ಹನುಮಾನ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ನಂದೇಶ್ವರ 29 ನೇ. ವಾರ್ಷಿಕ ಸ್ನೇಹ ಸಮ್ಮೇಳನ – ಅದ್ದೂರಿಯಾಗಿ ಜರುಗಿತು.
ಅಥಣಿ ಫೆ.14

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಇರುವಂತಹ ಹನುಮಾನ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ನಂದೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ 29 ನೇ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಅದ್ದೂರಿಯಾಗಿ ಮಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಮುಖ್ಯ ಪ್ರಧಾನ ಗುರುಗಳು ಸದಾಶಿವ ಭೀಮಪ್ಪ ಲಾಲಸಿಂಗಿ ನಡೆಸಿ ಕೊಟ್ಟರು ಮುಖ್ಯ ಅತಿಥಿಯಾಗಿ ಶ್ರೀ ಚಿದಾನಂದ ಲಕ್ಷ್ಮಣ ಸವದಿ ಯವರು ಉದ್ಘಾಟನೆ ಮಾಡಿದರು. ಆಚಾರಕ್ಕೆ ಅರಸನಾಗು ನೀತಿಗೆ ಪ್ರಭುವಾಗು ಮಾತಿನಲ್ಲಿ ಚೂಡಾಮನಿಯಾಗು ಜಗತ್ತಿಗೆ ಜ್ಯೋತಿ ಆಗ ಬೇಕಾದರೆ ಮನೆಯಲ್ಲಿ ಜಾತಿ ಇರಬೇಕು ಹೊರಗಡೆ ಪ್ರೀತಿ ಇರಬೇಕು ಸಮಾಜದಲ್ಲಿ ನೀತಿ ಇರಬೇಕು ಬದುಕಿನಲ್ಲಿ ರೀತಿ ಇರಬೇಕು ದೇಶದ ಮೇಲೆ ಪ್ರೀತಿ ಇರಬೇಕು ಅವಾಗ ನಾವು ಜ್ಯೋತಿ ಆಗುತ್ತೇವೆ. ಸಮಾಜದಲ್ಲಿ ಎಲ್ಲರೂ ಇಷ್ಟ ಪಡುವಂತಹ ವ್ಯಕ್ತಿ ಆಗಬೇಕು. ಹಿರಿಯರ ಮುಂದೆ ಹತ್ತಿ ಯಾಗಿರಬೇಕು ಬಂಧುಗಳ ಮುಂದೆ ಬತ್ತಿ ಯಾಗಿರಬೇಕು ಹೆತ್ತ ತಾಯಿಯ ಮುಂದೆ ನೆತ್ತಿ ಯಾಗಿರಬೇಕು ಅವಾಗ ನಮ್ಮ ಸಮಾಜ ಗೌರವಿಸುತ್ತಿರ ಬೇಕು ಎಂದು ಹೇಳಿದರು. ಶಾಲಾ ವರದಿಯನ್ನು ಸಹ ಶಿಕ್ಷಕರಾದ ಶ್ರೀ ಮಹೇಂದ್ರ ಮೀಠಕ್ಕೂಡ ಹೇಳಿದರು. ಶ್ರೀ ಅಧ್ಯಕ್ಷತೆಯನ್ನು ಬಸಪ್ಪ ಪರಟ್ಟಿ ವಹಿಸಿದರು ಜ್ಯೋತಿ ಬೆಳಗಿಸುವ ಕಾರ್ಯಕ್ರಮವನ್ನು ಶ್ರೀ ಮತಿ ಮಹಾದೇವಿ ಸದಾಶಿವ ಲಾಲಸಿಂಗಿ ಅವರು ನಡೆಸಿದರು. ಮುಖ್ಯ ಅತಿಥಿಗಳಾಗಿ. ಗುರುಲಿಂಗ ತೇಲಿ. ರಾಮಪ್ಪ ಶಿರೋಳ. ಮಲ್ಲಪ್ಪ ಅರಗೋಡಿ. ಬಸಪ್ಪ ಚಂಡಕಿ. ಶ್ರೀಕಾಂತ್ ಗುರವ. ಸಿದ್ದು ಬಿಸಲ್ನಾಯಕ್. ಮುತ್ತಪ್ಪ ಕಾಂಬಳೆ. ಬುಜಬಲಿ ಪರಟ್ಟಿ. ಜಡೇಪ್ಪ ಕುಂಬಾರ ಹಲವಾರು ಗಣ್ಯ ಮಾನ್ಯರಿದ್ದರು. ವಂದನಾರ್ಪಣೆಯನ್ನು ಸಹ ಶಿಕ್ಷಕರಾದ ಶ್ರೀ ಸಂಗಪ್ಪ ಹಡಪದ ನಡೆಸಿ ಕೊಟ್ಟರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್: ಪಿರು.ನಂದೇಶ್ವರ. ಅಥಣಿ