ಶಾಂತಿ ಪ್ರೀತಿಯಿಂದ ಬಾಳು ರೂಪಿಸಲು ಸಾಹಿತ್ಯ ಅವಶ್ಯಕವಾಗಿದೆ — ಯಶವಂತರಾಯಗೌಡ ಪಾಟೀಲ.
ಇಂಡಿ ಜೂನ್.18

ಇಂಡಿ ಪರಮ ಪೂಜ್ಯ ಲಿಂಗೈಕೆ ಸಿದ್ದೇಶ್ವರ ಶ್ರೀಗಳ ಕುರಿತು ಪಠ್ಯದಲ್ಲಿ ಅವರ ಚರಿತ್ರೆ ಅಳವಡಿಸಬೇಕು. ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ಸಿದ್ದೇಶ್ವರ ಶ್ರೀಗಳ ಪ್ರಭಾವ ಬೀರಬೇಕು. ಸಿದ್ದೇಶ್ವರ ಶ್ರೀಗಳು ಜನಮಾನಸಕ್ಕೆ ಸಮಾಜಕ್ಕೆ ನೀಡಿದ ಅನನ್ಯ ಕೊಡುಗೆ ಮುಂದಿನ ಜನಾಂಗಕ್ಕೆ ತಿಳಿಸಬೇಕು. ಹೀಗಾಗಿ ಸಿದ್ದೇಶ್ವರ ಶ್ರೀಗಳ ಚರಿತ್ರೆ ಪಠ್ಯದಲ್ಲಿ ಅಳವಡಿಸಬೇಕು. ಈಗಾಗಲೆ ಈ ಕುರಿತು ಸರಕಾರದ ಗಮನಕ್ಕೆ ತಂದಿದ್ದೆನೆ ಪಠ್ಯಕ್ರಮದಲ್ಲಿ ಇವರ ಚರಿತ್ರೆ ಅಳವಡಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತೆನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಅವರು ಶನಿವಾರರಂದು ಪಟ್ಟಣದ ಶಂಕರ ಪಾರ್ವತಿ ಸಭಾಭವನದಲ್ಲಿ ಕಸಾಪ ತಾಲೂಕು ಘಟಕ ಇಂಡಿ ಹಾಗೂ ಇಂಡಿ ತಾಲೂಕಾ ಬ್ರಾಹ್ಮಣರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ನೂತನ ತಾಲೂಕಾ ಕಸಾಪ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿರಲು ನಮ್ಮ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಯುವ ಸಾಹಿತಿಗಳ ಮನಸ್ಸು ಒಂದು ಗೂಡಿ, ಶಾಂತಿ, ಪ್ರೀತಿಯಿಂದ ಬಾಳು ರೂಪಿಸಲು ಸಾಹಿತ್ಯ ಅವಶ್ಯಕವಾಗಿದೆ. ಕಸಾಪ ಕನ್ನಡ ನಾಡಿಗಾಗಿ ಸೇವೆ ಮಾಡುತ್ತಿದ್ದು ಸಾರಸ್ವತ ಲೋಕಕ್ಕೆ ತನ್ನದೆಯಾದ ಅನನ್ಯ ಕೊಡುಗೆ ನೀಡುತ್ತಿದೆ. ನಾವು ಗಡಿ ಭಾಗದಲ್ಲಿದ್ದರು ನಮ್ಮ ಮೇಲೆ ಮರಾಠಿಗರ ಪ್ರಭಾವ ಬೀರಿಲ್ಲ ಹೊರತು ನಮ್ಮ ಪ್ರಭಾವ ಅವರ ಮೇಲೆ ಬಿರಿದೆ. ಗಡಿಭಾಗದಲ್ಲಿ ಕನ್ನಡ ರಕ್ಷಣೆ ಮಾಡುವ ಜೊತೆಗೆ ಅಕ್ಕಲಕೋಟ, ಜತ್ತ ಭಾಗಗಳಲ್ಲಿ ಕನ್ನಡ ಮಾದ್ಯಮ ಶಾಲೆಗಳಿಗೆ ಅಲ್ಲಿನ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಸರ್ಕಾರ ಕೂಡಾ ಗಡಿಭಾಗದಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂದರು. ವಿಜಯಪುರ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ಕನ್ನಡ ನಾಡು,ನುಡಿ ಕನ್ನಡ ಭಾಷೆ,ಸಂಸ್ಕೃತಿ,ಸಾಹಿತ್ಯ,ಕವಿ, ಸಾಧಕರ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಕಾಯಕ ಮಾಡುವ ಜೊತೆಗೆ ಸರ್ವ ಧರ್ಮ ದವರನ್ನು ಗೌರವಿಸುವ ಸಾಹಿತ್ಯ ರಚನೆಗೆ ಪ್ರೋತ್ಸಾಹ ನೀಡುತ್ತೇನೆ ಎಂದ ಅವರು ಕಳೆದ ವರ್ಷ ೧೩೫ ಪೂಜ್ಯ ರನ್ನು ವಿವಿಧ ಸಮಾರಂಭಗಳಿಗೆ ಕರೆಯಿಸಿ ಗೌರವಿಸಿದ್ದೇನೆ ಎಂದರು. ಕಸಾಪದಿಂದ ನಿರಂತರ ಚಟುವಟಿಕೆಗಳನ್ನು ಜಿಲ್ಲಾ, ತಾಲೂಕು ಹೊಬಳಿ ಮಟ್ಟದಲ್ಲಿ ನಡೆಸಿ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಕನ್ನಡ ಹಾಗೂ ಕನ್ನಡದ ಸಂಘ ಸಂಸ್ಥೆಗಳಿಗೆ ಕಾರ್ಯಗಳಿಗೆ ಪ್ರೋತ್ಸಾಹಿಸುತ್ತೇನೆ ಎಂದರು. ತಡವಲಗಾದ ರಾಚೋಟೇಶ್ವರ ಶ್ರೀಗಳು, ಉಪನ್ಯಾಸ ನೀಡಿ ನಾದ ಸರಕಾರಿ ಶಾಲೆಯ ಮುಖ್ಯ ಗುರುಗಳಾದ ಸಿ.ಎಂ.ಬಂಡಗರ ಗುರುಗಳು, ಅಧಿಕಾರ ಪದಗ್ರಹಣ ಮಾಡಿ ತಾಲೂಕಾ ಅಧ್ಯಕ್ಷ ರಾಝವೇಂದ್ರ ಕುಲಕರ್ಣಿ,ಪಾರ್ವತಿ ಸೊನ್ನದ,ಅಡಿವೆಪ್ಪ ಸರಸಂಬಿ,ಸಂತೋಷ ವಾಲಿಕಾರ,ಎಂ.ಬಿ.ಬೈರಾಮಡಗಿ ಆಯ್.ಎಸ್.ಮಾಶ್ಯಾಳ ಮಾತನಾಡಿದರು.ವೇದಿಕೆಯ ಮೇಲೆ ಸಂಶೋಧಕ ಡಿ.ಎನ್.ಅಕ್ಕಿ, ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಗೌರವಾಧ್ಯಕ್ಷ ಪ್ರಭಾಕರ ಬಗಲಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಜಾವೇದ ಮೋಮಿನ್, ವಿಜಯಲಕ್ಷ್ಮಿ ದೇಸಾಯಿ, ಡಿ.ಆರ್.ಶಹಾ, ತಾಲುಕು ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟೀಲ, ಜೆಒಸಿಸಿ ಬ್ಯಾಂಕ ಉಪಾಧ್ಯಕ್ಷ ಅಲ್ಲಾಬಕ್ಷ ವಾಲಿಕಾರ, ಸತೀಶಚಂದ್ರ ಕುಲಕರ್ಣಿ, ಪ್ರಶಾಂತ ಕಾಳೆ, ಎಂ.ಎಂ ವಾಲಿಕಾರ, ಎಸ್.ವಿ.ಹರಳಯ್ಯ, ಪರಮಾನಂದ ಚಾಂದಕವಠೆ ಮತ್ತಿತರಿದ್ದರು.ತಾಲೂಕು ಬ್ರಾಹ್ಮಣರ ಸಂಘದ ವತಿಯಿಂದ ಶಾಸಕ ಯಶವಂತರಾಯಗೌಡ ಪಾಟೀಲ ಇವರನ್ನು ಸನ್ಮಾನಿಸಲಾಯಿತು.