ರಾಜ್ಯ ಸರ್ಕಾರ ದಿಂದ ಪ್ರತಿ ಎಕರೆಗೆ 2000₹ ಬರ ಪರಿಹಾರ – ಕೇಂದ್ರದಿಂದ 1₹ ರೂಪಾಯಿ ಪರಿಹಾರವಿಲ್ಲ.

ಹುನಗುಂದ ಜನೇವರಿ.22

ಜನರಿಂದ ಆಯ್ಕೆಯಾಗಿ ಜನ ಪ್ರತಿನಿಧಿಯಾದ ಬಳಿಕ ಸದಸ್ಯತ್ವದ ಮಹತ್ವ ಮತ್ತು ಅಧಿಕಾರವನ್ನು ಅರಿತು ಜನರೊಂದಿಗೆ ಬೆರತು ಜವಾಬ್ದಾರಿಯುತವಾಗಿ ಗ್ರಾಮದ ಅಭಿವೃದ್ದಿ ಕಾರ್ಯಗಳನ್ನು ಮಾಡಿದಾಗ ಮಾತ್ರ ಆ ಸದಸ್ಯತ್ವಕ್ಕೆ ಅರ್ಥ ಬರಲಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಸೋಮವಾರ ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹುನಗುಂದ ಮತ್ತು ಇಳಕಲ್ಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನ ಗ್ರಾ.ಪಂ ಮತ್ತು ಪಿಕೆಪಿಎಸ್ ಅಧ್ಯಕ್ಷ ಉಪಾಧ್ಯಕ್ಷರ ಸನ್ಮಾನ ಹಾಗೂ ಸಮಾಲೋಚನ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಗ್ರಾಮ ಸ್ವರಾಜ್ಯವೇ ದೇಶದ ಅಭಿವೃದ್ದಿ ಎನ್ನುವ ಮಹಾತ್ಮ ಗಾಂಧೀಜಿಯವರ ಕನಸ್ಸನ್ನು ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿ ಅವರು ಮೂರು ಹಂತದ ಪಂಚಾಯತರಾಜ್ಯ ವ್ಯವಸ್ಥೆಯನ್ನು ಜಾರಿಗೆ ತಂದು ಗ್ರಾಮಾಡಳಿತ ಅವಕಾಶ ಕೊಟ್ಟಿದ್ದು ಕಾಂಗ್ರೆಸ್ ಪಕ್ಷವಾಗಿದೆ.ಗ್ರಾಮೀಣ ಮಟ್ಟದ ಸಮಸ್ಯೆಗಳನ್ನು ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅರಿತು ಪರಿಹರಿಸುವ ಕೆಲಸ ವಾಗಬೇಕು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಲ್ಲಿ ೬೦ ಭರವಸೆಗಳನ್ನು ಈಡೇರಿಸಿದೆ, ಚುನಾವಣೆ ಪೂರ್ವದಲ್ಲಿ ಕೊಟ್ಟ ಐದು ಗ್ಯಾರಂಟಿಗಳನ್ನು ೨ ತಿಂಗಳನಲ್ಲಿ ಸಮರ್ಥವಾಗಿ ಜಾರಿಗೆ ತಂದಿದ್ದು.ಹುನಗುAದ ಇಳಕಲ್ಲ ಅವಳಿ ತಾಲೂಕಿನಲ್ಲಿ ಅನ್ನ ಭಾಗ್ಯ ಯೋಜನೆಯಿಂದ ೨.೨೮ ಲಕ್ಷ ಜನ ಫಲಾನುಭವಿಗಳು ಲಾಭವನ್ನು ಪಡೆದು ಕೊಂಡರೇ,ಗೃಹ ಲಕ್ಷ್ಮಿ ಯೋಜನೆಯಿಂದ ೫೭ ಸಾವಿರ ಜನರು ಲಾಭವನ್ನು ಪಡೆಯುತ್ತಿದ್ದು.ಗೃಹ ಜ್ಯೋತಿ ೭೦ ಸಾವಿರ ಕುಟುಂಬಗಳ ಲಾಭವನ್ನು ಪಡೆದು ಕೊಂಡಿದ್ದು.ಶಕ್ತಿ ಯೋಜನೆಯಿಂದ ೬೬ ಲಕ್ಷ ಜನ ಮಹಿಳೆಯರು ಉಚಿತ ಪ್ರಯಾಣ ಮಾಡಿ ೨೪ ಕೋಟಿ ಲಾಭವನ್ನು ಸರ್ಕಾರಕ್ಕೆ ತಂದಿದ್ದಾರೆ.ಕೇಂದ್ರ ಸರ್ಕಾರ ಪ್ರತಿ ವರ್ಷ ೫೦ಸಾವಿರ ಕೋಟಿ ಜಿಎಸ್‌ಟಿ ಹಣ ರಾಜ್ಯಕ್ಕೆ ಕೊಡಬೇಕು.

ಆದರೇ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಲತಾಯಿ ಧೋರಣೆಯನ್ನು ತಾಳುತ್ತಿದೆ.ಕಳೆದ ನಾಲ್ಕು ವರ್ಷದಲ್ಲಿ ಕೇವಲ ೫೨ ಸಾವಿರ ಕೋಟಿ ಜಿಎಸ್‌ಟಿ ಹಣವನ್ನು ಕೊಟ್ಟಿದೆ ಇನ್ನು ೪ ಲಕ್ಷ ಕೋಟಿ ಹಣವನ್ನು ಬಾಕಿ ಉಳಿಸಿ ಕೊಂಡಿದ್ದು.ರಾಜ್ಯ ಸರ್ಕಾರ ಪ್ರತಿ ಎಕರೆಗೆ ೨೦೦೦ ರೂ ಬರ ಪರಿಹಾರ ನೀಡಿದ್ದು.ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಬಂದು ಹೋದರೂ ಇಲ್ಲಿವರಗೆ ೧ ರೂಪಾಯಿ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಂಗಾಧರ ದೊಡಮನಿ ಮತ್ತು ಅಬ್ದುಲ್‌ರಜಾಕ್ ತಟಗಾರ ಮಾತನಾಡಿ ಬಿಜೆಪಿ ಅಯೋಧ್ಯೆ ರಾಮಮಂದಿರವನ್ನು ಮುಂದಿಟ್ಟು ಕೊಂಡು ಪಕ್ಷವನ್ನು ಬಲಿಷ್ಠ ಗೊಳಿಸುತ್ತದೆ ಹೊರೆತು ಅಭಿವೃದ್ದಿಯಿಂದಲ್ಲ, ಗ್ರಾ.ಪಂ ಸದಸ್ಯರು ಪಕ್ಷದ ತಳಮಟ್ಟದ ಬೇರುಗಳಿದಂತೆ.ಪಕ್ಷಗಳಿಲ್ಲದಿದ್ದರೇ ಸದಸ್ಯರಾಗಲು ಸಾಧ್ಯವಿಲ್ಲ,ಪಕ್ಷದ ಅಭಿವೃದ್ದಿ ತಾವೆಲ್ಲ ಪ್ರಾಮಾಣಿಕ ಕೆಲಸ ಮಾಡಿದಾಗ ಮಾತ್ರ ಪಕ್ಷವನ್ನು ಬಲಿಷ್ಠ ಗೊಳಿಸಲು ಸಾಧ್ಯ.ಗ್ಯಾರಂಟಿಗಳ ಬಗ್ಗೆ ಪಕ್ಷದ ಕಾರ್ಯಕರ್ತರು ನಕಾರಾತ್ಮಕವಾಗಿ ಮಾತನಾಡುವುದ್ದನ್ನು ಬಿಡಬೇಕು,ಗ್ಯಾರಂಟಿಗಳನ್ನು ಸಮರ್ಥವಾಗಿ ಅನುಷ್ಠಾನ ಗೊಳಿಸಲು ಸರ್ಕಾರ ರಾಜ್ಯ ಮಟ್ಟದ ಸಮಿತಿಯನ್ನು ನೇಮಿಸಿದೆ.ಲೋಕಸಭೆ ಚುನಾವಣೆಯಲ್ಲಿ ಕಾರ್ಯಕರ್ತರು ಸಮರ್ಥವಾಗಿ ಕೆಲಸ ಮಾಡಬೇಕು ಎಂದರು.ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ,ಮುಖಂಡ ಮಹಾಂತೇಶ ಅವಾರಿ,ವಿಜಯ ಮಹಾಂತೇಶ ಗದ್ದನಕೇರಿ,ಚನ್ನಪ್ಪಗೌಡ ನಾಡಗೌಡ್ರ,ಜಬ್ಬಾರ ಕಲಬುರ್ಗಿ ಮಾತನಾಡಿದರು.ನೂತನ ಗ್ರಾ.ಪಂ ಮತ್ತು ಪಿಕೆಪಿಎಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಪಕ್ಷದಿಂದ ಸನ್ಮಾನಿಸಲಾಯಿತು ಮತ್ತು ಗ್ರಾ.ಪಂ ಮಟ್ಟದ ಸಮಸ್ಯೆಯ ಕುರಿತು ಅಧ್ಯಕ್ಷ ಮತ್ತು ಉಪಾಧ್ಯಕ್ಷರೊಂದಿಗೆ ಸಮಾಲೋಚಣೆ ನಡೆಸಲಾಯಿತು.ಬಸವರಾಜ ಗದ್ದಿ,ಸಂಗಣ್ಣ ಗಂಜೀಹಾಳ,ಶಿವಾನಂದ ಕಂಠಿ,ಶರಣು ಬೆಲ್ಲದ,ಮುತ್ತಣ್ಣ ಕಲಗೋಡಿ,ರಜಾಕ್ ರೇಶ್ಮಿ,ಖಾಜಾಸಾಬ ಬಾಗವಾನ,ಮಹಾಂತೇಶ ನರಗುಂದ,ಶೇಖರಪ್ಪ ಬಾದವಾಡಗಿ,ಮುತ್ತು ಜಾಧವ,ಶಂಕ್ರಪ್ಪ ನೇಗಲಿ,ಮಹಿಬೂಬ ಸರಕಾವಸ್,ಅಪ್ಪಾಜಿ ಪಾಟೀಲ ಸೇರಿದ್ದಂತೆ ಅನೇಕರು ಇದ್ದರು.ಸಿದ್ದು ಭದ್ರಶೆಟ್ಟಿ ನಿರೂಪಿಸಿ ವಂದಿಸಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button