ಮತೀ ಹೀನಗಳಿಂದ ಸಂವಿಧಾನ ಶಿಲ್ಪಿಗೆ ಅಪಮಾನ, ತಹಶೀಲ್ದಾರ್ ಹಾಗೂ ಅಧಿಕಾರಿಗಳಿಗೆ – ದಲಿತ ಮುಖಂಡರಿಂದ ಘೇರಾವ್.

ಗುಳಗುಳ್ಳಿ ಮಾ.03

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳ್ಳಿ ಗ್ರಾಮದಲ್ಲಿ ಮಹಾನ್ ನಾಯಕರಾದ ಡಾ, ಬಿ.ಆರ್ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ, ಬಾಬು ಜಗಜೀವನ್ ರಾಮ್ ಅವರ ಭಾವ ಚಿತ್ರವಿರುವ ನಾಮ ಫಲಕಕ್ಕೆ ಮತೀ ಗೆಟ್ಟ್ ಕಿಡಿಗೇಡಿಗಳಿಂದ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವುದು ಇಡೀ ಜಿಲ್ಲೆಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯನ್ನು ಖಂಡಿಸಿ ಗಜೇಂದ್ರಗಡ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ ನೂರಾರು ದಲಿತ ಮುಖಂಡರು ಅಧಿಕಾರಿಗಳ ವಿರುದ್ಧ ವಾಗ್ಧಾಳಿ ನಡೆಸಿದರು.

ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ಘಟನೆ ನಡೆದು ದೀರ್ಘ ಸಮಯ ಕಳೆದರೂ ಸ್ಥಳಕ್ಕೆ ಆಗಮಿಸದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಆಲೂರು ಮತ್ತು ತಹಶೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ ಅವರನ್ನು ಮುಖಂಡರು ತೀವ್ರವಾಗಿ ತರಾಟೆಗೆ ತೆಗೆದು ಕೊಂಡರು.

ನಿಮಗೆ ದಲಿತರ ಬದುಕಿಗಿಂತ ರಾಜಕೀಯ ಕಾರ್ಯಕ್ರಮಗಳೇ ಮುಖ್ಯವಾಯಿತೇ? ತಾಲೂಕಿನಾದ್ಯಂತ ಅಸ್ಪೃಶ್ಯತೆ ನಿವಾರಣಾ ಕಾರ್ಯಕ್ರಮಗಳನ್ನು ಸರಿಯಾಗಿ ಮಾಡದ ಕಾರಣವೇ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಮುಖಂಡರು ಕಿಡಿಕಾರಿದರು.

ಈಶ್ವರ ದೊಡ್ಡಮನಿ ಹಿರಿಯ ಮುಖಂಡರು, ಗುಳಗುಳ್ಳಿ ಮಾತನಾಡಿ:-

ನಿನ್ನೆ ಮಧ್ಯರಾತ್ರಿ ಕಿಡಿಗೇಡಿಗಳು ಮಹಾನ್ ನಾಯಕರ ಭಾವ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದಲ್ಲದೆ, ಚೀಟಿಯೊಂದರಲ್ಲಿ ನಮ್ಮ ಸಮುದಾಯದ ಬಗ್ಗೆ ಅಸಭ್ಯವಾಗಿ ಬರೆದು ವಿಕೃತಿ ಮೆರೆದಿದ್ದಾರೆ.

ಇಂತಹ ನೀಚರಿಗೆ ಪೊಲೀಸರು ತಕ್ಕ ಪಾಠ ಕಲಿಸಲೇ ಬೇಕು. ಡಿ.ಜಿ ಕಟ್ಟಿಮನಿ ಜಿಲ್ಲಾಧ್ಯಕ್ಷರು, ಡಿ.ಎಸ್.ಎಸ್ ಗದಗ ಮಾತನಾಡಿ ಸಂಬಂಧಪಟ್ಟ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಾರದಿರುವುದು ಬೇಸರದ ಸಂಗತಿ ತಹಶೀಲ್ದಾರರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ.

ಇಲಾಖೆಯ ವತಿಯಿಂದ ಯಾವುದೇ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಅನಿವಾರ್ಯವಾದೀತು ಎಂದು ಎಚ್ಚರಿಕೆ ನೀಡಿದರು.

ಮಂಜುನಾಥ್ ಬುರುಡಿ ಜಿಲ್ಲಾ ಸಂಘಟನಾ ಸಂಚಾಲಕರು ಮಾತನಾಡಿದ ಅವರು ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಈ ದೇಶದ ಎರಡು ಕಣ್ಣುಗಳಿದ್ದಂತೆ.

ಈ ಮಹಾನಾಯಕರಿಗೆ ಅವಮಾನ ಮಾಡಿದವರನ್ನು ಕೂಡಲೇ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಇಂತಹ ಘಟನೆ ನಡೆದಾಗ ಸ್ಥಳಕ್ಕೆ ಬಾರದ ಅಧಿಕಾರಿಗಳು ನಮ್ಮ ತಾಲೂಕಿಗೆ ಬೇಡ ಎಂದರು.

ಉಮೇಶ ಅರಳಿಗಿಡದ (ವಕೀಲರು):-

ದಲಿತರ ಆಶಾಕಿರಣಕ್ಕೆ ಅವಮಾನ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಕಾನೂನು ಪಾಠ ಕಲಿಸಬೇಕು. ಸಮಸ್ತ ದಲಿತ ಸಮುದಾಯ ಇಂದು ರೊಚ್ಚಿಗೆದ್ದಿದೆ, ನ್ಯಾಯ ಸಿಗುವವರೆಗೂ ನಾವು ವಿಶ್ರಮಿಸುವುದಿಲ್ಲ.

ಹಣಮಂತ ಪೂಜಾರ ಯುವ ಮುಖಂಡರು:-

ಕೇವಲ ಪೂಜೆ ಸಲ್ಲಿಸಿದರೆ ಸಾಲದು, ಅವಮಾನ ಮಾಡಿದ ಪುಂಡರನ್ನು ಕೂಡಲೇ ಬಂಧಿಸಿ.

ಇಲ್ಲವಾದರೆ ಮುಂದಿನ ದಿನಗಳಲ್ಲಿ ಗಜೇಂದ್ರಗಡ ತಾಲೂಕು ಬಂದ್ ಕರೆ ನೀಡುವುದು ಖಚಿತವಾದೀತು ಎಚ್ಚರಿಕೆ ನೀಡಿದರು.

ಮುಖಂಡರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಗಜೇಂದ್ರಗಡ ತಹಶೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ ಅವರು ಮಾತನಾಡಿ, ಈ ಹೀನ ಕೃತ್ಯ ನಮಗೂ ಕೂಡ ಅತೀವ ಬೇಸರ ಉಂಟು ಮಾಡಿದೆ.

ಈ ದೇಶಕ್ಕೆ ಕಾನೂನು ಕಲ್ಪಿಸಿ ಕೊಟ್ಟ ಮಹಾನ್ ನಾಯಕನಿಗೆ ಅವಮಾನವಾಗಿದೆ ಎಂದರೆ ಇಡೀ ದೇಶವೇ ತಲೆ ತಗ್ಗಿಸುವ ಕೃತ್ಯವಿದು.

ತಾಲೂಕ ಆಡಳಿತವು ನಿಮ್ಮ ನೋವಿನ ಜೊತೆಗಿದೆ. ಇದರಲ್ಲಿ ಯಾವುದೇ ಜಾತಿ, ಭೇದ ಭಾವ ಅಥವಾ ರಾಜಕೀಯಕ್ಕೆ ಆಸ್ಪದವಿಲ್ಲ.

ನಾವು ಕಾನೂನು ಮುಖಾಂತರ ಚುರುಕಾದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವ ಐಐವರೆಗೂ ಸುಮ್ಮನೆ ಕೂರುವುದಿಲ್ಲ. ದಯವಿಟ್ಟು ಎಲ್ಲರೂ ಶಾಂತಿ ಕಾಪಾಡಿ, ತನಿಖೆಗೆ ಸಹಕರಿಸಿ ಎಂದು ಭರವಸೆ ನೀಡಿದರು.

ನರಗುಂದ ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ ಅವರು ಮಾತನಾಡಿ, ಶಾಂತಿ ಭಂಗ ಮಾಡುವ ಕ್ರೂರಿಗಳನ್ನು ಶೀಘ್ರವೇ ಪತ್ತೆ ಹಚ್ಚುತ್ತೇವೆ. ಈಗಾಗಲೇ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಮೂಲಕ ಹೆಚ್ಚಿನ ರೀತಿಯ ತನಿಖೆ ನಡೆಸಲಾಗುತ್ತಿದ್ದು, ಕಿಡಿಗೇಡಿಗಳಿಗೆ ಕಾನೂನು ಮೂಲಕ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.ಬಳಿಕ ತಹಶೀಲ್ದಾರ್ ಮತ್ತು ಡಿವೈಎಸ್ಪಿ ಅವರ ಸಮ್ಮುಖದಲ್ಲಿ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸೋಮು ನಾಗರಾಜ್. ದುರುಗೇಶ್ ಹಿರೇಮನಿ. ಪುಂಡಲೀಕ್ ಮಾದರ. ಯಮನಪ್ಪ ಪೂರ್ತಿಗೇರಿ ಯಮನೂರಪ್ಪ ಅಬ್ಬಿಗೇರಿ. ಅಶೋಕ್ ಮಾದರ. ಹಣಮಂತ ಪೂಜಾರ್. ಮಹೇಶ ಕುರಬನಹಳ. ಭೀಮಪ್ಪ ದೊಡ್ಡಮನಿ. ಯಮನೂರಪ್ಪ ದಾರಿಮಣಿ. ಫಕೀರಪ್ಪ ಮಾದರ. ರಾಘು ರಾಠೋಡ್. ಮಂಜು ಮಾದರ. ಲಕ್ಷ್ಮಣ್ಣ ಲಕ್ಕಲಕಟ್ಟಿ. ಬಸವರಾಜ್ ಹಾದಿಮನಿ. ಬಸವರಾಜ್ ಕಡಬೀನ. ಆನಂದ ಮಾದರ. ಶರಣು ಅರಳಿಗಿಡದ. ಈಶ್ವರ ದೊಡ್ಡಮನಿ. ನೀಲಪ್ಪ ತೋಟಗಂಟಿ. ರಘು ಮಾದರ. ಸಚಿನ್ ಗುಡಿಮಣಿ. ರಾಚಯ್ಯ ಬಾಳಿಕಾಯಿಮಠ. ಯಮನೂರು ಮುಲಿಮನಿ. ಅಮರ್ ಚಲವಾದಿ. ಮಾರುತಿ ದೊಡ್ಡಮನಿ. ಸ್ವಯಂ ಪ್ರೇರಣೆಯಿಂದ ಸಾಂಘಿಕವಾಗಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button