ಗಂಡ ಬೋಮ್ಮನಹಳ್ಳಿ ಗೋ ಶಾಲೆಯ ಗುಣಮಟ್ಟದ ಮೇವು ಮತ್ತು ನೀರು ಒದಗಿಸಲು ಪರೀಶೀಲಿಸಿದ – ಶಾಸಕ ಡಾ. ಎನ್.ಟಿ. ಶ್ರೀ ನಿವಾಸ್.
ಗಂಡ ಬೊಮ್ಮನಹಳ್ಳಿ ಮೇ.08

ಕೂಡ್ಲಿಗಿ ತಾಲೂಕಿನ ಗಂಡ ಬೊಮ್ಮನಹಳ್ಳಿ ಗೋ ಶಾಲೆಗೆ ಶಾಸಕ ಡಾ.ಎನ್‌ಟಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಪ್ರಾರಂಭಿಸಲಾಗಿರುವ ಗೋ ಶಾಲೆಯಲ್ಲಿ ರೈತರ ಜಾನುವಾರುಗಳಿಗೆ ಸರಿಯಾದ ರೀತಿಯಲ್ಲಿ ಮೇವು ಮತ್ತು ನೀರಿನ ವ್ಯವಸ್ಥೆ ಸಮರ್ಪಕವಾಗಿ ದೊರೆಯುತ್ತಿದೆ ಎಂಬುದನ್ನು ರೈತರ ತಂಡದೊಂದಿಗೆ ಪರಿಶೀಲಿಸಿದರು. ಮನುಷ್ಯರು ಏನೇ ಸಮಸ್ಯೆಗೆ ಒಳಗಾದರೂ ಮತ್ತೊಬ್ಬರೊಂದಿಗೆ ಹೇಳಿಕೊಳ್ಳುತ್ತಾನೆ, ಆದರೆ ಮೂಕ ಪ್ರಾಣಿಗಳು ಹೇಳಲಾಗದೇ ಒದ್ದಾಡುತ್ತವೆ. ಹಾಗಾಗಿ ಮೂಕ ಪ್ರಾಣಿಗಳ ಆರೋಗ್ಯದ ಬಗ್ಗೆ ಗಮನ ಹರಿಸಿ ಎಂದರು.

ರೈತರಿಗೆ ಮೇವಿನ ಸಮಸ್ಯೆಯಾಗ ದಂತೆ ರಾಜ್ಯದಲ್ಲಿ ಈಗಾಗಲೇ ಗೋ ಶಾಲೆಗಳನ್ನು ಈಗಾಗಲೇ ತೆರೆದಿದ್ದು, ಗಂಡ ಬೊಮ್ಮನಹಳ್ಳಿ ಯಲ್ಲಿ ಗೋ ಶಾಲೆ ತೆರೆದು ಸಮರ್ಪಕವಾದ ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚಿನ ಮೇವು ಮತ್ತು ನೀರಿನ ಅವಶ್ಯಕತೆ ಕಂಡು ಬಂದಲ್ಲಿ ಪೂರೈಸುವ ವ್ಯವಸ್ಥೆ ಮಾಡಲಾಗುವುದು, ರಾಜ್ಯದಲ್ಲಿ ಭೀಕರ ಬರಗಾಲವಿದ್ದು ರೈತರು ಸಹಕಾರ ನೀಡಬೇಕು. ರೈತರ ರಾಸುಗಳಿಗೆ ಮೇವು ಮತ್ತು ನೀರು ಒದಗಿಸುವ ನಿಟ್ಟಿನಲ್ಲಿ ಸರಕಾರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತದೆ. ತಾಲೂಕಿನಲ್ಲಿ ಇನ್ನೂ ಅನೇಕ ಕಡೆ ಗೋ ಶಾಲೆಗಳನ್ನು ಪ್ರಾರಂಭ ಮಾಡುವುದಕ್ಕೆ ಈಗಾಗಲೇ ಸಂಬಂಧಪಟ್ಟ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಹತ್ತಿರ ಚರ್ಚೆ ಮಾಡಿದ್ದೇನೆ. 2000 ಕ್ಕೂ ಹಸುಗಳು ಇದ್ದು ಅವುಗಳಿಗೆ ನೆರಳಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ ಇತರೆ ಸೌಕರ್ಯಗಳು ಸೇರಿದಂತೆ ಹೆಚ್ಚಿನ ಶೆಡ್ಡುಗಳನ್ನು ನಿರ್ಮಿಸಲು ಕಾಮಗಾರಿ ಪ್ರಾರಂಭಿಸಿದ್ದಾರೆ. ಗಂಡ ಬೊಮ್ಮನಹಳ್ಳಿಯಲ್ಲಿ ಶಾಶ್ವತವಾದ ಗೋ ಶಾಲೆ ಮಾಡುತ್ತೀನಿ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸುತ್ತ ಮುತ್ತಲಿನ ಹಳ್ಳಿಗಳ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.