದ್ದಾರೆ ಎನ್ ವೈ ಗೋಪಾಲಕೃಷ್ಣ ಶಾಸಕರ ಸಹಾಯದೊಂದಿಗೆ ಈ ಸಂದರ್ಭದಲ್ಲಿತಹಶೀಲ್ದಾರ್ ಜಗದೀಶ್, ತಾಲೂಕಾ ಪಂಚಾಯತಿ ಇ ಓ ಪ್ರಕಾಶ್, ತಾಲೂಕಾ ಮಟ್ಟದ ಅಧಿಕಾರಿಗಳು ಮುಖಂಡರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು