ಜೆಡಿಎಸ್ ಪಕ್ಷ ಮತ್ತು ರೈತ ಮುಖಂಡರು ಜೆಸ್ಕಾಂ ಕಚೇರಿಗೆ ಮುತ್ತಿಗೆ
ಕೊಟ್ಟೂರು ಜೂನ್ 25

ಪಟ್ಟಣದ ಜೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಶನಿವಾರ ಸರ್ಕಾರದ ವಿರುದ್ಧ ಜನತಾದಳ ಜಾತ್ಯಾತೀತ ಪಕ್ಷ ಹಾಗೂ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ನಂತರ ಎಇ ಅಧಿಕಾರಿಯಾಗಿ ಚೇತನ್ ಕುಮಾರ್ ಗೆ ಮನವಿ ಪತ್ರ ಸಲ್ಲಿಸಿ ನಂತರ ಮಾತನಾಡಿದ ಜೆಡಿಎಸ್ ಮುಖಂಡರಾದ ಗೋಪಿನಾಥ್ ಸರ್ಕಾರ ವಿದ್ಯುತ್ ಬೆಲೆ ಏರಿಕೆಯಿಂದ ಸಣ್ಣಪುಟ್ಟ ಅಂಗಡಿಯ ಹಾಗೂ ಸಣ್ಣ ಉದ್ಯಮಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಕೂಡಲೇ ಸರ್ಕಾರ ವಿದ್ಯುತ್ ದರವನ್ನು ಕಡಿಮೆಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತದೆ ಎಂದು ಆಗ್ರಹಿಸಿದರು. ಗ್ರಾಹಕರಿಗೆ ಬಿಲ್ಲಿನ ಬಗ್ಗೆ ಸರಿಯಾಗಿ ಮನ ವರಿಕೆ ಮಾಡಿ ನಿಮ್ಮ ಸಿಬ್ಬಂದಿಯವರಿಗೆ ತಿಳಿಸಿ ಎಂದು ಹೇಳಿದರು.ಇಲ್ಲವಾದಲ್ಲಿ ನಿಮ್ಮ ಕಛೇರಿಗೆ ಮುಂದಿನ ದಿನಗಳಲ್ಲಿ ಮುತ್ತಿಗೆ ಹಾಕಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಜೈ ಪ್ರಕಾಶ್ ನಾಯ್ಕ್ ಮುನ್ನೆಚ್ಚರಿಕೆ ನೀಡಿದರು.ಈ ಪ್ರತಿಭಟನೆಯಲ್ಲಿ ಸಿಪಿಐ ವೆಂಕಟಸ್ವಾಮಿ ಪಿಎಸ್ಐ ವಿಜಯ ಕೃಷ್ಣ .ಜಾತ್ಯತೀತ ಜನತಾದಳ ಮುಖಂಡ ಗೋಪಿ, ಭರಮ ರೆಡ್ಡಿ, ದೇವೇಂದ್ರ ಗೌಡ ಹಾಗೂ ಎನ್ ಭರಮಣ್ಣ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರು ಆಟೋ ಚಾಲಕ ಸಂಘದ ಅಧ್ಯಕ್ಷ ಶಿವಯ್ಯ ದೊಡ್ ವೀರಪ್ಪ , ಬಿ.ಎಸ್. ಆರ್. ಮೂಗಣ್ಣ , ಸಂಘದ .ಪಿ ಮಂಜುನಾಥ,ಹೊನ್ನು ರಸಾಬ್,ಕೊಟ್ರಯ್ಯಸ್ವಾಮಿ ಇನ್ನೂ ಮುಂತಾದವರು ನೆರೆದಿದ್ದರು.
ತಾಲೂಕ ವರದಿಗಾರರು:ಪ್ರದೀಪ್ ಕುಮಾರ್ ಸಿ ಕೊಟ್ಟೂರು