ಭಾರತೀಯ ಬೌದ್ಧ ಮಹಾ ಸಭಾ ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆ.
ಚಿಕ್ಕಮಗಳೂರು ಅ.21

ಭಾರತೀಯ ಬೌದ್ಧ ಮಹಾಸಭಾ ನೂತನ ಜಿಲ್ಲಾ ಪದಾಧಿಕಾರಿಗಳನ್ನು ರಾಜ್ಯ ಅಧ್ಯಕ್ಷರಾದ ಶಿವರಾಜ್ ರವರು ಚಿಕ್ಕಮಗಳೂರಿನ ಬೌದ್ಧ ಬಿಹಾರದಲ್ಲಿ ಕರೆದಿದ್ದ ಸಭೆಯಲ್ಲಿ ಆಯ್ಕೆ ಮಾಡಿದರು. ನೂತನ ಜಿಲ್ಲಾ ಅಧ್ಯಕ್ಷರಾಗಿ ವಕೀಲರಾದ ಅನಿಲ್ ಕುಮಾರ್, ಉಪಾಧ್ಯಕ್ಷರಾಗಿ (ಸಂಸ್ಕಾರ) ಕೆಸಿ ವಸಂತಕುಮಾರ್, ರಕ್ಷಣಾ ವಿಭಾಗದ ಉಪಾಧ್ಯಕ್ಷರಾಗಿ ತರೀಕೆರೆ ಎನ್. ವೆಂಕಟೇಶ್, ಪ್ರವಾಸ ವಿಭಾಗದ ಉಪಾಧ್ಯಕ್ಷರಾಗಿ ಹರೀಶ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್, ಸಹ ಕಾರ್ಯದರ್ಶಿಯಾಗಿ ಲಕ್ಷ್ಮಣ್, ಖಜಾಂಚಿಯಾಗಿ ಗಿರೀಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮರ್ಲೆ ಅಣ್ಣಯ್ಯ, ವಕೀಲರಾದ ಹಿರೇಮಗಳೂರು ರಮೇಶ್, ವೀರಭದ್ರಯ್ಯ, ಕುಮಾರ್, ಹಾಲಪ್ಪ, ಧರ್ಮೇಶ್, ರಂಗನಾಥ, ಟಿ ರಮೇಶ್, ಚಿದಂಬರ, ಗಣೇಶ್, ಪುಟ್ಟಸ್ವಾಮಿ, ಜೆಡಿ ಲೋಕೇಶ್, ಹರಿಯಪ್ಪ, ಆರ್ ಶೇಖರ್,ಚಂದ್ರು, ಧರ್ಮಪ್ಪ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಾಜಿ ಸಚಿವರಾದ ಬಿ.ಬಿ ನಿಂಗಯ್ಯ, ಎಂಎಸ್ ಅನಂತು, ಅರ್ಜುನ್ ರಾವ್ ಕೇಸರಿ, ರಾಜಶೇಖರ ಮೂರ್ತಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು