ಸರ್ಕಾರದ ಐದು ಗ್ಯಾರಂಟಿ ಉಚಿತ ನೀತಿಗೆ ಖಂಡನೀಯ – ಶಾಸಕ ಕೆ.ನೆಮರಾಜನಾಯ್ಕ.
ಕೊಟ್ಟೂರು ಜೂನ್.11

ಕೊಟ್ಟೂರು ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಕಲ್ಪಿಸಿರುವುದಾಗಿ ಹೇಳಿಕೊಂಡು ಇದೀಗ ಸರಕಾರ ಎಸಿ, ಐಷಾರಾಮಿ ಬಸ್ಸುಗಳಲ್ಲಿ ಪ್ರಯಾಣಿಸುವಂತಿಲ್ಲ ಎಂದು ಹೇಳುವ ಮೂಲಕ ಮೊದಲಿನ ಭರವಸೆಯನ್ನು ಹುಸಿಗೊಳಿಸಿ ಮಹಿಳೆಯರಿಗೆ ಮೋಸ ಮಾಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಬರಲಿರುವ ವಿಧಾನಸಭೆ ಅಧಿವೇಶನದಲ್ಲಿ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಹ.ಬೊ.ಹಳ್ಳಿ ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.ಪಟ್ಟಣದ ತೇರು ಬಯಲು ಪ್ರದೇಶದಲ್ಲಿ ಕೊಟ್ಟೂರಿನಿಂದ ಕೂಡ್ಲಿಗಿಗೆ ತೆರಳುವ ಬಸ್ಸಿಗೆ ಮಹಿಳೆಯರು ಉಚಿತ ಪ್ರಯಾಣದ ಬಸ್ಸಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಮಹಿಳೆಯರಿಗೆ ಉಚಿತ ಎಂದು ಹೇಳಿ ಇದೀಗ ಷರತ್ತುಗಳನ್ನು ವಿಧಿಸುವುದು ಸರಿಯಲ್ಲ. ಹಾಗೆಯೇ ವಿದ್ಯುತ್ ಬಳಕೆಯನ್ನು ೨೦೦ ಯೂನಿಟ್‌ವರೆಗೆ ಪ್ರತಿ ಮನೆಗೆ ಉಚಿತ ಎಂದು ಹೇಳಿ ಇದೀಗ ಒಮ್ಮೆಲೆ ವಿದ್ಯುತ್ ದರವನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಆರ್ಥಿಕ ಹೊರೆ ಬಾಧಿಸುವಂತೆ ಮಾಡಿದ್ದಾರೆ. ಇದನ್ನು ವಿರೋಧಿಸಿ ಜೆಡಿಎಸ್ ವತಿಯಿಂದ ಜೂ.೨೪ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಅದರಲ್ಲಿ ತಾವು ಪಾಲ್ಗೊಳ್ಳುವುದಾಗಿ ಹೇಳಿದರು.ಕೊಟ್ಟೂರು ಬಸ್ ನಿಲ್ದಾಣ ಮಳೆಗಾಲದ ವೇಳೆಯಲ್ಲಿ ಹಡಗುತಾಣ ಎಂಬಂತೆ ಮಾರ್ಪಡುತ್ತಿದೆ. ಕಳೆದ ೧೦ ವರ್ಷಗಳಲ್ಲಿ ಹಿಂದಿನ ಶಾಸಕರು ಬಸ್ ನಿಲ್ದಾಣವನ್ನು ಎತ್ತರಿಸಿ ನವೀಕರಿಸುವ ಕಾರ್ಯ ಮಾಡದೇ ಸುಮ್ಮನೆ ಕಾಲಹರಣ ಮಾಡಿದ್ದು, ಜನತೆಗೆ ಮಾಡಿದ ದ್ರೋಹವಾಗಿದೆ ಎಂದು ಅವರು ಹೇಳಿದರು. ಸದ್ಯ ಕೊಟ್ಟೂರು ಬಸ್ ನಿಲ್ದಾಣವನ್ನು ಮಾದರಿ ಬಸ್ ನಿಲ್ದಾಣವನ್ನಾಗಿ ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಬಸ್ ನಿಲ್ದಾಣದೊಳಕ್ಕೆ ಯಾವುದೇ ಹಂತದಲ್ಲಿ ಮಳೆ ನೀರು ಶೇಖರಣೆಗೊಳ್ಳದಂತೆ ಯೋಜನೆ ರೂಪಿಸಿ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗುವುದಾಗಿ ಹೇಳಿದರು. ಕೊಟ್ಟೂರಿನಲ್ಲಿ ಸಾರಿಗೆ ಡಿಪೋ ಸ್ಥಾಪನೆಗೆ ಸರಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು. ಬಸ್‌ನಲ್ಲಿ ಸಂಚಾರ : ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಉದ್ಘಾಟಿಸಿದ ಶಾಸಕ ಕೆ.ನೇಮರಾಜನಾಯ್ಕ, ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ ಹರ್ಷವರ್ಧನ ಮತ್ತಿತರೊಂದಿಗೆ ಬಸ್‌ನಲ್ಲಿ ಟಿಕೆಟ್ ಪಡೆದು ಪಟ್ಟಣದ ಉಜ್ಜಯಿನಿ ವೃತ್ತದಿಂದ ಮೇನ್ ಬಜಾರ್ ಮೂಲಕ ನಿಲ್ದಾಣದವರೆಗೆ ಸಂಚರಿಸಿದರು.ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ ಹರ್ಷವರ್ದನ, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಭರಮರೆಡ್ಡಿ, ಬಾದಾಮಿ ಮೃತ್ಯುಂಜಯ, ಡಿಶ್ ಮಂಜುನಾಥ್,ಎಸ್ ಕೆ ಪ್ರಕಾಶ್ ರೈತ ಸಂಘದ ಸಂಚಾಲಕರು ಕೊಟ್ರು ಗೌಡ್ರು ಕೂಡ್ಲಿಗಿ ಸಾರಿಗೆ ಘಟಕ ವ್ಯವಸ್ಥಾಪಕ ಕೆ.ಮರಿಲಿಂಗಪ್ಪ, ವಿಭಾಗೀಯ ಕಾರ್ಯಾಧೀಕ್ಷಕ ಮಹೇಂದ್ರ ಹುಬ್ಬಳ್ಳಿ, ಸಂಚಾರ ನಿಯಂತ್ರಕರಾದ ಅಜ್ಜಯ್ಯ, ಅಂಜಿನಪ್ಪ, ರತ್ನಮ್ಮ ಇತರರು ಇದ್ದರು.
ತಾಲೂಕ ವರದಿಗಾರರು : ಪ್ರದೀಪ್. ಕುಮಾರ್. ಸಿ. ಕೊಟ್ಟೂರು