ಭಗವತಿ,ಶಿರೂರು ಏತನೀರಾವರಿಗೆ 589 ಕೋಟಿ ,50000 ಎಕರೆಗೆ ನೀರಾವರಿಗೆ ಇದರ ಬಗ್ಗೆ ಮಾಜಿಶಾಸಕ ಡಾ|| ವ್ಹಿ. ಸಿ. ಚರಂತಿಮಠ ರೈತಾಪಿವರ್ಗಕ್ಕೆ ತಿಳಿಸುವ ಸಂದೇಶ ಏನು ?

ಹುನಗುಂದ ಜೂನ್‌ : 24

ಪಂಚನದಿಗಳ ಬೀಡು ಎಂದು ಕರ್ನಾಟಕದ ಇತಿಹಾಸದಲ್ಲಿ ಹೆಸರು ಪಡೆದಿರುವ ಅವಳಿ ಜಿಲ್ಲೆಗಳಾದ ಬಾಗಲಕೋಟೆ-ವಿಜಯಪೂರ ಬರದ ಛಾಯೆಯನ್ನು ಹಾಗೂ ನೆರೆಹಾಳಿಯನ್ನು ಸತತವಾಗಿ ಈ ಜಿಲ್ಲೆಗಳಲ್ಲಿ ಜನರು ಅಂಜದೆ ಎದುರಿಸುತ್ತಾ ಬಂದಿದ್ದಾರೆ ಇಂಥಹ ಬರದ ವಾಯೆ ಇರುವ ಜಿಲ್ಲೆಗಳಲ್ಲಿ ಒಂದಾದ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ಮತಕ್ಷೇತ್ರಕ್ಕೆ ಬರುವ ಗ್ರಾಮಗಳಾದ – ಭಗವತಿ-ಹಳ್ಳೂರ-ಮುಗಳೊಳ್ಳಿ-ಬೇವೂರು-ಸಂಗಾಪೂರ – ಬಿಲ್ ಕೆರೂರು- ಅಚನೂರು- ಮುಡಪಲಜೀನಿ-ಕಡ್ಲಿಮಟ್ಟಿ- ಮನ್ನಿಕಟ್ಟಿ-ಬೆನಮಟ್ಟಿ- ಶಿರೂರು- ತಿಮ್ಮಾಪೂರ. ಈ ಎಲ್ಲಾ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವದೆಂದು ಪ್ರತಿ ಗ್ರಾಮದ ಭೂಮಿಯ ಹೆಕ್ಟೇರ್‌ ವಿವರಣೆಯನ್ನು ಈ ರೀತಿಯಾಗಿ ವಿವರಣೆಯನ್ನು ಪತ್ರಿಕಾ ಮುಕಾಂತರ ನೀಡಿದ ವಿವರ ಮುಗಳೊಳ್ಳಿ ಗ್ರಾಮದ ಬಳಿ ಆಲಮಟ್ಟಿ ಹಿನ್ನೀರಿನ ಘಟಪ್ರಭಾನದಿ ಪಾತ್ರದಿಂದ ನೀರನ್ನು ಲಿಪ್ಟ ಮಾಡಲಾಗುತ್ತದೆ. ಕೃಷ್ಣಾಜಲ ಭಾಗ್ಯದ ನಿಗಮದಿಂದ 346 ಕೋಟಿ ರೂ ವೆಚ್ಚದಲ್ಲಿ ಭಗವತಿ ಏತನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಹಳ್ಳೂರ ಗ್ರಾಮದ -1760.08 ಹೆಕ್ಟೆರ್-‌ ಬೇವೂರು -979 -76. ಹೆಕ್ಟೆರ್‌ – ಸಂಗಪೂರು -435.79 ಹೆಕ್ಟೆರ್‌ – ಬಿಲ್‌ ಕೆರೂರು -515.32 ಹೆಕ್ಟೆರ್‌ -ಅಚನೂರು – 936.05 ಹೆಕ್ಟೆರ್‌ -ಮುಡಪಲಜೀವಿ -295 ಹೆಕ್ಟೆರ್‌ -ಕಡ್ಲಿಮಟ್ಟಿ- 563 ಹೆಕ್ಟೆರ್-‌ ಮುಗಳೊಳ್ಳಿ- 349.66 ಹೆಕ್ಟೆರ್‌ – ಭಗವತಿ-1094.60 ಹೆಕ್ಟೆರ್‌ -ಮನ್ನಿಕಟ್ಟಿ-346.46 -ಬೆನಕಟ್ಟಿ-296.62 ಹೆಕ್ಟೆರ್ – ಶಿರೂರು-687.84 ಹೆಕ್ಟೆರ್‌ , ತಿಮ್ಮಾಪೂರು -85.82 ಹೆಕ್ಟೆರ್‌ ,ಅಚಲಾಪೂರ-53.22 ಹೆಕ್ಟೆರ್‌ ,ಅಂದರೆ ಒಟ್ಟು 14 ಗ್ರಾಮಗಳ 8390 ಹೆಕ್ಟೆರ್‌ ಅಂದರೆ 21000 ಎಕರೆ ನೀರಾವರಿಗೆ ಒಳಪಡಲಿದೆ ಈ ಯೋಜನೆಗೆ 1.563 ಟಿ.ಎಮ್.ಸಿ.ನೀರು ಅಂಚಿಕೆ ಮಾಡಲಾಗುತ್ತದೆ.

ಬಾಗಲಕೋಟೆ ತಾಲ್ಲೂಕಿನ ಬಹುತೇಕ ಗ್ರಾಮಗಳ ಜಮೀನುಗಳಲ್ಲಿ ಘಟಪ್ರಭಾ ಬಲದಂಡೆ ಕಾಲೂವೆ ನಿರ್ಮಾಣವಾಗಿ ಎರಡುವರೆ ದಶಕಗಳು ಕಳಿದಿವೆ ದುರಂತ ಎಂದರೆ ಜಲಕಾಣದೇ ಇರುವ ಕಾಲುವೆಗಳು. 2004 ರಲ್ಲಿ ಕಾಲುವೆಗಳು ನಿರ್ಮಾಣಗೊಂಡಿದ್ದರೂ ಕಾಲುವೆಯ -182.560 ಕಿ.ಮೀ ದಿಂದಾ 199-093 ವರೆಗೆ ಅಚ್ಚು ಪ್ರದೇಶ ನೀರಾವರಿಯಿಂದ ವಂಚಿತವಾಗಿರುವದು ಇದಕ್ಕೆ ರೈತಾಪಿ ವರ್ಗ ಆಕ್ರೋಶಕ್ಕೆ ಕಾರಣವಾಯಿತು. ಬಾಗಲಕೋಟೆ ವಿತರಣಾ ಕಾಲುವೆ -ಬಿ ಐ -34-180.386 ಕಿ.ಮಿ ದಿಂದಾ ಇಂಗಳಗಿ ವಿತರಣಾ ಕಾಲುವೆ ಬಿ.ಐ-37-199.093 ಕಿ.ಮಿ ವರೆಗಿನ ಕಾಲುವೆಗೆ ನೀರು ಹರಿಸಲಾಗುತ್ತದೆ. ಮಲ್ಲಾಪೂರ ಗ್ರಾಮದ ಘಟಪ್ರಭಾ ಹಿನ್ನೀರು ಬಳಿ ಜಾಕ್‌ವೆಲ್‌ ನಿರ್ಮಿಸಲಾಗುತ್ತದೆ. 243 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಇದರಿಂದ ಬದಾಮಿ ತಾಲ್ಲೂಕಿನ -ಲಿಂಗಾಪೂರ , ಹಿರೇಬೂದಿಹಾಳ , & ಬಾಗಲಕೋಟೆ ತಾಲ್ಲೂಕಿನ ಬೆವಿನಮಟ್ಟಿ , ಮಲ್ಲಾಪೂರ, ಶಿರೂರು, ಹೊನ್ನಾನಾಯಕಕಟ್ಟಿ , ಬೆನಕಟ್ಟಿ, ಕಮತಿಗಿ , ಶಿಗಿಕೇರಿ, ನೀಲಾನಗರ , ಮುಚಖಂಡಿ , ಬಾಗಲಕೋಟೆ ಗ್ರಾಮಿಣ ಪ್ರದೇಶ ಸೇರಿ ಒಟ್ಟು 14 ಗ್ರಾಮಗಳಿಗೆ 10.224 ಹೆಕ್ಟೆರ್‌ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗುತ್ತದೆ ಎಂದು ಮಾಜಿ ಶಾಸಕರಾದ ಡಾ|| ವ್ಹಿ.ಸಿ. ಚರಂತಿಮಠ ಅವರು ರೈತಾಪಿ ವರ್ಗಕ್ಕೆ ಪತ್ರಿಕೆಯ ಮುಖಾಂತರ ಶಾಸಕರಿದ್ದಾಗ ಪ್ರಸಿದ್ಧ ಪಡಿಸಿದ್ದರು.ಇದರ ಜೊತೆಗೆ ಹಿನ್ನೀರು ಇದ್ದರೂ ಹಾಗೂ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣವಾಗಿ 20 ವರ್ಷ ಕಳೆದರು ಬಾಗಲಕೋಟೆ ತಾಲ್ಲೂಕಿನ ಅನೇಕ ಗ್ರಾಮಗಳು ನೀರಾವರಿಗೆ ಒಳಪಟ್ಟಿರಲಿಲ್ಲ ಶಿರೂರು, ಭಗವತಿ ಏತನೀರಾವರಿ ಯೋಜನೆ ಮೂಲಕ ಅಂದಾಜು 50 ಸಾವಿರ ಎಕರೆ ನೀರಾವರಿ ಒಳಪಡಿಸಲು ಸಂಪುಟ ಸಭೆ ಸಮ್ಮತಿಸಿದೆ ಕೆಲವೇ ತಿಂಗಳಲ್ಲಿ ಟೆಂಟರ ಪ್ರಕ್ರಿಯೆ ಮುಗಿದು ರಾಜ್ಯದ ಮುಖ್ಯಮಂತ್ತಿಗಳಿಂದ ಅಡಿಗಲ್ಲು ಪೂಜೆ ಮಾಡಿಸಿ ಕಾಮಗಾರಿ ಪ್ರಾರಂಭಿಸಲಾಗುವದೆಂದು ಬಾಗಲಕೋಟೆ ಮತಕ್ಷೇತ್ರದ ರೈತಾಪಿ ವರ್ಗಕ್ಕೆ ಪತ್ರಿಕೆಗಳ ಮುಖಾಂತರ ಪ್ರಸಿದ್ದಪಡಿಸಿರುವದು ಸತ್ಯ .ಮಾಜಿ ಶಾಸಕರಾದ ಡಾ|| ವ್ಹಿ. ಸಿ. ಚರಂತಿಮಠ ಅವರಿಗೆ ಬಾಗಲಕೋಟೆ ತಾಲ್ಲೂಕಿನ ರೈತಾಪಿ ವರ್ಗ ತಮ್ಮ ಮೇಲೆ ಅಪಾರವಾದ ಅಭಿಮಾನ ಹಾಗೂ ಗೌರವ ವಿರುವದರಿಂದ ತಾವು ರೈತಾಪಿ ವರ್ಗದ ಪರ ಅಪಾರವಾದ ಕಾಳಜಿಯಿಂದ ಭಗವತಿ, ಶಿರೂರು ಏತ ನೀರಾವರಿಗೆ ಹೋರಾಟ ಮಾಡಿ 589 ಕೋಟಿ ವೆಚ್ಚದ ಕಾಮಾಗಾರಿ ತರುವಲ್ಲಿ ಸಫಲವಾಗಿದ್ದು ಆದರೆ ವಿಧಿಯ ಆಟ ತಾವು 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಪರಭವ ಗೊಂಡಿರಿ ಆದರೆ ನಿಮ್ಮ ಛಲ , ನಿಮ್ಮ ರೈತಾಪಿ ವರ್ಗಕ್ಕೆ ಇರುವ ಕಾಳಜಿ ರೈತಾಪಿ ವರ್ಗ ಮರೆಯುದಿಲ್ಲ ಎಂಬ ಭಾವನೆ ಎಲ್ಲರಲ್ಲೂ ಇದೆ ಆದರೆ ತಾವು ತಂದ ಯೋಜನೆಯು ಯಾವ ಹಂತದಲ್ಲಿ ಪ್ರಕ್ರಿಯಲ್ಲಿ ಇದೆಯೋ ಅಥಾವ ನಿಷ್ಕೀಯವಾಗಿದೆಯೋ ಎಂಬುವುದನ್ನು ಬಾಗಲಕೋಟೆ ಮತಕ್ಷೇತ್ರದ ರೈತಾಪಿ ವರ್ಗಕ್ಕೆ ಯಾವ ರೀತಿಯಲ್ಲಿ ಸಂದೇಶವನ್ನು ನೀಡುತ್ತಿರುವರೊ ಅದು ರೈತಾಪಿ ವರ್ಗಕ್ಕೆ ಅವಶ್ಯಕತೆ ಇರುವದರಿಂದ ಮತಕ್ಷೇತ್ರದ ರೈತಾಪಿ ವರ್ಗದವರ ಆಗ್ರಾಹವಾಗಿದೆ ಇದಕ್ಕೆ ಕಾದುನೊಡಬೇಕೆಂದಾ ಬಾಗಲಕೋಟೆ ಮತಕ್ಷೇತ್ರ ರೈತಾಪಿ ವರ್ಗೇಶ್ವರಾ.

ಮಾಹಾಂತೇಶ.ಎಸ್.‌ ಜಿಗಳೂರ ಅಧ್ಯಕ್ಷರು ಪ್ರೆಸ್ ಕ್ಲಬ್‌ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button