ಜು.28 ರಂದು 25. ನೇ ಕಾರ್ಗಿಲ್ ವಿಜಯೋತ್ಸವ ಹಾಗೂ ರಜತ ಮಹೋತ್ಸವ ಸಮಾರಂಭ.
ಹುನಗುಂದ ಜು.26

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಹುನಗುಂದ ಮತ್ತು ವೀರ ನಾರಿಯರು ಹಾಗೂ ಹಾಲಿ ಸೈನಿಕರ ಸಹಯೋಗದಲ್ಲಿ ಜು.೨೮ ರಂದು ರವಿವಾರ ೧೧.೩೦ ಗಂಟೆಗೆ ಪಟ್ಟಣದ ಬಸವ ಮಂಟಪದಲ್ಲಿ ೨೫. ನೆಯ ವರ್ಷದ ಕಾರ್ಗಿಲ್ ವಿಜಯೋತ್ಸವ ಮತ್ತು ರಜತ ಮಹೋತ್ಸವ ಹಾಗೂ ಹುತಾತ್ಮ ಯೋಧರಿಗೆ ಗೌರವ ನಮನ ಕಾರ್ಯಕ್ರಮ ಜರುಗಲಿದೆ. ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಾಲಪ್ಪ ಕಿರಸೂರ ಹೇಳಿದರು. ಶುಕ್ರವಾರ ಪಟ್ಟಣದ ಉದಯ ಯುಥ್ ಕ್ಲಬ್‌ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಚಿತ್ತರಗಿ ಸಂಸ್ಥಾನ ಮಠ ಹುನಗುಂದದ ಗುರು ಮಹಾಂತ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಕೊಳ್ಳುವರು, ವೀರಶೈವ ಮತ್ತು ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಎಸ್.ಆರ್.ಎನ್.ಇ ಪೌಂಡೇಶನ ಅಧ್ಯಕ್ಷ ಎಸ್.ಆರ್. ನವಲಿಹಿರೇಮಠ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ, ಮಾಜಿ ಸೈನಿಕರ ಸಂಘದ ತಾಲೂಕಾಧ್ಯಕ್ಷ ಬಾಲಪ್ಪ ಕಿರಸೂರ ಅಧ್ಯಕ್ಷತೆಯನ್ನು ವಹಿಸಿ ಕೊಳ್ಳಲಿದ್ದು. ತಹಶೀಲ್ದಾರ ನಿಂಗಪ್ಪ ಬಿರಾದಾರ,ತಾ.ಪಂ ಇಓ ಮುರಳಿಧರ ದೇಶಪಾಂಡೆ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ, ಸಿಪಿಐ ಸುನೀಲ ಸವದಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಡಾ.ಶಿವಗಂಗಾ ರಂಜಣಗಿ ಉಪನ್ಯಾಸ ನೀಡಲಿದ್ದಾರೆ. ಅರ್ಜುನ ಕೋರಿ,ಗದಿಗೆಪ್ಪ ಅರಿಕೇರಿ,ಶಿವಪ್ಪ ಯಡಹಳ್ಳಿ,ಹಜರತ್‌ಸಾಬ ನದಾಫ್,ಗಂಗಮ್ಮ ಬಾರಕೇರ ಅತಿಥಿಗಳಾಗಿ ಆಗಮಿಸಲಿದ್ದು. ಆ ದಿನ ಬೆಳಗ್ಗೆ ೯ ಗಂಟೆಗೆ ಬಸವ ಮಂಟಪದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾರತಾಂಭೆ ಭಾವಚಿತ್ರ, ತ್ರಿವರ್ಣ ಧ್ವಜ ಹಾಗೂ ಕಾರ್ಗಿಲ್ ವಿಜಯೋತ್ಸವದ ಧ್ವಜವನ್ನು ಮೆರವಣೆಗೆ ಮಾಡಲಾಗುವುದು. ಇನ್ನು ಕಾರ್ಗಿಲ್ ಯುದ್ದದಲ್ಲಿ ಸೇವೆ ಸಲ್ಲಿಸಿದ ತಾಲೂಕಿನ ಯೋಧರಿಗೆ ಸನ್ಮಾನ ಸಮಾರಂಭ ಹಾಗೂ ಹಾಲಿ ಮತ್ತು ಮಾಜಿ ಸೈನಿಕರ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ನಾಗಪ್ಪ ಆಲೂರ, ಉಪಾಧ್ಯಕ್ಷ ಶಿವಪ್ಪ ಯಡಹಳ್ಳಿ, ಪ್ರಧಾನ ಕಾರ್ಯದರ್ಶಿ ವಿಜಯ ಧಳವಾಯಿ, ಹಜರತ್‌ಸಾಬ ನದಾಫ್, ಪ್ರಶಾಂತ ಬನ್ನೆಟ್ಟಿ,ಶಿವಶಂಕ್ರಪ್ಪ ರಡ್ಡೇರ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ ಎಂ.ಬಂಡರಗಲ್ಲ.ಹುನಗುಂದ.