ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ – ಸಂಭ್ರಮಾಚರಣೆ.
ಕೆ.ಹೊಸಹಳ್ಳಿ ಆ.23

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎಡಗೈ ಸಮುದಾಯಕ್ಕೆ ಶೇ 6 ಒಳ ಮೀಸಲಾತಿ ನೀಡಲು ನಿರ್ಧರಿಸಿದ ಹಿನ್ನೆಲೆ ದಲಿತ ಮುಖಂಡರು, ಯುವಕರು ಬುಧವಾರ ಕಾನ ಹೊಸಹಳ್ಳಿ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮ ಆಚರಿಸಿದರು. ಯುವ ಮುಖಂಡ ಮಂಜುನಾಥ ಎಸ್.ಎಂ ಮಾತನಾಡಿ, ನಾಗಮೋಹನದಾಸ್ ವರದಿಯಲ್ಲಿ ಒಳ ಮೀಸಲಾತಿ ವಿಂಗಡಣೆ ಮಾಡಲಾಗಿತ್ತು. ಆದರೆ, ಸರ್ಕಾರ 3 ಗುಂಪುಗಳಾಗಿ ವರ್ಗೀಕರಣ ಮಾಡಿದೆ. 18 ಜಾತಿಗಳಿರುವ ಎಡಗೈ ಸಮುದಾಯಕ್ಕೆ ಶೇ 6 ಮೀಸಲಾತಿ ನೀಡಲು ತೀರ್ಮಾನ ಕೈಗೊಂಡಿದ್ದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಿ ರಜನಿಕಾಂತ್, ಡಿ.ಎಸ್.ಎಸ್ ತಾಲೂಕು ಅಧ್ಯಕ್ಷ ಎಳ್ಳಿರು ಗಂಗಣ್ಣ, ಎನ್ ತಿಪ್ಪೇಸ್ವಾಮಿ, ಬಸವರಾಜ್ ಎಂ, ಸುರೇಶ್, ಶ್ರೀಧರ್ ವಕೀಲರು, ಟಿ ಅಜ್ಜಯ್ಯ, ಎನ್.ಎಂ ರಾಘವೇಂದ್ರ, ಶಶಿಕುಮಾರ್ ಟಿ, ನಾಗರಾಜ್ ಜಿ, ಎಂ ಅಜ್ಜಯ್ಯ, ಮಲ್ಲೇಶ್ ಎನ್, ಹನುಮಂತ ಎನ್, ಶಿವು ಟಿ ಸೇರಿದಂತೆ ದಲಿತ ಮುಖಂಡರು, ಜೈ ಭೀಮ ಯುವ ಸೇನೆಯ ಯುವಕರು ಇತರರು ಇದ್ದರು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ