ಸಿ.ಇ.ಓ ಭೇಟಿ — ಕುಡಿಯುವ ನೀರಿನ ಪರಿಶೀಲನೆ.
ಇಂಡಿ ಜೂನ್.21

ಇಂಡಿ ತಾಲೂಕಿನ ಅಗಸನಾಳ ಮುಲ್ಲಾ ವಸ್ತಿ, ಬಬಲಾದ, ಹಳಗುಣಕಿ, ಚವಡಿಹಾಳ, ಹೊರ್ತಿ ಗ್ರಾ.ಪಂ ಗಳ ವಸತಿ ಪ್ರದೇಶಗಳಿಗೆ ಜಿ.ಪಂ ಸಿಇಒ ರಾಹುಲ್ ಶಿಂಧೆಯವರು ಭೇಟಿ ನೀಡಿ ವಸತಿಗಳಲ್ಲಿ ಟ್ಯಾಂಕರ ಮೂಲಕ ನೀರು ಪೂರೈಕೆ ಪರಿಶೀಲಿಸಿ ವಸತಿ ಪ್ರದೇಶದ ಜನರ ಜೊತೆ ಚರ್ಚಿಸಿದರು. ಮತ್ತು ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ಸಮಸ್ಯೆ ಕುರಿತು ಚರ್ಚಿಸಿ ಕ್ರಮ ಕೈಕೊಳ್ಳಲು ಪಿಡಿಒ ಇವರಿಗೆ ತಾಕೀತು ಮಾಡಿದರು.ಹಳಗುಣಕಿ ವಸತಿಗಳಲ್ಲಿ ಒಂದು ಟ್ಯಾಂಕರ್ ಮೂರು ಬಾರಿ ಮತ್ತು ಬಬಲಾದದಲ್ಲಿ ಎರಡು ಟ್ಯಾಂಕರ್ ಆರು ಬಾರಿ ನೀರು ಪೂರೈಸುತ್ತಿರುವ ಕುರಿತು ಪರಿಶೀಲಿಸಿದರು.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬರುವ ಹಂಜಗಿ ಮತ್ತು ಸಂಗೋಗಿ ಕೆರೆಗಳಿಗೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಕೃಷ್ಣಾ ಕಾಲುವೆ ಮುಖಾಂತರ ನೀರು ಬರದೇ ಇದ್ದರೆ ಗ್ರಾಮಗಳಿಗೆ ಯಾವದೇ ರೀತಿಯ ತೊಂದರೆಯಾಗದಂತೆ ಮುನ್ನಚ್ಛರಿಕೆ ಕ್ರಮಕ್ಕೆ ಗ್ರಾಮೀಣ ಕುಡಿಯುವ ನೀರಿನ ಅಭಿಯಂತರರಿಗೆ ಸೂಚಿಸಿದರು.ಚವಡಿಹಾಳದಲ್ಲಿ ನೂತನವಾಗಿ ಕಟ್ಟಿದ ಡಿಜಿಟಲ್ ಗ್ರಂಥಾಲಯಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.ಗ್ರಾಮೀಣ ಕುಡಿಯುವ ನೀರು ಸರಬರಾಜು ಎಇಇ ಎಸ್.ಆರ್.ರುದ್ರವಾಡಿ, ಇಒ ಸುನೀಲ ಮದ್ದೀನ, ಸಂಜಯ ಖಡಗೇಕರ, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ.ಇಂಡಿ, ಪಿಡಿಒ ಸಿದರಾಯ ಬಿರಾದಾರ, ಸಿ.ಜಿ.ಪಾರೆ ಮತ್ತಿತರಿದ್ದರು.