ದ್ವಿಚ್ರವಾಹನ ಸವಾರನ ಮೇಲೆ ಕಾರು ಹಾಯಿಸಿ ವಾಹನ ಸಹಿತ ಚಾಲಕ ನಾಪತ್ತೆ.
ನಾದ ಕೆಡಿ ಜೂನ್.23
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದ ಆರ್.ಪಿ.ಢಾಬಾ ಹತ್ತಿರ ಇಂದು ಬೆಳಗ್ಗೆ 10ಘಂಟೆ ಸುಮಾರಿಗೆ ಇಂಡಿ ತಾಲೂಕಿನ ಲಿಂಗದಳ್ಳಿ ಗ್ರಾಮದ ಅಮಸಿದ್ಧ. ಹೂಗಾರ ವಯಸ್ಸು ಅಂದಾಜು 45 ಇತನು ರಾಮನಳ್ಳಿಯಿಂದ ಸ್ವ ಗ್ರಾಮ ಲಿಂಗದಳ್ಳಿಗೆ ದ್ವಿ ಚಕ್ರ ವಾಹನದ ಮೇಲೆ ಹೊರಡುವಾಗ ನಾದ ಕೆಡಿ ಗ್ರಾಮದ ಆರ್.ಪಿ.ಢಾಭಾ ಸಮೀಪ ಇಂಡಿ ಮಾಗ೯ದಿಂದ ಆಲಮೇಲ ಮಾಗ೯ವಾಗಿ ಹೊರಟ ಕೆಎ ,28 ಎಮ್ ಎ 1089 ನಂಬರ್ ಇರುವ ಕಾರೊಂದು ದ್ವಿ ಚಕ್ರ ಸವಾರನ ಮೇಲೆ ಹಾಯಿಸಿ ಚಾಲಕ ವಾಹನ ಸಹಿತ ನಾಪತ್ತೆಯಾಗಿದ್ದಾನೆ.

ಆದರೆ ಕಾರಿನ ನಂಬರ್ ಪ್ಲೇಟ್ ಮಾತ್ರ ಅಫಘಾತ ಮಾಡಿದ ಸ್ಥಳದಲ್ಲೆ ಬಿದ್ದಿರುವುದು ಕಂಡು ಬಂದಿದೆ.ಅಪಘಾತಗೊಳಗಾದ ವ್ಯಕ್ತಿಗೆ ಬಲವಾದ ಪೆಟ್ಟಾಗಿದ್ದು,ಕಿವಿಯಿಂದ ಬಹಳಷ್ಟು ರಕ್ತ ಹರಿದಿದ್ದು,ಸ್ಥಿತಿ ಚಿಂತಾಜನಕವಾಗಿದೆ.ಆ ವ್ಯಕ್ತಿಯನ್ನು ಸಾವ೯ಜನಿಕರು ತಾಲೂಕಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ