ಮಹಾ ದಾನ ರಕ್ತದಾನ…
ಮಾನವನಾದ ಮೇಲೆ ಇರಲಿ ಒಂದು ದಾನ
ದಾನಗಳಲ್ಲಿಯೇ ಮಹಾದಾನ ರಕ್ತದಾನ
ನೆನಪಿರಲಿ ಜೂನ್ -14 ರಕ್ತದಾನಿಗಳ ದಿನ
ರಕ್ತದಾನ ಮಾಡಿದ ದಿನ ಅದು ಶ್ರೇಷ್ಠ ದಿನ..
ಪ್ರತಿಯೊಬ್ಬರಿಗೂ ತಾಯಿಯಿಂದ ಜನನ
ರಕ್ತದಾನಿಗಳಿಂದ ಪಡೆಯುವೇವು ಮರು ಜನನ
ನೀಡಿದಾಗ ರಕ್ತ ಬದುಕೇ ಪಾವನ
ಮೂರು ತಿಂಗಳಿಗೊಮ್ಮೆ ಮಾಡಿ ಪುಣ್ಯದ ಕೆಲಸವನ..
ಕೆಂಪು ರಕ್ತ ಸಾರುತಿದೆ ವಿವಿಧತೆಯಲ್ಲಿ ಏಕತೆಯ
ವಿಲಿಯಂ ಹಾರ್ವೆ ಮೊದಲು ತಿಳಿಸಿದ ರಕ್ತ ಪರಿಚಲನೆಯ
ತವರು ಮನೆಯಾಗಿದೆ ರಕ್ತಕ್ಕೆ ಉಸಿರಿನ ಹೃದಯ
ರಕ್ತವೇ ಅಮೃತವಾಗಿದೆ ಪ್ರಾಣಿ ಸಂಕುಲಗಳಿಗೆ ಆಶಯ..
ಒಂದು ಹನಿ ರಕ್ತಕ್ಕೆ ತನ್ನದೇಯಾದ ಬೆಲೆಇದೆ
ರಕ್ತದಾನಿಗಳಿಗಂತು ದೇವರಕ್ಕಿಂತ ಹೆಚ್ಚಿನ ಸ್ಥಾನವಿದೆ
ನೇತ್ರದಾನ ರಕ್ತದಾನಕ್ಕೆ ಸ್ವರ್ಗದಲ್ಲಿ ನೆಲೆಯಿದೆ
ಪ್ರತಿಯೊಬ್ಬ ಧಾನಿಗಳಲ್ಲಿಯೂ ಮನುಷ್ಯತ್ವದ ಗುಣವಿದೆ..
ಮುತ್ತು.ಯ.ವಡ್ಡರ
ಶಿಕ್ಷಕರು
ಬಾಗಲಕೋಟ