ಕಾಂಗ್ರೇಸ್ ಪಕ್ಷ ಮಾತು ತಪ್ಪದ ಪಕ್ಷ ಐದು ಗ್ಯಾರಂಟಿಗಳಲ್ಲಿ ಮೊದಲನೇ ಗ್ಯಾರಂಟಿ ಶಕ್ತಿ ಯೋಜನೆ ಉದ್ಘಾಟನೆ ನೆರೆವೇರಿಸಿದ ಶಾಸಕರು.
ಕೂಡ್ಲಿಗಿ ಜೂನ್.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ. ಶ್ರೀನಿವಾಸ್ ಎನ್. ಟಿ ರವರು ತಮ್ಮ ಬಾಲ್ಯದ ದಿನಗಳಲ್ಲಿ ನೆನಪು ಮಾಡಿಕೊಳ್ಳುತ್ತಾ ಮನೆಯ ದಿನಿಸು ಸಾಮಾನುಗಳು ತರಲು ತಮ್ಮ ಹುಟ್ಟುರಾದ ನರಸಿಂಹನಗಿರಿ ಯಿಂದ ಸರ್ಕಾರಿ ಬಸ್ಸುಗಳು ಮೂಲಕ ಕೂಡ್ಲಿಗಿ ಪಟ್ಟಣಕ್ಕೆ ಓಡಾಡುತ್ತಿದ್ದಂತಹ ಮತ್ತು ಕೂಡ್ಲಿಗಿಯಿಂದ ಸಂಡೂರು ಶಾಲೆಗೆ ಹೋಗಿ ಬರುತಿದ್ದಂತಹ ದಿನಗಳನ್ನು ನೆನೆದು ಮುಂದಿನ ದಿನ ಮಾನಗಳಲ್ಲಿ ಕೂಡ್ಲಿಗಿ ಬಸ್ ನಿಲ್ದಾಣವನ್ನು ಒಂದು ಮಾದರಿ ಬಸ್ ನಿಲ್ದಾಣವನ್ನು ಮಾಡುವುದಾಗಿ-ಶಕ್ತಿ ಗೆ ಚಾಲನೆ: ನುಡಿದಂತೆ ನಡೆ ನಮ್ಮದು, ಮಾದರಿ ಬಸ್ ಡಿಪೋ ಆಗಿ ಅಭಿವೃದ್ಧಿ ಡಾ”ಎನ್.ಟಿ.ಎಸ್ ವಿಜಯನಗರ ಜಿಲ್ಲೆ ಕೂಡ್ಲಿಗಿ:ಕರ್ನಾಟಕ ಸರ್ಕಾರದ ಮಹಾತ್ವಾ ಕಾಂಕ್ಷಿ ಯೋಜನೆಗಳಲ್ಲಿ, ಪ್ರಮುಖವಾದ “ಶಕ್ತಿ” ಯೋಜನೆಗೆ ಶಾಸಕ ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು. ಪಟ್ಟಣದ.ಕ.ರಾ.ರ.ಸಾ.ಸಂಸ್ಥೆಯ ಘಟಕದ ಬಸ್ ನಿಲ್ದಾಣದಲ್ಲಿ, ಜೂ11ರಂದು ಮಧ್ಯಾಹ್ನ1ಗಂಟೆಗೆ ಸರ್ಕಾರದ ಮಾರ್ಗಸೂಚಿಯಂತೆ ಚಾಲನೆ ನೀಡಿದರು. ಅವರು ಶಕ್ತಿ ಯೋಜನೆ ಜಾರಿ ಕಾರ್ಯಕ್ರಮವನ್ನು, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.*ನುಡಿದಂತೆ ನಡೆದಿದ್ದೇವೆ*-ನಮ್ಮ ಕಾಂಗ್ರೇಸ್ ಸರ್ಕಾರ, ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ ಐದು ಗ್ಯಾರಂಟಿಗಳ ಭರವಸೆಗಳಲ್ಲಿ. ಐದನೇ ಭರವಸೆಯಾಗಿದ್ದ ಶಕ್ತಿ ಯೋಜನೆಯನ್ನು, ಮೊದಲಿಗೇ ಜಾರಿತರುವ ಮೂಲಕ ಸ್ತ್ರೀಯರಿಗೆ ಆಧ್ಯತೆ ನೀಡಲಾಗಿದೆ. ಉಳಿದ ನಾಲ್ಕು ಯೋಜನೆಗಳನ್ನು ಹಂತ ಹಂತವಾಗಿ, ಆಗಸ್ಟ್ ರೊಳಗಾಗಿ ಜಾರಿಗೆ ತರಲಾಗುತ್ತದೆ. ಈ ಮೂಲಕ ಕಾಂಗ್ರೇಸ್ ಆಢಳಿತದ ರಾಜ್ಯ ಸರ್ಕಾರದಲ್ಲಿ, ನಾವೆಲ್ಲರೂ ಜನರಿಗೆ ಮಾತು ಕೊಟ್ಟಂತೆ ನುಡಿದಂತೆ ನಡೆಯುತ್ತಿದ್ದೇವೆ ಎಂದು ಶಾಸಕ ಡಾ” ಎನ್.ಟಿ.ಶ್ರೀನಿವಾಸ್ ನುಡಿದರು. ಮಹಿಳೆಯರು “ಶಕ್ತಿ”ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ, ಮತ್ತು ಪುರುಷರು ಹಣ ನೀಡಿ ಪ್ರಯಾಣಿಸುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಕಾರಣರಾಗಬೇಕಿದೆ ಎಂದು ಕರೆ ನೀಡಿದರು.

*ಸವಿ ಸವಿ ನೆನಪು.. ಸಾವಿರ ನೆನಪು..*-ಶಾಸಕರು ಮಾತನಾಡುತ್ತ ತಮ್ಮ ಬಾಲ್ಯ ಜೀವನದ ಸವಿ ಸವಿ ನೆನಪುಗಳನ್ನು, ವೇದಿಕೆಯಲ್ಲಿಯೇ ಮೆಲ್ಲಗೇ ಮೆಲುಕು ಹಾಕಿದರು. ತಾವು ಬಾಲ್ಯದಲ್ಲಿದ್ದಾಗ ಆಗಿನ ಕೆಂಪು ಬಸ್ ಗಳುಳ್ಳ ಕೂಡ್ಲಿಗಿ ನಿಲ್ದಾಣದಲ್ಲಿ, ತಮ್ಮ ಸ್ನೇಹಿತರೊಂದಿಗೆ ಆಟ ಆಡಿದ್ದನ್ನ ಸ್ಮರಿಸಿಕೊಂಡರು. ನಂತರದಲ್ಲಿ ತಮ್ಮೂರಾದ ನರಸಿಂಹ ಗಿರಿ ಗ್ರಾಮಕ್ಕೆ, ಹಾಗೂ ಕೂಡ್ಲಿಗಿಗೆ ಬಸ್ ನಲ್ಲಿ ಸಂಚರಿಸಿದ ಸಂದರ್ಭದಲ್ಲಿ. ಕೂಡ್ಲಿಗಿ ಬಸ್ ಸಿಬ್ಬಂದಿಯವರು ತಮ್ಮೊಂದಿಗೆ ಇಟ್ಟುಕೊಂಡಿದ್ದ ಒಡನಾಟ, ಬಾಂಧವ್ಯ, ಮತ್ತು ಅವರ ಸಹಕಾರ ಮನೋಭಾವವನ್ನು ಸ್ಮರಿಸಿದರು. ಇದೇ ರೀತಿಯಾಗಿ ಈಗಿನ ಸಿಬ್ಬಂದಿಯವರು, ವಿದ್ಯಾರ್ಥಿಗಳೊಂದಿಗೆ, ಪ್ರಯಾಣಿಕರೊಂದಿಗೆ ಸಹಕರಿಸಬೇಕೆಂದರು.*”ಮಾದರಿ ಡಿಪೋ” ಭರವಸೆ*- ಕೂಡ್ಲಿಗಿ ಬಸ್ ಡಿಪೋವನ್ನು ಅಖಂಡ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದಲ್ಲಿಯೇ ಮಾದರಿ ಬಸ್ ಡಿಪೋ ಆಗಿ ಅಭಿವೃದ್ಧಿ ಮಾಡುವ ಯೋಜನೆ ಇದೆ.ಈ ನಿಟ್ಟಿನಲ್ಲಿ ತಾವು ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದ ಶಾಸಕರು, ಅದಕ್ಕಾಗಿ ಸಂಬಂಧಿಸಿದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳ ಸಂಪರ್ಕದಲ್ಲಿರುವುದಾಗಿ ತಿಳಿಸಿದರು. ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಪ್ರಜ್ಞಾವಂತರ ಹಿರಿಯರ ಸಲಹೆ, ಮಾರ್ಗದರ್ಶನದೊಂದಿಗೆ ಸಾಕಷ್ಟು ಕಾಲಾವಕಾಶದ ಅಗತ್ಯವಿದೆ. ಸಂಸ್ಥೆಯ ಅಧಿಕಾರಿಗಳು ಸಿಬ್ಬಂದಿಯವರು ಕೂಡ, ಈ ನಿಟ್ಟಿನಲ್ಲಿ ಸಕರಾತ್ಮಕವಾಗಿ ಸ್ಪಂಧಿಸಬೇಕಿದೆ ಎಂದರು. ನಲವತ್ತು ಬಸ್ ಗಳು ನಿರುಪಯುಕ್ತ ವಾಗಿದ್ದು, ಅಗತ್ಯ ಇರುವಷ್ಟು ಹೊಸ ಬಸ್ ಗಳನ್ನು ಕಲ್ಪಿಸುವಂತೆ ಉನ್ನತಾಧಿಕಾರಿಗಳಲ್ಲಿ ಕೋರಲಾಗಿದೆ. ಪ್ರಾರಂಭದಲ್ಲಿ ಇಂದು ನಾಲ್ಕು ಹೊಸ ಬಸ್ ಗಳನ್ನು ಡಿಪೋಗೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಬಸ್ ಗಳನ್ನು ತರಿಸುವ ಪ್ರಾಮಾಣಿಕ ಯತ್ನ ನಡೆಸಲಾಗುವುದು ಎಂದರು. ರದ್ದಾಗಿರುವ ಅಗತ್ಯ ಮಾರ್ಗಗಳನ್ನು ಪುನಃ ಪ್ರಾರಂಭಿಸುವ ಯೋಜನೆ ಇದ್ದು, ಗ್ರಾಮೀಣ ಜನರಿಗೆ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ಮತ್ತು ಹೆಚ್ಚು ಬೇಡಿಕೆಯುಳ್ಳ ಮಾರ್ಗಗಳನ್ನು. ಅತೀ ಶೀಘ್ರವೇ ಪ್ರಾರಂಭಿಸಲು ಕ್ರಮ ಜರುಗಿಸಲಾಗುವುದು, ಕಾರಣ ಸಾರ್ವಜನಿಕರು ಸಂಘ ಸಂಸ್ಥೆಗಳು ಸಹಕಾರಿಸಬೇಕಿದೆ ಎಂದರು. “ಶಕ್ತಿ” ಯೋಜನೆ ಸರ್ಕಾರದ ಮಹತ್ವಾ ಕಾಂಕ್ಷಿ ಯೋಜನೆಯಾಗಿದೆ, ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಯಶಸ್ಸಿಗೆ ಸಹಕಾರ ನೀಡಬೇಕಿದೆ. ಮಹಿಳೆಯರಿಗೆ ಅಗತ್ಯ ಮಾಹಿತಿ ನೀಡಬೇಕು ಮತ್ತು ಸ್ಪಂಧಿಸುವ ಮೂಲಕ ಯೋಜನೆ ಯಶಸ್ವೀಗೊಳ್ಳಲು, ಸಂಪೂರ್ಣ ಸಹಕಾರ ನೀಡಬೇಕೆಂದು ಘಟಕದ ಸಿಬ್ಬಂದಿಗೆ ಅವರು ಸೂಚಿಸಿದರು.

ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ,ಮುಖಂಡ ಕೆ.ಎಮ್.ಶಶಿಧರಸ್ವಾಮಿ,ಮಹಿಳಾ ಮುಖಂಡರಾದ ಜಿಂಕಲ್ ನಾಗಮಣಿ ಮಾತನಾಡಿದರು. ತಹಶಿಲ್ದಾರರಾದ ಕಾರ್ತೀಕ, ತಾಪಂ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ, ಬಸ್ ಡಿಪೋ ಘಟಕಾಧಿಕಾರಿ ಮರಿಲಿಂಗಪ್ಪ,ಮುಖಂಡರಾದ ಟಿ.ಜಿ.ಮಲ್ಲಿಕಾರ್ಜುನ, ಛಲುವಾದಿ ಉಮೇಶ,ಗುರುಸಿದ್ಧನಗೌಡ, ಬೋವಿ ಸಮಾಜದ ಮುಖಂಡ ದೊಡ್ಡರಾಮಣ್ಣ, ಕೋಗಳಿ ಮಂಜುನಾಥ,ಮಾದಳ್ಳಿ ನಜೀರ್ ಸಾಬ್, ಕಾಯಿಕೆಡವ ಕೊಟ್ರೇಶ, ಸಿಬಿ ಜಯರಾಮ್ ಹಾಗೂ ಕೆಲ ಮುಖಂಡರು ವೇದಿಕೆಯಲ್ಲಿದ್ದರು.ಡಿ.ವೈ.ಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವಸಂತ ಅಸೋದೆ, ಪಿ.ಎಸ್.ಐ ಧನುಂಜಯಕುಮಾರ ಹಾಗೂ ಸಿಬ್ಬಂದಿ. ಬಸ್ ಡಿಪೋದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ವಿವಿದ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಪಪಂ ಸದಸ್ಯರು, ಕಾಂಗ್ರೇಸ್ ಮಹಿಳಾ ಮುಖಂಡರು, ನೂರಾರು ಮಹಿಳೆಯರು, ಕೆಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ನಾಗರೀಕರು ಉಪಸ್ಥಿತರಿದ್ದರು. *ಮನವಿ:-* ಕ.ರಾ.ರ.ಸಾ.ಸಂಸ್ಥೆಯ ಕೂಡ್ಲಿಗಿ ಘಟದ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ, ಹಲವು ಹಕ್ಕೊತ್ತಾಯಗಳ ಪಟ್ಟಿಯನ್ನು. ಸಂಘದ ಅಧ್ಯಕ್ಷ ದಿಬ್ಬದಳ್ಳಿ ಸಿದ್ದೇಶ ರವರ ನೇತೃತ್ವದಲ್ಲಿ, ಪದಾಧಿಕಾರಿಗಳು ಹಾಗೂ ನೌಕರರು ಶಾಸಕರಿಗೆ ನೀಡಿದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಗೀತ ಕಲಾವಿದಅಗಸಗಟ್ಟೆ ತಿಂದಪ್ಪ, ಹಾಗೂ ಸಹಕಲಾವಿದರಾದ ಕುಮಾರಿ ಶರಣ್ಯಗೌಡ, ಕುಮಾರಿ ಮಲ್ಲಾಪುರ ಪವಿತ್ರ, ವೆಂಕಟೇಶ ಕಟ್ಟಿಮನಿ,ಕೆ.ಶಂಕರಪ್ಪ ರವರು ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಕಾನಾಮಡಗು ಶರಣಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.*”ಶಕ್ತಿ” ಗೆ ಶಾಸಕರಿಂದ ಚಾಲನೆ*- ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಬಸ್ ಗಳಿಗೆ ಮೊದಲು ಹಿರಿಯ ಮಹಿಳೆಯರನ್ನು ಹತ್ತಲು ನೆರವಾಗೋ ಮೂಲಕ. “ಶಕ್ತಿ” ಯೋಜನೆಗೆ ಚಾಲನೆ ನೀಡಿದರು, ನಂತರ ಘಟಕಕ್ಕೆ ಬಂದ ಹೊಸ ಬಸ್ ನಲ್ಲಿ ತಾವೇ ಸ್ವತಃ ಸಂಚರಿಸಿ ಚಾಲನೆ ನೀಡಿದರು. ಮತ್ತು ಬಸ್ ನಿರ್ವಾಹಕರಾಗಿ ತಾವೇ ಕೇಳಿ ಟಿಕೇಟ್ ಪಡೆಯುವ ಮೂಲಕ, ಮತ್ತು ತಮ್ಮ ಜೊತೆಗಿರುವ ಇತರರಿಗೂ ಟಿಕೇಟ್ ಪಡೆದು ಸಂಚರಿಸುವ ಮೂಲಕ ಆದರ್ಶ ಮೆರೆದರು.ಹಾಗೂ ಈ ಸಂದರ್ಭದಲ್ಲಿ ಸರ್ಕಾರದಿಂದ ಇಂದು ಹೊಸ ಬಸ್ಸ್ ನಲ್ಲಿ ಮಹಿಳೆಯರು ಶಾಸಕರು ಹಾಗೂ ಕಾರ್ಯಕರ್ತರು ಬಸ್ಸಲ್ಲಿ ಹತ್ತಿ ನಿಲ್ದಾಣದಿಂದ ಕೂಡ್ಲಿಗಿಯ 19ನೇ ವಾರ್ಡಿನಲ್ಲಿ ಬರುವ ವಜ್ರಮುಷ್ಠಿ ಆಂಜನೇಯ ಸ್ವಾಮಿ ದೇವಸ್ಥಾನ ಕ್ಕೆ ಹೋಗಿ ಶಾಸಕರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರವೆ ಉತ್ತಮವಾದ ಅಭಿವೃದ್ಧಿ ಕೆಲಸಗಳು ಆಗಲಿ ಎಂದು ದೇವರಲ್ಲಿ ಪೂಜೆ ಸಲ್ಲಿಸಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ