ಪರಿಸರ ದಿನದ ನಿಮಿತ್ತ ಸೈಕಲ್ ಜಾಥಾ ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ಅತ್ಯಗತ್ಯ – ಬಸವಂತರಾಯಾಗೌಡ ಪಾಟೀಲ.

ಹೊಸಪಡನೂರ ಜೂನ್.11

ಆರೋಗ್ಯಕರ ವಾತಾವರಣದಿಂದ ನಾವು ಜೀವನದಲ್ಲಿ ಶುದ್ಧ ಗಾಳಿ, ಹಸಿರು ಮತ್ತು ನೀರನ್ನು ಪಡೆಯಲು ಸಾಧ್ಯ. ಸಮಾಜದ ಅಭಿವೃದ್ಧಿಯಲ್ಲಿ ಉತ್ತಮ ಪರಿಸರದ ಪಾತ್ರ ಅನನ್ಯವಾದುದು ಎಂದು ಬಸವಂತರಾಯಗೌಡ ಪಾಟೀಲ ಹೇಳಿದರು. ಅವರು ಹೊಸಪಡನೂರ ಗ್ರಾಮದ ಎಚ್. ಪಿ. ಎಸ್. ಶಾಲೆಯಲ್ಲಿ ವಿಶ್ವ ಪರಿಸರ ದಿನ ಸಪ್ತಾಹದ ನಿಮಿತ್ತ ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಂತೇಶ್ವರ ಪ್ರೌಢಶಾಲೆಯ 1989-90 ನೇ ಸಾಲಿನ ಗೆಳೆಯರ ಬಳಗದ ಸಹಯೋಗದಲ್ಲಿ ಜರುಗಿದ ಪರಿಸರ ಸ್ನೇಹಿ ಸೈಕಲ್ ಜಾಥಾ ಮತ್ತು ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂಡಿ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ ಕೋಟೆಣ್ಣವರ ಮಾತನಾಡಿ,ಲಭ್ಯ ಸ್ಥಳಗಳಲ್ಲಿ ಸಸಿ ನೆಟ್ಟು ಬೆಳೆಸುವ ಮೂಲಕ ಎಲ್ಲರೂ ಪರಿಸರ ರಕ್ಷಣಾ ಕಾರ್ಯದಲ್ಲಿ ತೊಡಗಬೇಕು.ಮುಂದಿನ ಪೀಳಿಗೆಯವರು ನೆಮ್ಮದಿಯಿಂದ ಬಾಳಬೇಕಿದ್ದರೆ, ಹಸಿರು ವಾತಾವರಣ ಆವರಿಸಬೇಕು ಎಂದು ಹೇಳಿದರು. ಸ್ಕೌಟ್ಸ್ ಮಾಸ್ಟರ್ ಸಂತೋಷ ಬಂಡೆ ಮಾತನಾಡಿ, ಪ್ರಕೃತಿಯಿಲ್ಲದ ಜೀವನವು ಆಲೋಚನೆಗೆ ಮೀರಿದೆ.ಮನುಷ್ಯನ ಉದಾಸೀನತೆ, ತಿಳಿಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ.

ಎಲ್ಲರೂ ‘ಎಸೆಯುವ ಸಂಸ್ಕೃತಿ’ಯ ಬದಲು ’ರಿಪೇರಿ ಸಂಸ್ಕೃತಿ’ಯನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು. ಭಾಗ್ಯಜ್ಯೋತಿ ಕೋಳಾರಿ ಪ್ರಾಸ್ತಾವಿಕವಾಗಿ ಸ್ಕೌಟ್ಸ್,ಗೈಡ್ಸ್ ಕಾರ್ಯಪ್ರಗತಿಯ ಕುರಿತಾಗಿ ಮಾತನಾಡಿದರು. ಇಂಡಿ ಪಟ್ಟಣದ ಬಸವೇಶ್ವರ ವೃತ್ತದಿಂದ ಲಚ್ಯಾಣ ಮಾರ್ಗವಾಗಿ ಹೊಸಪಡನೂರ ಗ್ರಾಮದವರೆಗೆ ಸೈಕಲ್ ಜಾಥಾ ನಡೆಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಎಸ್. ಎಸ್. ಬಾಬಳಗಿ, ರಮೇಶ ಕುಲಕರ್ಣಿ, ಉಮೇಶ ಶಿವಯೋಗಿಮಠ,ಚಂದ್ರಶೇಖರ ಬೋಳೆಗಾಂವ,ಬಸವರಾಜ ದೇವರ, ದಶರಥ ಕೋರೆ,ಸುರೇಶ ಅವರಾದಿ, ಶಾಂತಿಲಾಲ ಧನಶೆಟ್ಟಿ, ಚಂದನ ಧನಫಾಲ,ರವಿ ವಂದಾಲ,ಬಸವರಾಜ ಚೌಧರಿ, ನಟರಾಜ ಗೌಳಿ,ಪ್ರಶಾಂತ ನಿಂಬಾಳಕರ,ಕೇದಾರ ಪಾಟೀಲ,ಸ್ಕೌಟ್ಸ್ ಮಾಸ್ಟರ್ ದತ್ತಾತ್ರೇಯ ಕೋಳಾರಿ,ಎ. ಎ ಇಕ್ಕಳಕಿ ಹಾಗೂ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಮಹಾಂತೇಶ ಅವರಾದಿ, ಗ್ರಾಮ ಪಂಚಾಯತಿ ಅಧ್ಯಕ್ಷ ಘೇನು ಗಿರಣಿವಡ್ಡರ,ಮಾಜಿ ಸೈನಿಕ ಚನ್ನಬಸಪ್ಪ ಸಾಲುಟಗಿ, ಹಿರಿಯರಾದ ಸಾತಪ್ಪ ಲಿಗಾಡೆ, ನಿವೃತ್ತ ಶಿಕ್ಷಕ ಹೆಚ್.ವಿ.ಬಿರಾದಾರ,ಈರಣ್ಣ ಮರೋಬ,ಶಿಕ್ಷಕರಾದ ಕೆ.ಆಯ್.ಉಮಾರಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ತಾಲೂಕ ಕಾರ್ಯದರ್ಶಿ ಶಹಾಜಿ ಪಾಟೀಲ ಸ್ವಾಗತಿಸಿದರು. ಬಸವರಾಜ ಗೋರನಾಳ ನಿರೂಪಿಸಿದರು.ಎನ್. ಕೆ.ಸಕ್ಕರಶೆಟ್ಟಿ ವಂದಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button