ಕೇಂದ್ರದ ಅಕ್ಕಿ ನಿರಾಕರಣೆ — ಕೇಂದ್ರ ಸರ್ಕಾರದ ಪ್ರತಿಕೃತಿ ದಹನ.
ಹೊಸಪೇಟೆ ಜೂನ್.21
ಕೇಂದ್ರ ಸರ್ಕಾರ ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿರುವುದನ್ನು ವಿರೋಧಿಸಿ ನಗರದಲ್ಲಿ ಸಿಪಿಎಂ ಪಕ್ಷವು ಕೇಂದ್ರ ಸರ್ಕಾರದ ಪ್ರತಿಕೃತಿ ದಹನ ಮಾಡಿತು. ಪಕ್ಷದ ಕಾರ್ಯಕರ್ತರು ಶ್ರಮಿಕ ಭವನದ ಹತ್ತಿರವಿರುವ ಭಗತ್ ಸಿಂಗ್ ವ್ರುತ್ತದಲ್ಲಿ ಜಮಾವಣೆ ಗೊಂಡ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಮುಖಂಡರಾದ ಎ ಕರುಣಾನಿಧಿ ಭಾರತದ ಆಹಾರ ನಿಗಮದಲ್ಲಿ ಅಂದಾಜು 232 ಲಕ್ಷ ಟನ್ ಗಳಷ್ಟು ಅಕ್ಕಿ ದಾಸ್ತಾನು ಇದ್ದರೂ ರಾಜ್ಯದ ಯೋಜನೆಗೆ ಬೇಕಾಗುವ 2.25 ಲಕ್ಷ ಟನ್ ಅಕ್ಕಿಯನ್ನು ಖರೀದಿಗೆ ನೀಡಲು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎನ್ನುವ ಒಂದೇ ಕಾರಣಕ್ಕೆ ರಾಜ್ಯದ ಜನತೆಯ ಮೇಲೆ ದೌರ್ಜನ್ಯ ನಡೆಸುತ್ತಿದೆಯಲ್ಲದೇ ಪ್ರಧಾನಿ ಮೋದಿ ಅವರು ಬಡವರ ವಿರೋಧಿಯಾಗಿದ್ದಾರೆ ಎಂದರು.
ಹೇಳಿದರುಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್ ಭಾಸ್ಕರ್ ರೆಡ್ಡಿ ಮಾತನಾಡಿ ಆಹಾರ ನಿಗಮದ ಅಧಿಕಾರಿಗಳು ಅಕ್ಕಿ ನೀಡಲು ಒಪ್ಪಿದ್ದರೂ ನಂತರ ಕೇಂದ್ರ ಸರ್ಕಾರ ನಿರಾಕರಿಸಿರುವುದು ಪ್ರಧಾನ ಮಂತ್ರಿಗಳ ರಾಜಕೀಯ ದುರುದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹೋರಾಟದಲ್ಲಿ ತಾಲೂಕು ಸಮಿತಿ ಕಾರ್ಯದರ್ಶಿ ವಿ ಸ್ವಾಮಿ, ಸಮಿತಿ ಸದಸ್ಯರಾದ ಯಲ್ಲಾಲಿಂಗ, ಸ್ವಪ್ನ ,ಎಂ ಗೋಪಾಲ್,ಹಾಗೂ ಸಂಘಟನೆಗಳ ಮುಖಂಡರಾದ ಎಲ್ ಮಂಜುನಾಥ, ಹಾಗೂ ಮೊದಲಾದವರು ಭಾಗವಹಿಸಿದ್ದರು.
ತಾಲೂಕು ವರದಿಗಾರರು:ಮಾಲತೇಶ್. ಶೆಟ್ಟರ್. ಹೊಸಪೇಟೆ